ಕೂಗು ನಿಮ್ಮದು ಧ್ವನಿ ನಮ್ಮದು

ಪುಣೆಯಲ್ಲಿ ಎಂಇಎಸ್ ಪುಂಡಾಟ, ರಾಜ್ಯದ ಬಸ್ಸುಗಳ ಗಾಜು ಪುಡಿ, ಚಾಲಕ, ನಿರ್ವಾಹಕರಿಗೆ ಜೀವಬೆದರಿಕೆ

ಯಾದಗಿರಿ: ರಾಜ್ಯದ ಬಸ್ ಗಳ ಮೇಲೆ ಎಂಇಎಸ್ ಪುಂಡಾಟಿಕೆ ನಡೆಸಿದೆ. ಮಹಾರಾಷ್ಟ್ರಕ್ಕೆ ತೆರಳಿದ ರಾಜ್ಯದ ಬಸ್ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಬಸ್ ನ ಗ್ಲಾಸ್ ಜಖಂ ಮಾಡಿ ಪುಂಡಾಟ ಮೇರೆದಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ಡಿಪೋಕ್ಕೆ ಸೇರಿದ ಬಸ್ ಗ್ಲಾಸ್ ಪುಡಿ ಪುಡಿ ಮಾಡಿದ ಎಂಇಎಸ್ ಪುಂಡರು, ಚಾಲಕ ಹಾಗೂ ನಿರ್ವಾಹಕರಿಗೆ ಜೀವ ಬೇದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದ ಪುಣೆ ಬಸ್ ನಿಲ್ದಾಣದಲ್ಲಿ ಎಂಇಎಸ್ ಕಾರ್ಯಕರ್ತರು ಈ ಪುಂಡಾಟ ನಡೆಸಿದ್ದು, ಕಲ್ಲು ತೂರಾಟ ಮಾಡಲು ಬಂದವರನ್ನು ತಡೆಯಲು ಹೋದ ಚಾಲಕ ನಿರ್ವಾಹಕರಿಗೆ ಜೀವಬೇದರಿಕೆ ಹಾಕಿದ್ದಾರೆ.

ಈ ಕುರಿತು ಪುಣೆಯ ಕಡಿಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀವ ಬೇದರಿಕೆಯಿಂದ ಯಾದಗಿರಿಗೆ ಬಸ್ ತೆಗೆದುಕೊಂಡು ಬರಲು ಕೂಡ ಚಾಲಕ, ನಿರ್ವಾಹಕರಿಗೆ ಆತಂಕ ಶುರುವಾಗಿದೆ.

error: Content is protected !!