ಚಿಕ್ಕೋಡಿ: ಕೇಸರಿ ಚಪ್ಪಲಿ ಬೇಕಾದ್ರು ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ. ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಗೋಕಾಕ್ ಪಟ್ಟಣದಲ್ಲಿ ಪಿಯು ವಿದ್ಯಾರ್ಥಿನಿಯರು ಪಟ್ಟು ಹಿಡಿದು ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಕಾಲೇಜುಗಳಲ್ಲಿ ಬೇರೆ ಕೋಮಿನ ವಿದ್ಯಾರ್ಥಿಗಳು ಕೇಸರಿ ಚಪ್ಪಲಿ ಬೇಕಾದ್ರು ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ. ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಹಿಜಾಬ್ ಬೆಂಬಲಿತ ವಿದ್ಯಾರ್ಥನಿಯರು ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ತರಗತಿಗಳಿಗೆ ತೆರಳದೆ ಶಾಲೆಯ ಗೇಟ್ ಹೊರಗಡೆ ನಿಂತು ಕೊಂಡು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಗೋಕಾಕ್ ಪಟ್ಟಣದ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದು, ಹಿಂದೂ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಧರಿಸಲಿ, ಕೇಸರಿ ಚಪ್ಪಲಿ ಧರಿಸಲಿ, ಕೇಶಗಳನ್ನ ಕೇಸರಿ ಮಾಡಿಕೊಂಡು ಬರಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಹಿಜಾಬ್ ಬೇಕು, ನಾವು ಧರ್ಮ ಹಾಗೂ ಹಿಜಾಬ್ ಬಿಡುವ ಪ್ರಶ್ನೆಯೇ ಇಲ್ಲ. ಪರೀಕ್ಷೆಗಳನ್ನು ಬಿಡುತ್ತೇವೆ ಆದ್ರೆ ಹಿಜಾಬ್ ಬಿಡುವದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದು ತರಗತಿಗಳನ್ನ ಬಹಿಷ್ಕರಿಸಿದ್ದಾರೆ.