ಕೂಗು ನಿಮ್ಮದು ಧ್ವನಿ ನಮ್ಮದು

ಪಲ್ಲಂಗದಾಟಕ್ಕೆ ಅಡ್ಡಿಯಾದ ಗಂಡ: ಪ್ರೀಯಕರನ ಜತೆ ಸೇರಿ ಗಂಡನಿಗೇ ಚಟ್ಟ ಕಟ್ಟಿದ ಮಿಟಕಲಾಡಿ ಹೆಂಡತಿ

ಚಿಕ್ಕಮಗಳೂರು: ಪುರುಷನಾದವನೂ ಜೀವನದಲ್ಲಿ ಯಾವ ತ್ಯಾಗಕ್ಕೂ ಸಿದ್ದನಿರ್ತಾನೆ.. ಆದ್ರೆ ಕಟ್ಟಿಕೊಂಡ ಹೆಂಡ್ತಿ ವಿಷ್ಯ ಬಂದಾಗ ಮಾತ್ರ ಅವನು ಎಂತಾ ಕಟುಕನೇ ಆಗಿದ್ರೂ.. ಕುಡುಕನೇ ಆಗಿದ್ರೂ ಪತ್ನಿಯನ್ನ ಬಿಟ್ಟುಕೊಡಲು ಯಾವ ಗಂಡಸು ಕೂಡ ಒಪ್ಪಲ್ಲ. ಹೀಗಿರುವಾಗ ನಿನ್ನ ಹೆಂಡ್ತಿಯನ್ನ ನನಗೆ ಬಿಟ್ಟುಕೊಡು ಅಂತಾ ನೇರವಾಗಿ ಪತಿಯನ್ನೇ ಕೇಳಿದ್ರೆ ಹೇಗಾಗಬೇಡ ಹೇಳಿ..! ರಕ್ತ ಕುದಿಯುತ್ತೆ, ಪಿತ್ತ ನೆತ್ತಿಗೇರುತ್ತೆ, ಕೆಂಡದಂತ ಕೋಪ ಬರೋದ್ರಲ್ಲಿ ಅನುಮಾನವೇ ಇಲ್ಲ. ದುರಂತ ಅಂದ್ರೆ ಪತ್ನಿಯನ್ನ ಬಿಟ್ಟು ಕೊಡಲ್ಲ ಅಂದಿದ್ದಕ್ಕೆ ಪಾಪದ ಪತಿಯನ್ನ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಂದು ಮುಗಿಸಿದ್ದಾಳೆ.

ಪೋಟೋದಲ್ಲಿ ಕಾಣೋ ಈ ಜೋಡಿ ಯಾವ ಹೀರೋ-ಹೀರೋಯಿನ್ಗೂ ಕಡಿಮೆ ಇರ್ಲಿಲ್ಲ. ಒಬ್ಬ ರಜನಿಕಾಂತ್ ಅಳಿಯ ಧನುಷ್ ತರ ಕಂಡ್ರೆ, ಇನ್ನೊಬ್ಳು ಚೆಂದುಳ್ಳಿ ಚೆಲುವೆ ತರನೇ ಇದ್ಳು.. ! ಈ ಮುದ್ದಾದ ಜೋಡಿಗೆ ಆರತಿಗೊಬ್ಬ ಮಗ, ಕೀರುತಿಗೊಬ್ಬ ಮಗಳು ಬೇರೆ. ಈ ಕುಟುಂಬವನ್ನ ನೋಡ್ತಿದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಅನ್ನೋ ನುಡಿ ನೆನಪಾಗುತ್ತೆ ಕಣ್ರೀ..! ಇಬ್ಬರು ಕೂಡಿ ಬಾಳಿದರೆ, ನಿಜಕ್ಕೂ ಈ ಕುಟುಂಬದಲ್ಲಿ ಯಾವುದಕ್ಕೂ ಕೊರತೆಯೇ ಇರುತ್ತಿರಲಿಲ್ಲ. ಆದ್ರೆ ಈ ಜೋಡಿಯ ಸಂಬಂಧ ಶಾಶ್ವತವಾಗಿ ಕೊನೆಯಾಗಿದೆ. ಈ ಸುಖಿ ಕುಟುಂಬದ ಯಾಜಮಾನ ಚಿರನಿದ್ರೆಗೆ ಜಾರಿದ್ದಾನೆ. ಅಷ್ಟಕ್ಕೂ ಈ ಹೀರೋನನ್ನ ಕಣ್ಮುಚಿಸಿದ್ದು ಬೇರ್ಯಾರು ಅಲ್ಲ ಮತ್ತದೇ ಪೋಟೋದಲ್ಲಿ ಕಾಣುವ ಚೆಂದುಳ್ಳಿ ಚೆಲುವೆಯೇ ಅನ್ನೋದೇ ವಿಪರ್ಯಾಸ. ಹೌದು, ಒಪ್ಪಿ ಮದುಬೆಯಾಗಿ ಜೊತೆ ಜೊತೆಯಾಗಿ ಸಪ್ತಪದಿ ತುಳಿದಿದ್ದ ಮಡದಿಯೇ ಪತಿಯನ್ನ ಕೊಂದು ಮುಗಿಸಿದ್ದಾಳೆ. ಸೌಂದರ್ಯದಲ್ಲಿ ಚೆಂದುಳ್ಳಿಯಾಗಿದ್ದ ಈಕೆ ತನ್ನೊಳಗೆ ಹೆಮ್ಮಾರಿಯೂ ಇದ್ದಾಳೆ ಅನ್ನೋದನ್ನ ಸಾಬೀತು ಮಾಡಿದ್ದಾಳೆ. ಅಂದಾಗೆ ಈ ಪೋಟೋದಲ್ಲಿ ಕಾಣುವ ಈ ಜೊಡಿಯ ಹೆಸ್ರು ಪ್ರದೀಪ್, ರಾಗಿಣಿ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಡ್ಡಹಟ್ಟಿ ನಿವಾಸಿಗಳು. ಈ ಜೋಡಿಯು ಅವರಷ್ಟಕ್ಕೇ ಅವರು ಇದ್ದಿದ್ರೆ ಇವತ್ತು ಹಾಲು-ಜೇನಿನಂತೆ ಇರ್ತಿದ್ರು. ಆದ್ರೆ ಈ ದಂಪತಿಯ ಮಧ್ಯೆ ಬಂದ ಶ್ರೀನಿವಾಸ್ ಎಂಬಾತ ಈ ಜೋಡಿಯ ಮಧ್ಯೆ ಹುಳಿ ಹಿಂಡಿದ್ದಾನೆ. ಚಂಚಲೆಯಾಗಿದ್ದ ರಾಗಿಣಿಯನ್ನ ಓಲೈಸಿಕೊಂಡು ಮೋಹದ ಬಲೆಗೆ ಕೆಡವಿಕೊಂಡಿದ್ದಾನೆ. ರಾಗಿಣಿ ಪತಿ ಪ್ರದೀಪ್ ಜೊತೆಯೇ ಗಾರೆ ಕೆಲಸ ಮಾಡ್ತಿದ್ದ ಶ್ರೀನಿವಾಸ್, ದಿನ ಕಳೆದಂತೆ ರಾಗಿಣಿಗೆ ಹತ್ತಿರವಾಗಿದ್ದಾನೆ. ಅದು ಎಲ್ಲಿವರೆಗೆ ಅಂದ್ರೆ ನಿನ್ನ ಪತ್ನಿಯನ್ನ ನನಗೆ ಬಿಟ್ಟುಕೊಡು ಅಂತಾ ಪ್ರದೀಪ್ ಮನೆಗೆ ಬಂದು ಕೇಳೋವರೆಗೂ. ಇಲ್ಲ, ಸಾಧ್ಯನೇ ಇಲ್ಲ ಅಂತಾ ವಿರೋಧ ಮಾಡಿದ್ದಕ್ಕೆ ಪ್ರಿಯಕರ ಶ್ರೀನಿವಾಸ್ ಜೊತೆ ಸೇರಿ ರಾಗಿಣಿ, ಪತಿ ಪ್ರದೀಪ್ ಕುತ್ತಿಗೆಯನ್ನ ವೇಲ್ನಿಂದ ಗಟ್ಟಿಯಾಗಿ ಸುತ್ತಿ ಉಸಿರು ನಿಲ್ಲಿಸಿದ್ದಾರೆ. ಆ ಬಳಿಕ ಪ್ರದೀಪ್ ಹಣೆ ಮೇಲಿನ ರೆಪ್ಪೆಯನ್ನ ಕೂಡ ಪರಚಿ ಹಾಕಿದ್ದಾರೆ ಪಾಪಿಗಳು.

ಬರೀ ಕಿರಾತಕ ಶ್ರೀನಿವಾಸನೇ ಇಲ್ಲಿ ವಿಲನ್ ಅಲ್ಲ, ಈ ವಿಲನ್ ಗೆ ತನ್ನ ಮನೆಯ ದಾರಿ ತೋರಿಸಿದ್ದ ಈ ಮಿಟುಕಲಾಡಿ ರಾಗಿಣಿಯೇನೂ ಸಾಮಾನ್ಯದವಳಲ್ಲ. ಸ್ವಭಾವತಃ ಚಂಚಲ ಮನಸ್ಸಿನವಳಾಗಿದ್ದ ರಾಗಿಣಿ, ಯವ್ವನಕ್ಕೆ ಕಾಲಿರಿಸಿದ ಘಳಿಗೆಯಿಂದಲೂ ನವರಂಗಿ ಆಟವನ್ನ ಆಡಿಕೊಂಡೇ ಬೆಳೆದವಳು. 10 ವರ್ಷದ ಹಿಂದೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡಿನಿಂದ ರಾಗಿಣಿಯನ್ನ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿಕೆರೆಯ ಪ್ರದೀಪ್ ಗೆ ಮದ್ವೆ ಮಾಡಿಕೊಡಲಾಗಿತ್ತು. ಆದ್ರೆ ಆ ಊರಲ್ಲೂ ಕೂಡ ರಾಗಿಣಿ, ಪರ ಪುರುಷರ ಜೊತೆ ಸಂಬಂಧ ಇಟ್ಟುಕೊಂಡಿದ್ದು ತಿಳಿದಾಗ ಪತಿ ಪ್ರದೀಪ್ ನೇ ರಾಗಿಣಿ ಜೊತೆ ಊರುಬಿಟ್ಟು ದೊಡ್ಡಹಟ್ಟಿ ಗ್ರಾಮಕ್ಕೆ ಬಂದ. ಆದ್ರೆ ಅಲ್ಲೂ ಕೂಡ ರಾಗಿಣಿಯ ಚೆಲ್ಲಾಟ ಮುಂದುವರೆದಿತ್ತು. ಇಷ್ಟಾದ್ರೂ ಪಾಪದ ಪ್ರಾಣಿ ಪ್ರದೀಪ್ಗೆ ಹೆಂಡ್ತಿ ಮೇಲೆ ಪ್ರೀತಿ ಕಡಿಮೆಯಾಗಿರಲಿಲ್ಲ. ನಿನ್ನ ಛತ್ರಿ ಬುದ್ದಿ ಬಿಟ್ಟು ನೆಟ್ಟಗೆ ಬಾಳು ಅಂತಾ ಬುದ್ದಿ ಹೇಳಿದ್ದ. ಆದ್ರೆ ಅದು ಈ ಮಾಯಾಂಗನೆಗೆ ಅರ್ಥವೇ ಆಗಿರ್ಲಿಲ್ಲ. ಕೊನೆಗೆ ಹೆಂಡ್ತಿಯ ನೌಟಂಕಿ ಆಟವನ್ನ ಕಂಡು, ಪ್ರದೀಪ್ ಇತ್ತೀಚಿಗೆ ಹೆಚ್ಚೆಚ್ಚು ಎಣ್ಣೆ ಹೊಡೆಯಲು ಆರಂಭಿಸಿದ. ಇದು ಈ ಹೆಮ್ಮಾರಿಗೆ ಒಂದು ರೀತಿ ವರವಾಗಿ ಪರಿಣಮಿಸಿತು. ಕೊನೆಗೆ ಅದರ ಮುಂದುವರಿದ ಭಾಗವಾಗಿ ಈಕೆಯ ಅಂದಕ್ಕೆ ಬೋಲ್ಡ್ ಆದ ಬೆಪ್ಪನೇ ಈ ಶ್ರೀನಿವಾಸ. ಸದ್ಯ ಇವರಿಬ್ಬರು ಸೇರಿಕೊಂಡು ಪ್ರದೀಪ್ಗೆ ಚಟ್ಟ ಕಟ್ಟಿದ್ದಾರೆ.

ಅಂದಹಾಗೆ ಪ್ರದೀಪ್ ಕೊಲೆ ನಡೆದಿದ್ದು ಇದೇ 22ರ ರಾತ್ರಿ. ಶ್ರೀನಿವಾಸನ ಲೀಲೆ ತಿಳಿದಿದ್ದ ಪ್ರದೀಪ್ ಅನೇಕ ಬಾರಿ ಪತ್ನಿ ಜೊತೆ ಆತನಿಗೂ ಎಚ್ಚರಿಕೆ ನೀಡಿದ್ದ. ಆದ್ರೆ ರಾಗಿಣಿ-ಶ್ರೀನಿವಾಸ್ ಲವ್ವಿ ಡವ್ವಿ ಮಾತ್ರ ಒಂಚೂರು ಕಡಿಮೆ ಆಗಿರಲಿಲ್ಲ. ಮೊನ್ನೆ ರಾತ್ರಿ ಪ್ರದೀಪ್ ಮನೆಗೆ ಬಂದಿದ್ದ ಶ್ರೀನಿವಾಸ್, ನಿನ್ನ ಹೆಂಡ್ತಿಯನ್ನ ನನಗೆ ಬಿಟ್ಟುಕೊಂಡು ಅಂತಾ ಕೂತಿದ್ದಾನೆ. ಈಕೆಯೂ ನೀನು ಡೈವರ್ಸ್ ಕೊಡು ಇಲ್ಲಾ ಆತನೊಂದಿಗೆ ಒಟ್ಟಿಗೆ ಇರಲು ಅವಕಾಶ ಕೊಡು ಅಂದಿದ್ದಾಳೆ. ಯಾವ ಗಂಡಸು ತಾನೇ ಸುಮ್ಮನಿರ್ತಾನೆ ಹೇಳಿ, ಆಗ ಪ್ರದೀಪ್ ಕೋಪಗೊಂಡಾಗ ಇಬ್ಬರು ಸೇರಿ ಆತನ ಕತೆ ಮುಗಿಸಿದ್ದಾರೆ. ಕೊನೆಗೆ ಬೇರೆ ಕಥೆ ಕಟ್ಟಿ ಎಸ್ಕೇಪ್ ಆಗಲು ಸಂಚು ರೂಪಿಸುತ್ತಿದ್ದಾಗ ಸ್ಥಳೀಯರೇ ಸಖರಾಯಪಟ್ಟಣ ಪೊಲೀಸರಿಗೆ ತಿಳಿಸಿ ಇಬ್ಬರನ್ನ ಲಾಕ್ ಮಾಡಿಸಿದ್ದಾರೆ. ಒಟ್ಟಿನಲ್ಲಿ ಮಾಯಾಂಗನೆ ರಾಗಿಣಿಯ ದುರ್ಬುದ್ದಿಯಿಂದ ಒಂದೆಡೆ ಎರಡು ಮಕ್ಕಳು ಅನಾಥರಾದ್ರೆ, ಇನ್ನೊಂದೆಡೆ ಅಮಾಯಕನ ಪ್ರಾಣ ಪಕ್ಷಿ ಹಾರಿಹೋಗಿದೆ.

error: Content is protected !!