ಹುಬ್ಬಳ್ಳಿ: ಇಂದು ಜಗದೀಶ್ ಶೆಟ್ಟರ್ ಸೋಲಿನ ಬಳಿಕ ಆತ್ಮವಲೋಕನ ಸಭೆಯನ್ನ ಕರೆದಿದ್ದು, ಅಲ್ಲಿ ಮಾತನಾಡಿದ ಅವರು ‘ 3 ಗ್ಯಾರಂಟಿ ಈಡೇರಿಸಿದರೂ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಬರತ್ತೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚನೆ ಮಾಡಿದೆ. ಕರ್ನಾಟಕದಲ್ಲಿ 135 ಸೀಟ್ ಪಡೆದು ಸರ್ಕಾರ ಬರತ್ತೆ ಎಂದು ದಿಲ್ಲಿ ನಾಯಕರು ನೀರಿಕ್ಷೆ ಮಾಡಿರಲಿಲ್ಲ. ಪರೋಕ್ಷವಾಗಿ ಮೋದಿ, ಅಮಿತ್ ಶಾ ವಿರುದ್ದ ಶೆಟ್ಟರ್ ವಾಗ್ದಾಳಿ ನಡೆಸಿದರು. ಇನ್ನು ಜನ ಮನಸ್ಸು ಮಾಡಿದ್ರೆ, ಬದಲಾವಣೆ ತರಬಹುದು ಅನ್ನೋದಕ್ಕೆ ಕರ್ನಾಟಕದ ಫಲಿತಾಂಶ ಸಾಕ್ಷಿಯಾಗಿದ್ದು, ನಾನು ಪ್ರಚಾರಕ್ಕೆ ಹೋದ ಒಂದು ಕಡೆ ಬಿಟ್ಟು ಎಲ್ಲ ಕಡೆ ಕಾಂಗ್ರೆಸ್ ಗೆದ್ದಿದೆ. ನರಗುಂದದಲ್ಲಿ ಮಾತ್ರ ಕಾಂಗ್ರೆಸ್ ಸೋತಿದೆ.
ಯಾದಗಿರಿಯಿಂದ ಬಂದ ಜನ ನಾವು ಕಾಯಂ ಬಿಜೆಪಿಗೆ ವೋಟ್ ಹಾಕ್ತೀವಿ, ಆದರೆ ಈ ಬಾರಿ ನಾಲ್ಕರಲ್ಲಿ ಮೂರು ಕಾಂಗ್ರೆಸ್ ಗೆಲ್ಲಿಸೀವಿ ಎಂದು ಬಂದು ಹೇಳಿದ್ರು ಎಂದರು
ಚುನಾವಣೆಯಲ್ಲಿ ಸೋಲು ಗೆಲವು ಸಹಜ, ನಾನು ವಯಕ್ತಿಕವಾಗಿ ಸೋತಿಲ್ಲ. ಮೂರು ಸೋಲು ಕಂಡ ಕುಟುಂಬ ನಮ್ಮದು, ಇದು ಹೊಸದಲ್ಲ. ಕೆಲವರು ಶೆಟ್ಟರ್ ಡಿಪ್ರೆಶನ್ಗೆ ಹೋಗ್ತಾರೆ ಎಂದು ತಿಳಿದುಕೊಂಡಿದ್ರು. ನಾನು ಡಿಪ್ರೆಶನ್ಗೆ ಹೋಗಲ್ಲ, ಬೇರೆಯವರನ್ನ ಡಿಪ್ರೆಶನ್ ಮಾಡ್ತೀನಿ. ಇವಾಗ ಯಾರು ಡಿಪ್ರೆಶನ್ಗೆ ಹೋಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಪರೋಕ್ಷವಾಗಿ ಜೋಶಿ ವಿರುದ್ದ ಶೆಟ್ಟರ್ ಗರಂ ಆಗಿದ್ದು, ದೇವೆಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ, ಈಶ್ವರಪ್ಪ ಎಲ್ಲರೂ ಸೋತಿದ್ರು. ಸೋತಿದಾರೆ ಅಂದ್ರೆ ಕಡೆಗಣಸೋಕೆ ಸಾಧ್ಯ ಇಲ್ಲ. ಸಿದ್ದರಾಮಯ್ಯ ಸೋತ ಬಳಿಕ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ಸೋತ ಮೇಲೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಸೋತ ಮೇಲೆ ಪುಟಿದೇಳಬೇಕಿದೆ. ಮುಂದೆ ಬಹಳ ಚುನಾವಣೆ ಇದೆ. ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಬಹಳ ಬಲಿಷ್ಠವಾಗಿದೆ. ಸೋಲಿನಿಂದ ನಾನು ಎದೆಗುಂದೋ ಪ್ರಶ್ನೆ ಇಲ್ಲ. ಸೋಲೆ ಗೆಲುವಿನ ಮೆಟ್ಟಿಲು. 2024 ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಹೋರಾಟ ಆರಂಭವಾಗತ್ತೆ ಎಂದರು.
ಕಳೆದ ಬಾರಿ ಲೋಕಸಭೆಯಲ್ಲಿ 25 ಗೆದ್ದಿದ್ದಾರೆ, ಅದು ಈ ಬಾರಿ ಉಲ್ಟಾ ಆಗಬೇಕು. ಕರ್ನಾಟಕದ ಬದಲಾವಣೆ ಇಡೀ ರಾಷ್ಟ್ರ ಚರ್ಚೆ ಮಾಡ್ತಿದೆ. ಅಧಿಕಾರ ಯಾರಿಗೂ ಶಾಶ್ಚತ ಅಲ್ಲ. ಜನ ಮನಸ್ಸು ಮಾಡಿದ್ರೆ ಏನ ಬೇಕಾದ್ರೂ ಆಗಬಹುದು. ನನ್ನ ಸೋಲಿಗೆ ಹಣದ ಪ್ರಭಾವ ಕಾರಣ ಎಂದಿದ್ದು, ಬಿಜೆಪಿಯವರು ಏನ ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಒತ್ತಡ ತಂತ್ರದಿಂದ ನನ್ನ ಸೋಲಿಸಿದ್ರು. ಸಣ್ಣ ಸಣ್ಣ ವ್ಯಕ್ತಿಗಳ ಮೇಲೆ IT ರೇಡ್ ಮಾಡಿಸಿದ್ರು, ಮನೆ ಮನೆಗೆ ಹೋಗಿ ಬ್ರೇನ್ ವಾಶ್ ಮಾಡಿದ್ರು. ನಾನು ವೈಯಕ್ತಿಕವಾಗಿ ಚುನಾವಣೆ ಮಾಡಿಲ್ಲ. ಪಕ್ಷ ಚುನಾವಣೆ ಮಾಡಿತ್ತು ಎಂದರು.
ಜಗದೀಶ್ ಶೆಟ್ಟರ್ ಎಂದಿಗೂ ಕಾಂಗ್ರೆಸ್ ಸೇರೋ ಕಲ್ಪನೆ ಇರಲಿಲ್ಲ. ಹೀಗಾಗಿ ಜನರು ಬಿಜೆಪಿಗೆ ವೋಟ್ ಹಾಕಿರಬಹುದು. ನನಗೆ ಈ ಬಾರಿ ಸಮಯ ಇರಲಿಲ್ಲ. ಒತ್ತಡದಲ್ಲಿ ಕೆಲಸ ಮಾಡಿದ್ವಿ. ಜನರ ಮೈಂಡ್ಸೆಟ್ ಬದಲಾವಣೆ ಮಾಡಲು ಆಗಲಿಲ್ಲ. ನಾನು ಸೋತಿದ್ದೇನೆ ಎಂದು ಯಾರ ಮೇಲೂ ಬ್ಲೇಮ್ ಮಾಡಲ್ಲ. ಸೆಂಟ್ರಲ್ ಕ್ಷೇತ್ರ ಕಾಂಗ್ರೆಸ್ ಕೋಟೆ ಮಾಡಬೇಕಿದೆ. ಮುಂದಿನ ಚುನಾವಣೆ ಅಗ್ನಿ ಪರೀಕ್ಷೆ ಎಂದು ಎದುರಿಸೋಣ. ಇನ್ನು ಈ ಮಧ್ಯೆ ಗ್ಯಾರಂಟಿ ಬಗ್ಗೆ ಬಹಳ ಚರ್ಚೆ ನಡೀತಿದೆ. ಈ ತರಹ ಎಲ್ಲೂ ಗ್ಯಾರಂಟಿ ಕೊಟ್ಟಿರಲಿಲ್ಲ. ವಿರೋಧ ಪಕ್ಷಗಳು ಇವಾಗ ಗ್ಯಾರಂಟಿ ಸಾಧ್ಯ ಇಲ್ಲ ಅಂತಿದ್ದಾರೆ. ಇದನ್ನು ನಿಭಾಯಿಸೋ ಶಕ್ತಿ ನಮ್ಮ ಮುಖ್ಯಮಂತ್ರಿಗಳಿಗಿದೆ. ಅವರಿಗೆ ಜಾರಿ ಮಾಡೋಕೆ ಸಮಯ ಬೇಕಲ್ಲ. ಹೊಸ ಬಜೆಟ್ ಮಂಡನೆ ಮಾಡಬೇಕು. ಸಿದ್ದರಾಮಯ್ಯಗೆ ಸಮಯ ಬೇಕು ಎಂದರು.
ಮೂರು ಗ್ಯಾರಂಟಿ ಈಡೇರಿಸಿದ್ರು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಬರತ್ತೆ
ಐದು ಗ್ಯಾರಂಟಿಯಲ್ಲಿ ಮೂರು ಈಡೇರಿಸಿದ್ರು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಬರತ್ತೆ. ಗ್ಯಾರಂಟಿ ಅನುಷ್ಠಾನ ಕಾಂಗ್ರೆಸ್ ಸರ್ಕಾರ ಮಾಡತ್ತೆ. ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರತ್ತೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದ ಬಳಿಕ ಬದ್ದನಾಗಿದ್ದೇನೆ. ಇಡೀ ರಾಜ್ಯದ ತುಂಬಾ ನಾನು ಪ್ರಚಾರ ಮಾಡ್ತೀನಿ. ನಮ್ಮನ್ನ ಉಪಯೋಗಿಸಿ ಎಂದು ನಾನು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ ಎಂದರು.