ಕೂಗು ನಿಮ್ಮದು ಧ್ವನಿ ನಮ್ಮದು

ನಾನು ತಪ್ಪು ಮಾಡಿದ್ದರೇ ಗಲ್ಲಿಗೇರಲು ಸಿದ್ದ, ಆ ಯುವತಿ ಯಾರಂತಲೇ ನನಗೆ ಗೊತ್ತಿಲ್ಲ: ಸಾಹುಕಾರ ರಮೇಶ್ ಜಾರಕಿಹೊಳಿ

ಬೆಂಗಳೂರು: ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಆ ವಿಡಿಯೋಗೂ, ಸಿಡಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಆ ಯುವತಿ ಯಾರು, ದೂರು ನೀಡಿರುವ ದಿನೇಶ್ ಕಲಹಳ್ಳಿ ಯಾರೂ ಅಂತಲೇ ನನಗೆ ಗೊತ್ತಿಲ್ಲ, ನಾನು ತಪ್ಪು ಮಾಡಿದ್ದರೆ ಗಲ್ಲಿಗೇರಲು ರೆಡಿಯಾಗಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಕುರಿತು ಮೊದಲ ಭಾರಿಗೆ ಪ್ರತಿಕ್ರಿಯೆ ನೀಡಿರುವ ಅವರು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿರೋದನ್ನ ತಿಳಿದು ನೋವಾಗಿದೆ. ನನ್ನ ವಿರುದ್ಧದ ಆರೋಪ ಕೇಳಿ ಶಾಕ್ ಆಗಿದೆ. ಕ್ಷೇತ್ರದ ಜನತೆ ಕಳೆದ ೨೧ ವರ್ಷಗಳಿಂದ ಶಾಸಕನಾಗಿ ಆಯ್ಕೆ ಮಾಡುತ್ತಿದ್ದಾರೆ.

ಜಾರಕಿಹೊಳಿ ಕುಟುಂಬ ದೊಡ್ಡ ಕುಟುಂಬ. ಇದರಿಂದ ನನಗೆ ದೊಡ್ಡ ಶಾಕ್ ಆಗಿದೆ ಎಂದು ನೋವು ವ್ಯಕ್ತಪಡಿಸಿದ್ರು. ನಾನು ಧಾರ್ಮಿಕತೆಯಲ್ಲಿ ನಂಬಿಕೆ ಇಟ್ಡವನು, ನಾನು ಅತ್ಯಂತ ಸೂಕ್ಷ್ಮ ಮನಸ್ಥಿತಿಯ ಮನುಷ್ಯ. 20 ವರ್ಷದಿಂದ ಮಾಡದವರು ಈಗೆಕೇ ಮಾಡಿದ್ರು ಎಂಬುದು ಗೊತ್ತಾಗುತ್ತಿಲ್ಲ. ಇದರಲ್ಲಿ ರಾಜಕೀಯ ಹುನ್ನಾರ ಅಡಗಿದೆ. ನಾನೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡುವೆ ಎಂದರು. ನಾನು ಹೆಣ್ಣು ಮಗಳಿಗೆ ದ್ರೊಹ ಮಾಡಿದ್ದರೆ ಬದುಕಲು ಯೊಗ್ಯನಲ್ಲ. ಇದರ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಒತ್ತಾಯಿಸಿದ್ರು. ಇದು ನನ್ನ ವಿರುದ್ಧದ ಗಂಭೀರ ಆರೋಪವಾಗಿದೆ. ಇದರ ಸಮಗ್ರ ತನಿಖೆಯಾಗಲಿ, ತಪ್ಪು ಸಾಬೀತಾದರೇ ಸಚಿವ ಸ್ಥಾನಕ್ಕೆ ಅಷ್ಟೇ ಅಲ್ಲದೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ, ರಾಜಕೀಯದಿಂದಲೂ ನಿವೃತ್ತಿಯಾಗುವೆ ಎಂದರು. ಮುಖ್ಯಮಂತ್ರಿಗಳ ಜೊತೆಗೆ ದೂರವಾಣಿಯಲ್ಲಿ ಮಾತಾಡಿದ್ದಿನಿ.
ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ನಾನು ಎಲ್ಲಿಯೂ ತಲೆ ಮರೆಸಿಕೊಂಡಿಲ್ಲಾ, ಮಾದ್ಯಮಗಳ ಮುಂದೆ ಬರಲೆಂದೆ ನೇರವಾಗಿ ಮನೆಗೆ ಬಂದಿದ್ದೇನೆ. ಇಲ್ಲಿಂದ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಸತ್ಯಾ ಸತ್ಯತೆ ತಿಳಿಸುವುದಾಗಿ ಹೇಳಿದ್ದಾರೆ.

error: Content is protected !!