ಕೂಗು ನಿಮ್ಮದು ಧ್ವನಿ ನಮ್ಮದು

ಜೈ ಶ್ರೀರಾಮ್ ಅನ್ನುವವರು ರಾಕ್ಷಸರು: ರಶೀದ್ ಅಲ್ವಿ

ನವದೆಹಲಿ: ರಾಮರಾಜ್ಯ, ಜೈ ಶ್ರೀರಾಮ್ ಘೋಷಣೆ ಕೂಗುವವರು ರಾಕ್ಷಸರು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ರು. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ರಶೀದ್ ಅಲ್ವಿ, ಈ ದೇಶದಲ್ಲಿ ರಾಮರಾಜ್ಯ ಆಗಬೇಕು ಎನ್ನುವುದು ನಮಗೂ ಇದೆ. ಮೇಕೆಗಳು ಹಾಗೂ ಸಿಂಹಗಳು ನೀರು ಕುಡಿಯುವ ರಾಜ್ಯದಲ್ಲಿ ದ್ವೇಷ ಹೇಗೆ ಉಂಟಾಗುತ್ತದೆ? ಈ ದೇಶದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕಜನರನ್ನು ದಾರಿ ತಪ್ಪಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದ್ರು.

ರಾಮರಾಜ್ಯ ಇದೆ ಎಂದು ಹೇಳುತ್ತೇವೆ. ಆದ್ರೆ ರಾಮರಾಜ್ಯ ಹೇಗೆ ಇರಬೇಕು? ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರು ರಾಮಾಯಣದ ಕಾಲನೇಮಿ ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ರು. ಅಲ್ವಿ ಹೇಳಿಕೆಯ ವೀಡಿಯೋವನ್ನು ಟ್ವೀಟ್ ಮಾಡಿರುವ BJP ವಕ್ತಾರ ಅಮಿತ್ ಮಾಳವಿಯಾ, ಸಲ್ಮಾನ್ ಖುರ್ಷಿದ್ ಬಳಿಕ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಜೈ ಶ್ರೀರಾಮ್ ಹೇಳುವವರನ್ನು ನಿಶಾಚರರು ಎಂದು ಕರೆಯುತ್ತಾರೆ. ಭಕ್ತರ ಬಗ್ಗೆ ಕಾಂಗ್ರೆಸ್ಸಿನ ಚಿಂತನೆಗಳಲ್ಲಿ ಎಷ್ಟು ವಿಷ ಬೆರೆತಿದೆ ಎಂದು ಆಕ್ರೋಶವನ್ನು ಜಾಲತಾಣದ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ರು.

error: Content is protected !!