ಕೂಗು ನಿಮ್ಮದು ಧ್ವನಿ ನಮ್ಮದು

ಬಿಎಸ್ ವೈ ಅವರಿಗೆ ಇವಾಗ ಮದ್ವೆ ಮಾಡಿದ್ರೂ 2 ಮಕ್ಕಳು ಮಾಡುವ ಶಕ್ತಿ ಇದೆ: ಇಬ್ರಾಹಿಂ

ಬೆಂಗಳೂರು: ಒತ್ತಡ ಹಾಕಿ ಬಿಎಸ್ ವೈ ಅವರಿಗೆ ರಾಜೀನಾಮೆಯನ್ನು ಕೋಡಿಸಿರುವುದು ಒಳ್ಳೆಯ ಸಂಪ್ರದಾಯವಲ್ಲೆಂದು ಕಾಂಗ್ರೆಸ್ ಮುಖಂಡ ಇಬ್ರಾಹಿಂ ಹೇಳಿದ್ರು. ಇನ್ನೂ ಕಾವೇರಿ ನಿವಾಸಕ್ಕೆ ಆಗಮಿಸಿ ಬಿ.ಎಸ್ ಯಡಿಯೂರಪ್ಪನವರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಾ ಏಕಿ ಪ್ರೇಜರ್ ಹಾಕಿ ರಾಜೀನಾಮೆಯನ್ನು ತೇಗೆದುಕೊಂಡಿರುವುದು ಒಳ್ಳೆಯ ಸಂಪ್ರದಾಯವಲ್ಲ. ಜೊತೆಗೆ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಲವಲವಿಕೆಯಿಂದ ಇದ್ದಾರೆ. ಇನ್ನೂ ಇವರು ನಮ್ಮ ಜಿಲ್ಲೆಯವರೇ ಎಂದಿದ್ದಾರೆ. ಇನ್ನೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಜೊತೆಗೆ ರಾಜ್ಯಪಾಲ ಹುದ್ದೆಯನ್ನು ನೀವು ಬೇಡವೆಂದು ಹೇಳಿದ್ದೀರಿ. ಜೊತೆಗೆ ಲೋಪದೋಷಗಳಿರಬಹುದು, ಆರೋಪ ಪ್ರತ್ಯಾರೋಪಗಳು ಇರಬಹುದು. ರಾಜ್ಯದ ಹಿತ ದೃಷ್ಟಿಯಿಂದ ಸ್ವಾಭಿಮಾನ ಕಾಪಾಡಿಕೊಳ್ಳುವುದು ಬಹುಮುಖ್ಯ ಎಂದ್ರು.

ಜೊತೆಗೆ ಬಿ.ಎಸ್ ಯಡಿಯೂರಪ್ಪನವರಿಗೆ ಈಗ ಮದುವೆ ಮಾಡಿದ್ರು ೨ ಮಕ್ಕಳು ಮಾಡುವ ಶಕ್ತಿ ಇದೆ ಎಂದಿದ್ದಾರೆ ಇಬ್ರಾಹಿಂ. ಇನ್ನೂ ಫುಲ್ ಆಕ್ಟಿವ್ ಆಗಿದ್ದಾರೆ. ಎಂದ್ರು ಇನ್ನೂ ಹಲವು ಲೋಪದೋಷಗಳು ಇರಬಹುದು. ಆದ್ರೆ, ರಾಜ್ಯದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯೇ ಅಲ್ಲವೇ ಅಲ್ಲ ಎಂದ್ರು. ಇನ್ನೂ ಮುಖ್ಯಮಂತ್ರಿ ಆಗಿದ್ದಾಗ ಬಿ.ಎಸ್ ಯಡಿಯೂರಪ್ಪನವರನ್ನು ನಾನು ಯಾವತ್ತೂ ಭೇಟಿ ಮಾಡಿರಲಿಲ್ಲ. ಮತ್ತು ನಮ್ಮ ಜಿಲ್ಲೆಯವರು, ಮಲೆನಾಡಿವರು ಎಂಬ ಕಾರಣಕ್ಕೆ ಬಂದಿದ್ದೇನೆ. ಜೊತೆಗೆ ಓರಿಜಿನಲ್ ಗಿರಾಕಿ ಹೋದ ಮೇಲೆ ಡೂಪ್ಲಿಕೇಟ್ ಗಿರಾಕಿ ಬಂದರೇನು ಎಂದು ನಾಯಕತ್ವ ಬದಲಾವಣೆ ಕುರಿತು ಇಬ್ರಾಹಿಂ ಅವರು ವ್ಯಂಗ್ಯ ಮಾಡಿದ್ದಾರೆ.

error: Content is protected !!