ಬೆಳಗಾವಿ: ಜಿಲ್ಲೆಯ ಹೊಸೂರ ಗ್ರಾಮದ ಪ್ರಮುಖ ವೃತ್ತವಾದ ಸೋಗಲಕ್ಷೇತ್ರದ ರಸ್ತೆ ಹಾಗೂ ಬೈಲಹೊಂಗಲ ಮುನವಳ್ಳಿ ರಾಜ್ಯ ಹೆದ್ದಾರಿಗೆ ಸಂಧಿಸುವ ರಸ್ತೆಯ ವೃತ್ತಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಿ ಬಸವಣ್ಣವರ ಮೂರ್ತಿ ಪ್ರತಿಷ್ಠಾಪನೆಗೆ ಗ್ರಾಮಸ್ಥರಿಂದ ಭೂಮಿ ಪೂಜೆ ನೆರವೆರಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಎಸ್.ಕೆ.ಮೆಳ್ಳಿಕೇರಿ, ಈರಣ್ಣ ಸಂಪಗಾವ ಮಾತನಾಡಿ, ಗ್ರಾಮ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿದೆ. ಇದರಿಂದ ಗ್ರಾಮದ ಪ್ರದೇಶಗಳನ್ನು ಸಹಜವಾಗಿ ಗುರುತಿಸಲು ವೃತ್ತಗಳ ನಾಮಕರಣ ಅತ್ಯವಶ್ಯಕವಾಗಿದ್ದು ಇದನ್ನು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅನಮೊದಿಸಿ ಪಂಚಾಯತ ದಾಖಲೆಗಳಲ್ಲಿ ನಮೂದಿಸಿ ಕ್ರಮ ಕೈಗೊಳ್ಳಲಾಗುವದು ಎಂದರು.
ಪಿಕೆಪಿಎಸ್ ನಿರ್ದೇಶಕ ಶಿವರಾಜ ಮಾಕಿ ಗ್ರಾಪಂ ಸದಸ್ಯ ಮೋಹನ ವಕ್ಕುಂದು ಮಾತನಾಡಿ, 12 ನೇ ಶತಮಾನದ ಮಹಾ ಮಾನವತಾವಾದಿ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸುವದರಿಂದ ನವ ಪೀಳಿಗೆಗೆ ಅವರ ಕಾಯಕ ತತ್ವದ ಜೋತೆಗೆ ವಚನ ಸಾಹಿತ್ಯದ ಸಾರ ತಿಳಿಸುವ ಮೂಲಕ ಗ್ರಾಮ ಸ್ವರಾಜ್ಯದ ಕಲ್ಪನೆಯಲ್ಲಿ ಜಾತಿ ವರ್ಣ ರಹಿತ ಸಮಾನ ಸಮಾಜದ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದರು.
ಬಸವೇಶ್ವರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ವಚನ ಪಠಣದೊಂದಿಗೆ ಭೂಮಿ ಪೂಜೆ ನೆರವೆರಿತು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ, ಗ್ರಾಪಂ ಸದಸ್ಯರಾದ ಮಲ್ಲಪ್ಪ ಯರಡಾಲ, ಬಸವರಾಜ ವೀವೆಕಿ, ಪಿಕೆಪಿಎಸ್ ಉಪಾಧ್ಯಕ್ಷ ಈರಣ್ಣ ಹುರಳಿ, ಮಡಿವಾಳಪ್ಪ ಚಳಕೊಪ್ಪ, ಪ್ರಶಾಂತ ಮಾಕಿ,ವಿಶ್ವನಾಥ ಬುಡಶಟ್ಟಿ, ಶ್ರೀಶೈಲ ಮಾಕಿ, ಪರ್ವತಪ್ಪ ದುಂಡನಕೊಪ್ಪ ರವಿ ಮಾಕಿ, ಶಂಕರ ಮಸಗುಪ್ಪಿ, ಕರವೀರಪ್ಪ ಯರಡಾಲ, ಮಡಿವಾಳಪ್ಪ ಬುಡಶಟ್ಟಿ, ಸೋಮಲಿಂಗಪ್ಪ ಚಳಕೊಪ್ಪ, ಸೋಮು ಹುರಳಿ, ಕಲ್ಲಪ್ಪ ಚಳಕೊಪ್ಪ, ಬಸವರಾಜ ನಾಯ್ಕರ, ಬಸವಾಣೆಪ್ಪ ಚಳಕೊಪ್ಪ ಮುಂತಾದವರು ಇದ್ದರು. ಸೋಮಪ್ಪ ದುಂಡನಕೊಪ್ಪ, ಈರಣ್ಣ ಹುರಳಿ ಚನಬಸವ ಮೂಲಿಮನಿ ಸಂಜು ಪಾಟೀಲ ಗದಿಗೆಪ್ಪ ನಾಗನೂರ, ಶಂಕರ ರವಾಳ, ಮಡಿವಾಳಪ್ಪ ಚಿಕ್ಕೊಪ್ಪ ಬಸವರಾಜ ಹುರಳಿ, ಬಸವರಾಜ ನವಲಗಿ ಮುಂತಾದವರು ಇದ್ದರು.