ಕೂಗು ನಿಮ್ಮದು ಧ್ವನಿ ನಮ್ಮದು

ರಂಭಾಪುರಿ ಶಾಖಾಮಠಗಳಲ್ಲಿ ಹುಕ್ಕೇರಿ ಮಠ ಅಗ್ರಗಣ್ಯವಾಗಿದೆ! ರಂಭಾಪುರಿ ಜಗದ್ಗುರುಗಳು

ಬೆಳಗಾವಿ: ಶ್ರೀಮಠದ ರಂಭಾಪುರಿ ಪೀಠದ ಶಾಖಾ ಮಠಗಳು ದೇಶದ ತುಂಬ ಸಾವಿರಾರು ಇವೆ. ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುತ್ತಿವೆ. ಅದರಲ್ಲಿ ಹುಕ್ಕೇರಿಯ ಹಿರೇಮಠ ಸಾಮಾಜಿಕ, ಶೈಕ್ಷಣಿಕವಾಗಿ ಧಾರ್ಮಿಕವಾಗಿ ಮುಂಚೂಣಿಯಲ್ಲಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದು ಶ್ರೀ ರಂಭಾಪುರಿ ಜಗದ್ಗುರು ಡಾ.‌ವೀರ‌ಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.

ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಜರುಗಿದ ಗುರು ಪೌರಣಮಿ ಕಾರ್ಯಕ್ರಮದಲ್ಲಿ ಗುರು ಗೌರವ ಸ್ವೀಕರಿಸಿ ಮಾತನಾಡಿದ ಅವರು,ಶ್ರೀಪೀಠದ ಆಜ್ಞೆಯಂತೆ ಕೊರೊನಾ ಸಂತ್ರಸ್ತರ ಸಲುವಾಗಿ ಬೆಳಗಾವಿಯಲ್ಲಿ ಎರಡು ಅಂಬುಲೆನ್ಸ್ ನೀಡಿದ್ದು, ಸಾವಿರಾರು ಕಿಟ್ ಗಳನ್ನು ನೀಡಿದ್ದು ನೆರೆ ಸಂತ್ರಸ್ತರಿಗೆ ನೆರವಾಗಿ ನಿಂತದ್ದು ನಿಜಕ್ಕೂ ಕೂಡ ಅಭಿಮಾನದ ಸಂಗತಿ ಎಂದರು.ನೆರೆ ಹಾವಳಿ ಬೆಳಗಾವಿ ಜಿಲ್ಲೆಯಲ್ಲಿ ಅತಿಯಾಗಿದೆ. ಮುಂಬರುವ ದಿನಗಳಲ್ಲಿ ಶಾಸ್ವತವಾದ ಪರಿಹಾರವನ್ನು ಸರಕಾರ ಕಲ್ಪಿಸುವಂತಾಗಲಿ ಎಂದರು.

ವಿಆರ್ ಎಲ್ ಸಮೂಹ ಸಂಸ್ಥೆಯ ಚೇರಮನ್ ಡಾ. ವಿಜಯ ಸಂಕೇಶ್ವರ ಮಾತನಾಡಿ, ಹುಕ್ಕೇರಿ ಹಿರೇಮಠದ ಬಗ್ಗೆ ನಾವು ಕೇಳುತ್ತಾ ಬಂದಿದ್ದೇವೆ. ಜನಪರ ಕಾರ್ಯಗಳನ್ನು ಹುಕ್ಕೇರಿ ಶ್ರೀಗಳು ಮಾಡುತ್ತಿದ್ದಾರೆ. ಅವರೊಂದಿಗೆ ಸಮಾಜ ಇದೆ ಎಂದರು.

ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಜಗದ್ಗುರುಗಳು ಎಂದರೆ ನಮಗೆ ಗುರುಗಳು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜನಪರ ಕಾರ್ಯ ಮಾಡುತ್ತಿದ್ದೇವೆ ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಸುಮಾರು ಹನ್ನೆರಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹುಕ್ಕೇರಿ ಹಿರೇಮಠದ ನೂತನ ಕಟ್ಟಡದ ಪ್ರಕಟನಾ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಉದ್ಯಮಿ ಎನ್.ಜಿ.ಶಿವಕುಮಾರ, ಕಾಂಗ್ರೆಸ್ ಮುಖಂಡ ಆನಂದ ಗಡ್ಡದೇವರಮಠ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಮಾಹಿತಿ ಹಕ್ಕು ಆಯುಕ್ತೆ ಗೀತಾ, ಕಿರಣ್ ಜಾಧವ, ಸಿಪಿಐ ಮಂಜುನಾಥ ಹಿರೇಮಠ, ಸಿಪಿಐ ಸುನಿಲ್ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!