ಕೂಗು ನಿಮ್ಮದು ಧ್ವನಿ ನಮ್ಮದು

ಮೀಸಲಾತಿ ಕೊಟ್ರೆ ಮಠದಲ್ಲಿ ಬೊಮ್ಮಾಯಿ ಪೋಟೋ ಹಾಕಿ ಖಾಯಂ ಗೌರವ ಸಲ್ಲಿಸುತ್ತೇವೆ: ಬಸವ ಜಯ ಮೃತ್ಯುಂಜಯ ಶ್ರೀ

ಚಿತ್ರದುರ್ಗ: ಪಂಚಮಸಾಲಿಗಳಿಗೆ ಮೀಸಲಾತಿ ಕೊಟ್ರೆ ಮಠದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪೋಟೋ ಹಾಕಿ ಖಾಯಂ ಗೌರವ ಕೊಡುತ್ತೇವೆ ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ರು. ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿ ನಡೆದ ಪ್ರತಿಜ್ಞಾ ಪಂಚಾಯತ್ ಅಭಿಯಾನದಲ್ಲಿ ಮಾತನಾಡಿರುವ ಸ್ವಾಮಿಜಿ, ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ವಿಚಾರದಲ್ಲಿ ಅನ್ಯ ಸಮುದಾಯದವರು ಯಾರೂ ವಿರೋಧವನ್ನು ಮಾಡುತ್ತಿಲ್ಲ.

ಆದ್ರೆ ನಮ್ಮಲ್ಲಿ ಇದ್ದಂತವರೆ ಹೊಟ್ಟೆಕಿಚ್ಚಿನಿಂದ, ಅಸೂಯೆಯಿಂದ ನಮ್ಮ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ರು.
ಮುಖ್ಯಮಂತ್ರಿ ಬೊಮ್ಮಾಯಿ ಹತ್ತಿರ ಹೋಗಿ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಬೇಡಿ. ಈಗ ಅವರಿಗೆ ೨ಎ ಮೀಸಲಾತಿ ಕೊಟ್ರೆ ಬಸವರಾಜ್ ಪಾಟೀಲ್ ಯತ್ನಾಳ್ ಹೆಸರು ಬರುತ್ತೆ ಎಂದು ಪಿತೂರಿ ನಡೆಸುತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿಗೆ ಜಯ ಮೃತ್ಯುಂಜಯ ಸ್ವಾಮೀಜಿ ಟಾಂಗ್ ಕೊಟ್ಟಿದ್ದಾರೆ.

ರಾಜಕೀಯ ವಿಚಾರವಾಗಿ ನೀವು ಯಾವ ನಾಯಕರನ್ನಾದ್ರು ಆಯ್ಕೆ ಮಾಡಿ ಆದ್ರೆ ಸಮಾಜ ಮತ್ತು ಮೀಸಲಾತಿ ವಿಚಾರದಲ್ಲಿ ನಮ್ಮೊಂದಿಗೆ ಪ್ರಾಮಾಣಿಕವಾಗಿ ಇರುವವರೇ ನಮ್ಮ ನಾಯಕರು ಎಂದು ಸ್ವಾಮಿಜಿ ಹೇಳಿದರು. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ರೆ ಮುಖ್ಯಮಂತ್ರಿ ಬೊಮ್ಮಾಯಿ ಹೆಸರು ಬರುತ್ತೇ ಹೊರೆತು, ಸ್ವಾಮೀಜಿಗೆ ಮತ್ತು ಯತ್ನಾಳ್ ಗೆ ಅಲ್ಲ. ಮೀಸಲಾತಿ ನೀಡಿದ್ರೆ ಮಠದಲ್ಲಿ ಸಿಎಂ ಪೊಟೋ ಹಾಕುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಹೇಳಿದ್ದೆವು

ಇಂತಹ ಅವಕಾಶವನ್ನು ಯಡಿಯೂರಪ್ಪ ಕಳೆದುಕೊಂಡ್ರು. ಹಾಗಾಗಿ ಈಗ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈ ಅವಕಾಶ ಸಿಕ್ಕಿದೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಟ್ರೆ ಖಾಯಂ ಆಗಿ ನಾವು ನಮ್ಮ ಮಠದಲ್ಲಿ ಸಿಎಂ ಬೊಮ್ಮಾಯಿ ಫೋಟೋ ಹಾಕಿ ಗೌರವ ಕೊಡುತ್ತೇವೆ ಎಂದು ಸ್ವಾಮಿಜಿ ಹೇಳಿದರು.

ಪಂಚಮಸಾಲಿ ಸಮಾಜಕ್ಕಾಗಿ ಶಾಸಕ ಸ್ಥಾನ ಹೋದ್ರು ಪರವಾಗಿಲ್ಲ ಎಂದು ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿ.ಸಿ.ಪಾಟೀಲ್ ಹೋರಾಟ ಮಾಡಿದ್ದಾರೆ. ಆದ್ರೆ ಕೆಲವರು ಒಳ ಒಳಗೆ ದ್ರೋಹ ಬಗೆಯುತಿದ್ದಾರೆ ಎಂದು ಅಸಮಧಾನಗೊಂಡ ಸ್ವಾಮೀಜಿ, ಮೀಸಲಾತಿ ವಿರೋಧಿಗಳಿಗೆ ಬಹಿರಂಗವಾಗಿ ಸವಾಲು ಹಾಕಿದ್ರು. ಜಯ ಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ಹೋರಾಟ ಮಾಡಿ ರಾಷ್ಟ್ರಾದ್ಯಂತ ಹೆಸರಾದರೆಂಬ ಅಸೂಯೆಯಿಂದ, ಹೊಟ್ಟೆಕಿಚ್ಚಿನಿಂದ ಕೆಲವರು ಮಾತನಾಡುತ್ತಿದ್ದಾರೆ. ನಾನು ಇಂದೆ ಕೂಡಲಸಂಗಮ ಪೀಠ ಬಿಟ್ಟು ಹೋಗುತ್ತೇನೆ. ನೀವು ಯಾರಾದ್ರು ಸ್ವಾಮೀಜಿಗಳ ಜೊತೆ ನೇತೃತ್ವ ವಹಿಸಿಕೊಳ್ಳಿ. ನಾನು ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ, ನಿಮ್ಮ ಹೋರಾಟಕ್ಕೆ ಬೆಂಬಲ ಕೊಡುತ್ತೇನೆ. ನಾವು ಕಷ್ಟ ಪಟ್ಟು ಹೋರಾಟ ಮಾಡುತ್ತಿದ್ರೆ, ಕೆಲವರು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಾನು ಶ್ರೀ ಮಠ ಕಟ್ಟಲು ಅಥವಾ ನನ್ನ ವೈಯಕ್ತಿಕ ಬೆಳವಣಿಗೆಗಾಗಿ ಹೋರಾಟ ಮಾಡುತ್ತಿಲ್ಲ. ಇಂತಹ ದೊಡ್ಡ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಜಯ ಮೃತುಂಜಯ ಸ್ವಾಮಿಜಿ ಕೆಂಡ ಕಾರಿದ್ರು.

error: Content is protected !!