ಕೂಗು ನಿಮ್ಮದು ಧ್ವನಿ ನಮ್ಮದು

ಈ ರಾಶಿಯವರು ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ

2023 ಜನವರಿ 29 ಸೋಮವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 29 ಸೋಮವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ನವಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶುಕ್ಲ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ. ರಾಹು ಕಾಲ ಸಂಜೆ 08:28 – 09:54, ಯಮಘಂಡ ಕಾಲ 11:20 ರಿಂದ 12 : 46, ಗುಳಿಕ ಕಾಲ 02:12 ರಿಂದ 3: 38

ಮೇಷ: ನಿಮ್ಮ ಪ್ರಯತ್ನಗಳು ನೂರಕ್ಕೆ ನೂರು ಇದ್ದರೆ ಫಲವೂ ಅಷ್ಟೇ ಸಿಗಲಿದೆ. ಬದಲಾವಣೆಗಳನ್ನು ಮಾಡುವ ಹುಮ್ಮಸ್ಸಿನಲ್ಲಿದ್ದರೆ ಸರಿಯಾದ ಬದಲಾವಣೆಯಾಗಲಿದೆ. ಆತುರದಿಂದ ಯಾವ ಕೆಲಸವೂ ಸಿದ್ಧಿಯಾಗದು. ಮುಂದಾಲೋಚನೆ, ಸಹನೆ, ಯೋಗ್ಯತೆ ಎಲ್ಲವೂ ಬೇಕಾಗುತ್ತದೆ. ‌ಒಳ್ಳೆಯದು ಸಿಗಬೇಕಾದರೆ ಸಮಯ, ವ್ಯಕ್ತಿ, ಸಂಪತ್ತು ಮೊದಲಾದವುಗಳ ತ್ಯಾಗದ ಅವಶ್ಯಕತೆ ಇದೆ. ನಿಂತ ನೀರಾಲು ಹೋಗಬೇಡಿ.

ವೃಷಭ: ಆರೋಗ್ಯಕ್ಕೆ ಸಂಬಂಧಿಸಿದಂತೆ ಒಳ್ಳಯದಾಗಲಿದೆ. ಆದರೆ ನಿರಾಕರಣೆ ಬೇಡ. ಸಂಕುಚಿತ ಭಾವವು ನಿಮಗೇ ಹಿಂಸೆಯನ್ನು ತರಬಹುದು. ಔದಾರ್ಯದಿಂದ ಇರಿ. ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ಅನಿರೀಕ್ಷಿತವಾಗಿ ಬರುವ ತಿರುವುಗಳಿಗೆ ಹೊಂದಿಕೊಳ್ಳುವುದು ಉಚಿತ. ಮೋಸಹೋಗುವ ಸ್ಥಿತಿಗಳು ಬರಬಹುದು. ಪ್ರತ್ಯುಪಕಾರ ಮನೋಭಾವವು ನಿಮ್ಮ ಶ್ರೇಯಸ್ಸಿಗೆ ಕಾರಣವಾಗಲಿದೆ. ಕಾರ್ಯಗಳನ್ನು ಒತ್ತಡಕ್ಕೆ ಸಿಲುಕಿ ಮಾಡಬೇಡಿ.

ಮಿಥುನ: ಪ್ರಯಾಣವನ್ನು ಬೆಳೆಸುವ ಸಂದರ್ಭವಿದ್ದರೆ ಅದನ್ನು ಸದ್ಯ ನಿಲ್ಲಿಸಿ. ಮಕ್ಕಳ ಜೊತೆ ಕಾಲವನ್ನು ಕಳೆಯಲು ಇಷ್ಟಪಡುವಿರಿ. ಆಲಸ್ಯದಿಂದ ಹೊರಬರಬೇಕಾಗಿದೆ. ದಾಂಪತ್ಯದಲ್ಲಿ ಖುಷಿಯು ಇರಲಿದೆ. ಯಾರ ಮೇಲಾದರೂ ನಂಬಿಕೆಯನ್ನು ಇಟ್ಟಿದ್ದರೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಆತ್ಮವಿಶ್ವಾಸವನ್ನು ಭಂಗಮಾಡಿಕೊಳ್ಳಬೇಡಿ. ಉದ್ಯೋಗದಲ್ಲಿ ಖುಷಿ ಇರಲಿದೆ. ಸತ್ಯವನ್ನು ಆಡಲು ಹೋಗಿ ಮುಖಭಂಗವಾಗಬಹುದು. ಹೇಳುವ ವಿಧಾನದಲ್ಲಿ ಅದನ್ನು ತಿಳಿಸಿ.

ಕಟಕ: ಆರ್ಥಿಕಸ್ಥಿತಿಯನ್ನು ಬಲಗೊಳಿಸಿಕೊಳ್ಳುವ ಯೋಜನೆಗಳನ್ನು ಮಾಡಬೇಕಾಗಿಬರಬಹುದು. ವೆಚ್ಚಗಳ ಬಗ್ಗೆ ಗಮನಹರಿಸಿ ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ಅನಾರೋಗ್ಯದಿಂದ ಕಂಗೆಟ್ಟು ಕುಗ್ಗುವಿರಿ. ಔಷಧೋಪಚಾರಗಳು ನಿಮ್ಮ ಆರೋಗ್ಯಕ್ಕೆ ಬಲವನ್ನು ತಂದುಕೊಡಬಹುದು. ಕೆಲಸದ ಸ್ಥಳಗಳು ನಿಮ್ಮ ಕಾರ್ಯಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಿವೆ. ಮನೆಯವರ ಜೊತೆ ಕಾಲವನ್ನು ಕಳೆಯುವಿರಿ. ಸಂತಸದ ಸಮಾಚಾರಗಳು ಬರಲಿವೆ.

ಸಿಂಹ: ನಂಬಿಕೆಯನ್ನು ಘಾಸಿಗೊಳಿಸುವ ಕೆಲಸವನ್ನು ಮಾಡಬೇಡಿ. ದೊಡ್ಡ ಯೋಜನೆಗಳನ್ನು ಮಾಡಲು ಹೋಗಬೇಡಿ. ಹಿರಿಯರ ಸೇವೆಯಲ್ಲಿ ಕಾಲವನ್ನು ದಿನವನ್ನು ಕಳೆಯಿರಿ. ಶ್ರೇಯಸ್ಸು ನಿಮಗೆ ಲಭ್ಯವಾಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕೈಚಳಕವನ್ನು ತೋರಿಸಬೇಡಿ. ಪ್ರಯಾಣವು ಸುಖದಾಯಕವಾಗಿ ಇರಲಾರದು. ನಿಮ್ಮವರ ಮೇಲೆ ಅನುಮಾನಗಳು ಏಳಬಹುದು. ಕೂಡಿಟ್ಟ ಹಣವೇ ನಿಮಗೆ ಬರಲಿದೆ ಎಂಬ ತಿಳಿವಳಿಕೆಯು ಬರಲಿದೆ.

ಕನ್ಯಾ: ಉದ್ಯೋಗದ ವಿಚಾರವು ನಿಮ್ಮನ್ನು ಬಹುವಾಗಿ ಕಾಡಲಿದೆ. ಒತ್ತಡದ ಸ್ಥಿತಿ ಹಾಗೂ ಹತಾಶಾಭಾವವು ನಿಮ್ಮನ್ನು ಕುಗ್ಗಿಸಬಹುದು. ಸ್ವಲ್ಪ ಕಾಲ ಏನನ್ನೂ ಯೋಚಿಸದೇ ಖಾಲಿ ಮಾಡಿಕೊಳ್ಳಲು ಯತ್ನಿಸಿ ಮನಸ್ಸನ್ನು. ಆನಂತರ ನಿಮಗೆ ದಾರಿ ತೆರೆದುಕೊಳ್ಳುವುದು. ಸಮಾರಂಭಗಳಿಗೆ ಭೇಟಿ ಮಾಡಲು ಬಯಸುವಿರಿ. ಆಹಾರವು ನಿಮಗೆ ಅನಾರೋಗ್ಯವನ್ನು ತರಬಹುದು. ಗೊಂದಲಗಳನ್ನು ಇಟ್ಟುಕೊಂಡು ಕೆಲಸಗಳನ್ನು ಮಾಡಬೇಡಿ

ತುಲಾ: ದೃಷ್ಟಿಗೆ ಸಂಬಂಧಿಸಿದ ದೋಷಗಳು ಕಾಣಿಸಿಕೊಳ್ಳಬಹುದು. ಯೋಜನೆಗಳನ್ನು ಸರಿಯಾಗಿ ರೂಪಿಸಿಕೊಳ್ಳಿ. ಮಕ್ಕಳ ಏಳ್ಗೆಗೆ ಶ್ರಮವಹಿಸುವಿರಿ. ಖರ್ಚುಗಳು ಬರಬಹುದು. ಮಿತಿಯಲ್ಲಿ ಅದನ್ನು ಮಾಡಿ. ಸ್ವಾವಲಂಬಿಗಳಾಗಲು ನಿಮ್ಮ ಪ್ರಯತ್ನವು ಇರಲಿದೆ. ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಲಿದೆ. ವೈರಿಗಳ ಕಾಟವು ಇರಬಹುದು. ಎಚ್ಚರಿಕೆಯಿಂದ ಇರಿ. ಮಕ್ಕಳು ದೂರದ ಪ್ರಯಾಣವನ್ನು ಮಾಡಲಿದ್ದಾರೆ.

ವೃಶ್ಚಿಕ: ವ್ಯಾಪಾರಸ್ಥರಿಗೆ ಇಂದು ಶುಭವು ಅಲ್ಪವಿದೆ. ಅಧಿಕ ಲಾಭವಾಗದೇ ಬಂದಿರುವುದರಲ್ಲಿ ತೃಪ್ತಿಪಡಬೇಕಾಗಿದೆ. ವಾಹನದಿಂದ ಅಪಘಾತಗಳು ಆಗಬಹುದು. ಸಂಚರಿಸುವಾಗ ಜಾಗರೂಕರಾಗಿರಿ. ಮೃಷ್ಟಾನ್ನ ಭೋಜನವು ನಿಮಗೆ ಅನಿರೀಕ್ಷಿತವಾಗಿ ಸಿಗಲಿದೆ. ನಿದ್ರಾಹೀನತೆಯು ನಿಮ್ಮ ಕಾರ್ಯಗಳಿಗೆ ಅಡ್ಡಿಯನ್ನು ಉಂಟುಮಾಡಬಹುದು. ಕೆಲಸದ ವಿಚಾರದಲ್ಲಿ ನೀವಂದುಕೊಂಡವೇಗವು ಇರದೇ ಇರಬಹುದು. ಸಮಾಜದಿಂದ ಸಹಕಾರವನ್ನು ನಿರೀಕ್ಷಿಸುವಿರಿ.

ಧನು: ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸುವ ಕಾರ್ಯವು ಇಂದಾಗಲಿದೆ. ನಿಮ್ಮ ಯೋಚನೆಗಳನ್ನು ಬದಲಿಸುವ, ದಿಕ್ಕು ತಪ್ಪಿಸುವ ಕೆಲಸಗಳು ಆಗಬಹುದು. ನಿಮ್ಮ ಚಿತ್ತಚಾಂಚಲ್ಯವನ್ನು ನಿಲ್ಲಿಸಿ ದೃಢಮನಸ್ಕರಾಗಿ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ಮನೆಬಳಕೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಪಾಲುದಾರರಾಗಿದ್ದರೆ ಪರಸ್ಪರ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳು ತಮ್ಮ ಕಾರ್ಯವನ್ನು ಶ್ರದ್ಧೆಯಿಂದ ಮಾಡುವರು. ಸಹೋದ್ಯೋಗಿಗಳಿಂದ ಸಹಕಾರ.

ಮಕರ: ವಿದೇಶದ ಸಂಪತ್ತನ್ನು ಪಡೆದುಕೊಳ್ಳುವಿರಿ. ಸಂಶೋಧನಾ ವಿಭಾಗದಲ್ಲಿ ಇಂದು ನಿಮಗೆ ಒಳ್ಳೆಯ ಹೆಸರು ಬರಲಿದೆ. ತಾಯಿಗೆ ಅನಾರೋಗ್ಯವು ಉಂಟಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿ ಸಾಗಲಿದೆ. ಅನಿರೀಕ್ಷಿತ ಧನಾಗಮನವು ನಿಮಗೆ ಸಂತಸವನ್ನೂ ತರುವುದು. ನಿಮಗೆ ಸನ್ಮಾನಗಳನ್ನು ನಿಮ್ಮವರು ಮಾಡುವರು. ಅವಸರ ಬೇಡ ಯಾವ ಕಾರ್ಯದಲ್ಲೂ. ಆಗುವುದನ್ನು ಎದುರಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಿ.

ಕುಂಭ: ಆರೋಗ್ಯದಲ್ಲಿ ಪ್ರಗತಿಯನ್ನು ಹೊಂದುವಿರಿ. ಮಾತಿನಲ್ಲಿ ಮಾಧುರ್ಯವನ್ನು ವ್ಯಕ್ತಪಡಿಸಿ. ನಿಮ್ಮ ಮಾತುಗಳನ್ನು ಆಲಿಸುವವರು, ಪಾಲಿಸುವವರು ಇರಲಿದ್ದಾರೆ. ಸ್ನೇಹಿತರ ಸಹಾಯವು ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಸುಖವಾಗಿ ಇರುವಿರಿ. ಹಳೆಯ ನೋವುಗಳು ಕಾಡಬಹುದು. ವೈದ್ಯರ ಸಲಹೆ ಪಡೆದು ಸೂಕ್ತವಾದ ಚಿಕಿತ್ಸೆಯನ್ನು ಮಾಡಿ. ಅನಾಯಾಸವೆನಿಸಿದರೆ ವಿಶ್ರಾಂತಿ ಮಾಡಿ. ಹಿರಿಯರ ಭೇಟಿಯು ನಿಮಗೆ ಕೆಲವು ಅನುಕೂಲತೆಗಳನ್ನು ಮಾಡಿಕೊಡಲಿದೆ.

ಮೀನ: ದೇಹಾರೋಗ್ಯ ಚೆನ್ನಾಗಿದ್ದರೂ ಮಾನಸಿಕವಾಗಿ ನೆಮ್ಮದಿ ಇರದೇ ಹಿಂಸೆಯನ್ನು ಒಳಗೆ ಅನುಭವಿಸಬೇಕಾಗಬಹುದು. ಅಧಿಕಾರಿಗಳಿಂದ ನಿಮಗೆ ಅತಿಯಾದ ಪೀಡೆಯು ಉಂಟಾಗಲಿದೆ. ನಿಮ್ಮನ್ನು ದೈವವೊಂದೇ ಕಾಪಾಡುವುದು. ಅದನ್ನು ನಂಬಿದ್ದರೆ ಮಾತ್ರ ಶ್ರೇಯಸ್ಸು ಸಿಗುವುದು. ಕುಶಲಕರ್ಮಿಗಳು ಲಾಭವನ್ನು ಪಡೆಯಬಹುದಾಗಿದೆ. ನಿರಂತರ ಓಡಾಟವು ಆಯಾಸವನ್ನು ತರಿಸಿದೆ.‌ ವಿಶ್ರಾಂತಿಯನ್ನು ಮಾಡಿ. ವಿಳಂಬವಾಗುವ ಕೆಲಸಕ್ಕೆ ಚಿಂತೆ ಬೇಡ.

error: Content is protected !!