ಕೂಗು ನಿಮ್ಮದು ಧ್ವನಿ ನಮ್ಮದು

ಹಿಜಬ್ ಬಳಿಕ ಸಿಂಧೂರ ವಿವಾದ: ಹಣೆಗೆ ಕುಂಕುಮ ಹಚ್ಚಿ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

ವಿಜಯಪುರ: ಹಿಜಾಬ್ ನಂತರ ಇದೀಗ ಸಿಂಧೂರ ವಿವಾದ ಕಾಣಿಸಿಕೊಂಡಿದೆ. ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಯೋರ್ವನಿಗೆ ತರಗತಿ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಎಂದಿನಂತೆ ಕಾಲೇಜಿಗೆ ಬಂದಿರುವ ವಿದ್ಯಾರ್ಥಿಯನ್ನು ಗಂಗಾಧರ ಬಡಿಗೇರ್ ಅವರು ಹಣೆಗೆ ಸಿಂಧೂರ ಹಚ್ಚಿದ್ದನ್ನು ಗಮನಿಸಿದ ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ತರಗತಿ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ.

ಈ ಸಮಯದಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ನಾವು ಕಾಲೇಜ್‍ಗೆ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದಿಲ್ಲ. ಕುಂಕುಮ ಹಾಕಲು ಯಾಕೆ ಅನುಮತಿ ಇಲ್ಲ ಎಂದು ಗಂಗಾಧರ ಬಡಿಗೇರ್ ಪ್ರಶ್ನೆ ಮಾಡಿದ್ದಾನೆ. ಈ ಸಮಯದಲ್ಲಿ ಇತರ ಉಪನ್ಯಾಸಕರು ವಿದ್ಯಾರ್ಥಿಯನ್ನು ಮನವೊಲಿಸಲು ಯತ್ನಿಸಿದ್ದಾರೆ.

ಆದ್ರೆ ಉಪನ್ಯಾಸಕರ ವಾದಕ್ಕೆ ಒಪ್ಪದ ಗಂಗಾಧರ ಬಡಿಗೇರ್‌ ಅನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.
ನಂತರ ಗಂಗಾಧರ ಬಡಿಗೇರ್ ಅಡ್ಡವಾಗಿ ಕುಂಕುಮ ಹಚ್ಚಿಕೊಂಡು ಬಂದಿದ್ದಾನೆ ಇದಕ್ಕೆ ಯಾಕೆ ಅವಕಾಶ ಕೊಟ್ಟಿಲ್ಲ ಎಂದು ಇತರ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದ್ರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಗೊಂದಲದ ವಾತಾವರಣವನ್ನು ತಿಳಿಗೊಳಿಸಿದರು.

error: Content is protected !!