ಕಲಬುರಗಿ: ರೈಲಿಗೆ ತಲೆಕೊಟ್ಟು ಸರ್ಕಲ್ ಇನ್ಸ್ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಬಿದ್ದಾಪುರ ಕಾಲೋನಿ ಬಳಿ ನಡೆದಿದೆ.
ಬಾಪುಗೌಡ (45) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಆಗಿದ್ದು, ಪೊಲೀಸ್ ಆಯುಕ್ತಾಲಯದ ವೈರಲೆಸ್ ವಿಭಾಗದಲ್ಲಿ ಕಾರ್ಯ ನಿತ್ವಹಿಸುತ್ತಿದ್ರು. ಸಿಪಿಐ ಬಾಪುಗೌಡ ಕೆಲ ದಿನಗಳಿಂದ ಮೌತ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಬಾಪುಗೌಡ ಕ್ಯಾನ್ಸರ್ ಕಾಯಿಲೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ CPI, ವಾಡಿ ರೈಲ್ವೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.