ಬೆಂಗಳೂರಿನ ಹೋಟೇಲ್ ಮತ್ತು ರೆಸ್ಟೋರೆಂಟ್ಗಳಿಗೆ ನೀವು ಹೋದರೆ ಅಲ್ಲಿಯ ಸಿಬ್ಬಂದಿ ನಿಮಗೆ ತಿಂಡಿ-ತಿನಿಸುಗೊಳೊಂದಿಗೆ, ಮತದಾನ ಮಾಡಿ ಎಂಬ ಸಂದೇಶವನ್ನೂ ಕೂಡ ಸರ್ವ್ ಮಾಡುತ್ತಾರೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮೇ 10ರಂದು ಮತದಾನ ನಡೆಯಲಿದ್ದು, ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಿ ಎನ್ನುವ ಮಾತುಗಳು ಮತ್ತು ಘೋಷಣೆಗಳನ್ನು ಎಲ್ಲೆಡೆ ಕೇಳುತ್ತಿದ್ದೇವೆ.
ಕಳೆದ ಎಲ್ಲ ಚುನಾವಣೆಗಿಂತ ಈ ಬಾರಿ ಅತಿ ಹೆಚ್ಚು ಮತದಾನವಾಗಬೇಕೆಂದು ರಾಜ್ಯ ಚುನಾವಣಾ ಆಯೋಗ ಗುರಿ ಇಟ್ಟುಕೊಂಡಿದ್ದು, ಈ ಸಂಬಂಧ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದೇ ರೀತಿಯಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕೂಡ ಈ ಜಾಗೃತಿ ಅಭಿಯಾನ ನಡೆಯಲಿದೆ.