ಕೂಗು ನಿಮ್ಮದು ಧ್ವನಿ ನಮ್ಮದು

ಮಾನ್ಸೂನ್ನಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಗೆ ಸರಳ ಮನೆ ಮದ್ದುಗಳು

ಎಲ್ಲಾ ಋತುವಿನಲ್ಲೂ ಸಾಮಾನ್ಯವಾಗಿ ಕಾಡುವ ಕೂದಲ ಸಮಸ್ಯೆ ಎಂದರೆ ತಲೆಹೊಟ್ಟಿನ ಸಮಸ್ಯೆ. ಆದರೆ, ಎಲ್ಲಾ ಋತುವಿನಲ್ಲೂ ಒಂದೇ ರೀತಿಯ ಪರಿಹಾರ ಉಪಯುಕ್ತವಲ್ಲ. ಇದೀಗ ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳು ನಿಮಗೆ ಹೆಚ್ಚು ಪರಿಣಾಮಕಾರಿ ಎಂದು ಸಾಬೀತು ಪಡಿಸಬಹುದು. ಮಾನ್ಸೂನ್ನಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಗೆ ಯಾವ ಮನೆಮದ್ದುಗಳು ಸಹಕಾರಿ ಎಂದು ತಿಳಿಯಿರಿ.

ತಲೆಹೊಟ್ಟಿನ ಸಮಸ್ಯೆಗೆ ಸರಳ ಮನೆಮದ್ದು: ತಲೆಹೊಟ್ಟು ಅಂದರೆ ಡ್ಯಾಂಡ್ರಫ್ ಸಮಸ್ಯೆ ಸಾಮಾನ್ಯವಾಗಿ ಕಂಡುಬರುವ ಕೂದಲಿನ ಸಮಸ್ಯೆ ಆಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಡ್ಯಾಂಡ್ರಫ್ ಇದ್ದಾಗ ತಲೆಯಲ್ಲಿ ತುರಿಕೆ ಕಂಡು ಬರುತ್ತದೆ. ಜೊತೆಗೆ ಇದು ಜನರಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನೂ ಸಹ ಕುಂದಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಡ್ಯಾಂಡ್ರಫ್ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ಸಹ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

ತಲೆಹೊಟ್ಟು ಸಮಸ್ಯೆಯನ್ನು ತೊಡೆದುಹಾಕಲು ಈ ಸರಳ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ:
ತೆಂಗಿನ ಎಣ್ಣೆ ಮನೆಯಲ್ಲಿ ಹಿರಿಯರು ಕೂದಲಿಗೆ ಎಣ್ಣೆ ಹಚ್ಚುವಂತೆ ಸಲಹೆ ನೀಡುತ್ತಾರೆ. ಆದರೆ, ಯುವಕರು ಅದು ಓಲ್ಡ್ ಫ್ಯಾಷನ್ ಎಂದು ಅವರನ್ನೇ ಕೀಟಲೆ ಮಾಡಿ ತಲೆಗೆ ಎಣ್ಣೆ ಹಚ್ಚುವುದೇ ಇಲ್ಲ. ತೆಂಗಿನ ಎಣ್ಣೆಯು ತಲೆಹೊಟ್ಟು ನಿವಾರಣೆಗೆ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಕೂದಲಿನ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ನೀವು ಡ್ಯಾಂಡ್ರಫ್ ಸಮಸ್ಯೆಯಿಂದ ಬಳಲುತ್ತಿದ್ದರೆ ತೆಂಗಿನ ಎಣ್ಣೆ ಜೊತೆಗೆ ಕರ್ಪೂರ ಬಳಸುವುದು ನಿಮಗೆ ಹೆಚ್ಚು ಪರಿಣಾಮಕಾರಿ ಆಗಿದೆ. ಇದಕ್ಕಾಗಿ ಮೊದಲು 2 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಕರ್ಪೂರವನ್ನು ಹಾಕಿ ಸ್ವಲ್ಪಹೊತ್ತು ಹಾಗೆ ಬಿಡಿ. ನೀವು ತಲೆಗೆ ಸ್ನಾನ ಮಾಡುವ ಅರ್ಧಗಂಟೆ ಮೊದಲು ಇದನ್ನು ಕೂದಲಿಗೆ ಹಚ್ಚಿ ಬಳಿಕ ತಲೆಗೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಕೆಲವೇ ದಿನಗಳಲ್ಲಿ ಕಡಿಮೆ ಆಗುತ್ತದೆ.

ಹುಳಿ ಮಜ್ಜಿಗೆ:
ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ಗೊತ್ತೇ ಇದೆ. ಆದರಿದು ನಿಮ್ಮ ತಲೆಹೊಟ್ಟಿನ ಸಮಸ್ಯೆಗೂ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ? ಅದರಲ್ಲೂ ಹುಳಿ ಮಜ್ಜಿಗೆ ಬಳಸಿ ನೀವು ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು. ಹುಳಿ ಮಜ್ಜಿಗೆಯನ್ನು ತಲೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ ಪಡೆಯಬಹುದು

error: Content is protected !!