ಕೂಗು ನಿಮ್ಮದು ಧ್ವನಿ ನಮ್ಮದು

ಬೈಡನ್ ಭಾಷಣದ ನಂತರ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆದ ಇರಾನಿಯನ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾ ದಾಳಿ ವಿರುದ್ಧ ಉಕ್ರೇನ್ ಅವರನ್ನು ಬೆಂಬಲಿಸಿ ಮಾತನಾಡುವಾಗ ಉಕ್ರೇನ್‍ನ ಜನರನ್ನು ತಪ್ಪಾಗಿ ಇರಾನ್‍ನ ಜನರು ಎಂದು ಉಲ್ಲೇಖಿಸಿದ್ರು. ಈ ವೀಡಿಯೊ ಇದೀಗ ಟ್ವಿಟ್ಟರ್‌ನಲ್ಲಿ ಬಾರಿ ಟ್ರೆಂಡಿಂಗ್ ಇದ್ದು. ಪುಟಿನ್ ಕೀವ್‍ನ್ನು ಟ್ಯಾಂಕ್‍ಗಳೊಂದಿಗೆ ಸುತ್ತಬಹುದು. ಆದ್ರೆ ಅವರು ಎಂದಿಗೂ ಇರಾನ್ ಜನರ ಮನಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಬೈಡನ್ ಹೇಳಿದ್ರು.

ಇದು ರಷ್ಯಾದ ಆಕ್ರಮಣದ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸುವ ಭಾಷಣವಾಗಿತ್ತು. ಈ ಹೇಳಿಕೆಯಲ್ಲಿ ಉಕ್ರೇನ್‍ನ ಜನ ಎನ್ನುವ ಬದಲು ಬೈಡನ್ ಇರಾನ್‍ನ ಜನರೆಂದು ಉಲ್ಲೇಖಿಸಿದ್ದಾರೆ. ಈ ವೀಡಿಯೋ ಈಗ ಟ್ವಿಟ್ಟರ್‌ನಲ್ಲಿ ಟ್ರೇಂಡಿಂಗ್ ಆಗಿದೆ. ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಇರಾನಿಯನ್ ಹ್ಯಾಶ್‍ಟ್ಯಾಗ್ ಸದ್ದು ಮಾಡುತ್ತಿದೆ.

ಬೈಡನ್ ಭಾಷಣ ಮಾಡುವಾಗ ಇದೇ ಮೊದಲ ಬಾರಿಗೆ ಎಡವಟ್ಟು ಮಾಡಿಕೊಂಡಿಲ್ಲ. ಈ ರೀತಿ ಬಹಳ ಸಲ ಆಗಿದೆ. ಕಳೆದ ವರ್ಷ ಅವರು ತಮ್ಮ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೆ ಹ್ಯಾರಿಸ್ ಎಂದು ತಪ್ಪಾಗಿ ಕರೆದಿದ್ರು.

error: Content is protected !!