ಕೂಗು ನಿಮ್ಮದು ಧ್ವನಿ ನಮ್ಮದು

ಮಕ್ಕಳನ್ನು ವೈದ್ಯರ ಬಳಿ ತೋರಿಸಲು ಪೋಷಕರ ನೂಕುನುಗ್ಗಲು

ರಾಯಚೂರು: ಜಿಲ್ಲೆಯಲ್ಲಿ ಡೆಂಗ್ಯೂ, ವೈರಲ್ ಫೀವರ್ ಹೆಚ್ಚಾದ ಹಿನ್ನೆಲೆಯಲ್ಲಿ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳನ್ನು ವೈದ್ಯರಲ್ಲಿ ತೋರಿಸಲು ಪೋಷಕರ ಜಂಜಾಟ ಹೆಚ್ಚಾಗಿದೆ. ವೈರಲ್ ಫೀವರ್ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬಂದಿರುವುದರಿಂದ ಪೋಷಕರು, ತಮ್ಮ ತಮ್ಮ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನೂ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಇದೇ ಪರಿಸ್ಥಿತಿ ಉಂಟಾಗಿದೆ.

ಪ್ರಯೋಗಾಲಯಗಳ ಮುಂದೆಯೂ ಸಹ ಮಕ್ಕಳ ರಕ್ತ, ಮೂತ್ರ ಪರೀಕ್ಷೆಗಾಗಿ ಪೋಷಕರು ಮುಗಿಬಿದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಚಿಕ್ಕ ಮಕ್ಕಳನ್ನು ಬಾಧಿಸುತ್ತಿರುವ ಡೆಂಗ್ಯೂ, ವೈರಲ್ ಫೀವರ್ ನಿಂದ ಪ್ರತೀ ನಿತ್ಯವೂ ನೂರಾರು ಮಕ್ಕಳು ತಾಲೂಕು ಆಸ್ಪತ್ರೆಗೆ ಬರುತ್ತಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಈಗಾಗಲೇ ಬೆಡ್ ಕೊರತೆ ಎದುರಾಗಿದೆ.

ರಾಯಚೂರಿನ ರಿಮ್ಸ್ ಆಸ್ಪತ್ರೆಯ ವೈದ್ಯರು ಮಕ್ಕಳನ್ನು ಬೇರೆಡೆ ಕಳುಹಿಸುತ್ತಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಈಗಾಗಲೇ ಡೆಂಗ್ಯೂವಿನಿಂದ ಇಬ್ರು ಮಕ್ಕಳು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮಕ್ಕಳಲ್ಲಿ ವೈರಲ್ ಫೀವರ್ ಹರಡುತ್ತಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಷ್ಟು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಅಲ್ಲದೆ ಬೆಡ್‍ಗಳ ಸಮಸ್ಯೆಯನ್ನು ಸಹ ಆದಷ್ಟು ಬೇಗ ನಿವಾರಿಸಬೇಕಿದೆ.

error: Content is protected !!