ಕೂಗು ನಿಮ್ಮದು ಧ್ವನಿ ನಮ್ಮದು

ಪುನೀತ್ ಸರ್ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ: ಇಮ್ರಾನ್ ಸರ್ದಾರಿಯಾ

ಬೆಂಗಳೂರು: ಅಪ್ಪುಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ ಎಂದು ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಹೇಳಿದ್ರು. ಅಪ್ಪು ನಿಧನದ ಬಳಿಕ ಅಪ್ಪು ಅವರು ಇಲ್ಲ ಎಂಬುದನ್ನು ಯಾರಿಗೂ ಒಪ್ಪಿಕೊಳ್ಳಲು ಆಗುತ್ತಿಲ್ಲ. ಇವತ್ತು ಕಂಠೀರವ ಸ್ಟುಡಿಯೋಗೆ ಪುನೀತ್ ರಾಜ್‍ಕುಮಾರ್ ಸಮಾಧಿ ದರ್ಶನಕ್ಕೆಂದು ಬಂದಿದ್ದ ಇಮ್ರಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತಿಗೂ ಅಪ್ಪು ಸರ್ ನಿಧನರಾಗಿದ್ದಾರೆ ಎಂಬ ನಡುಕ ಇದೆ.

ಅಪ್ಪು ಅವರು ಇಲ್ಲ ಎಂಬುದನ್ನು ನಾನು ಇವತ್ತಿಗೂ, ಎಂದಿಗೂ ಒಪ್ಪಲ್ಲ. ಏಕೆಂದ್ರೆ ಅವರ ಜೊತೆ ನನ್ನ ಜರ್ನಿ ತುಂಬಾ ದೊಡ್ಡದಾಗಿದೆ. ಅವರೊಂದಿಗೆ ನನ್ನ ಒಡನಾಟ ಬಹಳ ದೊಡ್ಡದು ಎಂದು ನೆನೆದ್ರು. ಪುನೀತ್ ಜೊತೆಗಿದ್ದ ಯಾರನ್ನದರೂ ಕೇಳಿ ಅವರು ಎಂದೂ ಯಾರನ್ನೂ ಭೇದ ಭಾವ ಮಾಡಿಲ್ಲ. ಯಾರನ್ನು ಕೂಡಾ ಕೀಳಾಗಿ ನೋಡಿಲ್ಲ. ಅವರ ಬಗ್ಗೆ ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ. ಅಪ್ಪು ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ಅವರು ನಮ್ಮ ಒಳಗೆ ಮತ್ತು ನಮ್ಮ ಜೊತೆಗೆ ಇದ್ದೇ ಇರುತ್ತಾರೆ ಎಂದು ಇಮ್ರಾನ್ ಹೇಳಿದ್ರು.

error: Content is protected !!