ಕೂಗು ನಿಮ್ಮದು ಧ್ವನಿ ನಮ್ಮದು

ಮತದಾನ ಮಾಡಿದವರಿಗೆ ಈ 2 ಹೊಟೇಲ್ಗಳಲ್ಲಿ ಉಪಹಾರ ಉಚಿತ: ಬಿಬಿಎಂಪಿ ಗರಂ

ಬೆಂಗಳೂರು: ಕರ್ನಾಟಕ ವಿಧಾಸನಭೆ ಚುನಾವಣೆಯ ಮತದಾನ ನಾಳೆ ರಂದು ನಡೆಯಲಿದ್ದು, ಈ ಸಂಬಂಧ ಚುನಾವಣಾ ಆಯೋಗ ಅನೇಕ ಸಿದ್ದತೆಗಳನ್ನು ಮಾಡಿಕೊಂಡಿದೆ. ಮತದಾನ ಮಾಡಿದ ಗ್ರಾಹಕರಿಗೆ ಬೆಳಗಿನ ಉಪಹಾರವನ್ನು ಉಚಿತವಾಗಿ ನೀಡಲು ನಗರದ ಎರಡು ಪ್ರತಿಷ್ಠಿತ ಹೋಟೆಲ್ಗಳು ನಿರ್ಧರಿಸಿವೆ. ಆದರೆ ಇದು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಉಚಿತ ಆಹಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ ಇದಕ್ಕೆ ನಾವು ಅನುಮತಿ ನೀಡುವುದಿಲ್ಲ. ಇಂತಹ ಆಫರ್ಗಳನ್ನು ಹೋಟೆಲ್ ಮಾಲಿಕರು ನೀಡಬಾರದು ಎಂದು ಸೂಚನೆ ನೀಡಿದ್ದಾರೆ.

ಈ ಬಗ್ಗೆ ನಗರದ ಎರಡು ಪ್ರತಿಷ್ಠಿತ ರೆಸ್ಟೋರೆಂಟ್‌ಗಳಾದ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಮಾಲೀಕರು ಮಾತನಾಡಿ ಈ ಆಫರ್ ರಾಜಕೀಯ ಹೊರತಾಗಿದೆ. 2018 ರಲ್ಲಿ, ಬೆಂಗಳೂರಿನಲ್ಲಿ ಶೇ 54.7 ರಷ್ಟು ನೀರಸ ಮತದಾನವಾಗಿತ್ತು. ಹೀಗಾಗಿ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ರೀತಿ ನಾವು ಆಫರ್ ನೀಡಿದ್ದೇವೆ ಎಂದು ಹೇಳಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್, ಮತದಾನ ಮಾಡಿದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯಗಳನ್ನು ನೀಡುವುದಾಗಿ ನಿರ್ಧರಿಸಿದೆ. ಈ ಸಂಬಂಧ ನಾವು ಅನುಮತಿ ಪಡೆದಿದ್ದೇವೆ. 2018 ಮತ್ತು 2019 ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಮಯದಲ್ಲೂ ಕೂಡಾ ನಾವು ಈ ಆಫರ್ ನೀಡಿದ್ದೇವೆ. 2018 ರಲ್ಲಿ ಸುಮಾರು 3,900 ಮತದಾರರ-ಗ್ರಾಹಕರು ನಮ್ಮ ಕೊಡುಗೆಯನ್ನು ಪಡೆದುಕೊಂಡಿದ್ದಾರೆ. 2019 ರಲ್ಲಿ ಈ ಸಂಖ್ಯೆ 5,100 ಕ್ಕೆ ಏರಿದೆ. ನಾವು ಈ ಬಾರಿಯು ಆಫರ್ ನೀಡಲು ನಿರ್ಧರಿಸಿದ್ದೇವೆ ಎಂದು ಹೋಟೆಲ್‌ ಮಾಲೀಕ ಕೃಷ್ಣ ರಾಜ್ ಹೇಳಿದರು.

ಚರ್ಚ್ ಸ್ಟ್ರೀಟ್‌ನಲ್ಲಿರುವ ಚಾಲುಕ್ಯ ಸಾಮ್ರಾಟ್ ಕೆಫೆಯು ಮತದಾರರಿಗೆ ಬೆಳಿಗ್ಗೆ 7:30 ರಿಂದ 11:30 ರವರೆಗೆ ಉಚಿತ ಉಪಹಾರವನ್ನು ನೀಡಲು ನಿರ್ಧರಿಸಿದೆ.

ಇದರೊಂದಿಗೆ 100 ಹೊಸ ಮತದಾರರಿಗೆ ಉಚಿತವಾಗಿ ಸಿನಿಮಾ ಟಿಕೆಟ್ ನೀಡಲು ಹೋರ್ಡಿಂಗ್ ರೆಸ್ಟೋರೆಂಟ್ ನಿರ್ಧರಿಸಿದೆ. ಮೊದಲ 100 ಯುವ ಮತದಾರರಿಗೆ ಉಚಿತವಾಗಿ ಕನ್ನಡ ಚಲನಚಿತ್ರ ಟಿಕೆಟ್ ನೀಡಲಾಗುವುದು. ಸಿನಿಮಾ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಕನ್ನಡ ಫಿಲಂ ಚೇಂಬರ್ ಜೊತೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

error: Content is protected !!