ಅಡುಗೆ ಮನೆಯಲ್ಲಿ ಅಥವಾ ಮನೆಯ ಯಾವುದಾದರೂ ಮೂಲೆಯಲ್ಲಿ ಇರುವೆಗಳ ಸಾಲು ಸಾಮಾನ್ಯ. ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಅವುಗಳು ಗುಂಪುಗುಂಪಾಗಿ ಬರುತ್ತವೆ. ಸಾಮಾನ್ಯವಾಗಿ ಎಲ್ಲಾ ಜೀವಿಗಳಲ್ಲಿ ಮನುಷ್ಯನೇ ಬುದ್ಧಿವಂತ ಎನ್ನುತ್ತಾರೆ. ಆದರೆ ಮನುಷ್ಯರಿಗಿಂತ ಇರುವೆಗಳು ಗುಣದಲ್ಲಿ ಹಾಗೂ ಬುದ್ಧಿಯಲ್ಲಿ ಮೇಲು. ಇರುವೆಗಳು ತಾವಾಗಿಯೇ ಯಾರನ್ನೂ ಕಚ್ಚುವುದಿಲ್ಲ. ಅವುಗಳಿಗೆ ತೊಂದರೆಯಾದರೆ ಮಾತ್ರ ಕಚ್ಚುತ್ತವೆ.
ನೀವು ಅಡುಗೆ ಮನೆಯಲ್ಲಿ ಏನಾದರೂ ಕ್ಲೀನ್ ಮಾಡಲು ಹೋದಾಗ ನಿಮ್ಮ ಕೈ ಅಪ್ಪಿತಪ್ಪಿ ಇರುವೆಗಳಿಗೆ ತಾಗಿದರೆ ಆಗ ಅವುಗಳು ನಿಮಗೆ ಕಚ್ಚಬಹುದು. ಹೀಗೆ ಯಾವುದಾದರೂ ಸಂದರ್ಭದಲ್ಲಿ ಇರುವೆ ಕಚ್ಚಿ ನಿಮಗೆ ಸಣ್ಣ ಪ್ರಮಾಣದಲ್ಲಿ ಗಾಯ ಉಂಟಾಗಿದ್ದರೆ ಮತ್ತು ಅದರಿಂದ ನೋವು ಮತ್ತು ಕೆರೆತ ಕಂಡುಬರುತ್ತಿದ್ದರೆ, ಅದರ ತಕ್ಷಣ ನಿವಾರಣೆಗೆ ನೀವು ಈ ಕೆಳಗಿನ ಮನೆಮದ್ದುಗಳನ್ನು ಅನುಸರಿಸಬಹುದು. ಇರುವೆ ಕಚ್ಚಿರುವುದಕ್ಕೆ ಮನೆಮದ್ದುಗಳು.
ಐಸ್ ಕ್ಯೂಬ್ ನಿಂದ ಪರಿಹಾರ
*ಸಣ್ಣಪುಟ್ಟ ಕೀಟಗಳು ಕಚ್ಚಿದಾಗ ಅದಕ್ಕೆ ಸುಲಭವಾದ ಪರಿಹಾರ ನಾವು ಐಸ್ ಕ್ಯೂಬ್ ನಿಂದ ಕಂಡುಕೊಳ್ಳಬಹುದು. ಇದಕ್ಕಾಗಿ ನಾವು ಐಸ್ ಪ್ಯಾಕ್ ಅಪ್ಲೈ ಮಾಡುವ ಬಗೆಯನ್ನು ತಿಳಿದು ಕೊಳ್ಳಬೇಕು.
*ಆದರೆ ಯಾವುದೇ ಕಾರಣಕ್ಕೂ ಗಾಯಕ್ಕೆ ನೇರವಾಗಿ ಐಸ್ ಕ್ಯೂಬ್ ಇರಿಸಬೇಡಿ. ಒಂದು ತೆಳುವಾದ ಬಟ್ಟೆಯಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿಕೊಂಡು ಅದನ್ನು ಚರ್ಮದ ಮೇಲೆ ಇರಿಸಿಕೊಳ್ಳಿ. ಕ್ರಮೇಣವಾಗಿ ನೋವು ಮತ್ತು ಊತ ಕಡಿಮೆಯಾಗುತ್ತದೆ.
ತೆಂಗಿನ ಎಣ್ಣೆ
*ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಇರುವೆ ಕಚ್ಚಿದ ಗಾಯಕ್ಕೆ ನೈಸರ್ಗಿಕವಾದ ಪರಿಹಾರ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ anti inflammatory ಗುಣಲಕ್ಷಣಗಳು ಸಾಕಷ್ಟಿವೆ. *ಇರುವೆ ಕಚ್ಚಿ ಚರ್ಮದ ಒಳಭಾಗದಲ್ಲಿ ಬಿಟ್ಟಿರುವ ವಿಷವನ್ನು ನಿಷ್ಕ್ರಿಯ ಮಾಡುವಂತಹ ಶಕ್ತಿ ಕೊಬ್ಬರಿ ಎಣ್ಣೆಗೆ ಅಥವಾ ತಂಗಿನ ಎಣ್ಣೆಗೆ ಇದೆ. ಗಾಯ ಮತ್ತು ಊತ ಆಗಿರುವ ಜಾಗಕ್ಕೆ ತೆಂಗಿನ ಎಣ್ಣೆ ಹಾಕಿ ಸ್ವಲ್ಪ ಹೊತ್ತು ನಯವಾಗಿ ಉಜ್ಜಿ. ಇದರಿಂದ ಕೆರೆತ ಮತ್ತು ನೋವು ನಿವಾರಣೆಯಾಗುತ್ತದೆ. ಬಹಳಷ್ಟು ಜನರು ಈ ಟೆಕ್ನಿಕ್ ಅನುಸರಿಸುತ್ತಾರೆ.
ಅಲೋವೆರಾ ಬಳಸಿ
*ಚರ್ಮದ ಬಹುತೇಕ ಸಮಸ್ಯೆಗಳಿಗೆ ಅಲೋವೆರಾ ಪರಿಹಾರ ಎಂದು ಹೇಳಬಹುದು. ಚರ್ಮದ ಮೇಲ್ಭಾಗದಲ್ಲಿ ಇದು ತಂಪಿನ ಪ್ರಭಾವವನ್ನು ಉಂಟು ಮಾಡುವುದರ ಜೊತೆಗೆ ಚರ್ಮದ ಸಮಸ್ಯೆಗಳನ್ನು ಪರಿಹಾರ ಮಾಡುವುದನ್ನು ನಾವು ಮರೆಯಬಾರದು.
*ಜೊತೆಗೆ ಇರುವೆ ಕಚ್ಚಿದ ಭಾಗದಲ್ಲಿ ಕಂಡುಬರುವಂತಹ ನೋವು ಮತ್ತು ಕೆರೆತವನ್ನು ಇದು ನಿವಾರಣೆ ಮಾಡುತ್ತದೆ. ಇದಕ್ಕಾಗಿ ನೀವು ಸ್ವಲ್ಪ ಅಲೋವೆರಾ ಎಲೆಯ ಭಾಗವನ್ನು ತೆಗೆದುಕೊಂಡು ಅದನ್ನು ಕತ್ತರಿಸಿ ಒಳಗಡೆ ಇರುವ ಜಲ್ ಅನ್ನು ಚರ್ಮದ ಮೇಲೆ ನೋವಿರುವ ಭಾಗದಲ್ಲಿ ಅನ್ವಯಿಸಿ.
ಟೀ ಬ್ಯಾಗ್‌ಗಳು
*ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಹೆಚ್ಚಾಗಿರುವ ಟೀ ಬ್ಯಾಗ್‌ಗಳು ಟ್ಯಾನಿಕ್ ಆಮ್ಲವನ್ನು ಹೊಂದಿ ರುತ್ತವೆ. ಇವುಗಳಿಂದ ನೀವು ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ನಿರೀಕ್ಷೆ ಮಾಡಬಹುದು. ಕೆರೆತವನ್ನು ನಿವಾರಣೆ ಮಾಡುವ ಜೊತೆಗೆ ಊತವನ್ನು ಸಹ ಇದು ಕಡಿಮೆ ಮಾಡಬಲ್ಲದು.
*ಅದಕ್ಕಾಗಿ ನೀವು ಟೀ ಬ್ಯಾಗ್‌ಗಳನ್ನು ನೆನೆಸಿ ಇರುವೆ ಕಚ್ಚಿದ ಭಾಗದಲ್ಲಿ ಅದನ್ನು ಹಿಂಡಬೇಕು. ಮತ್ತೆ ಮತ್ತೆ ಹೀಗೆ ಮಾಡುತ್ತಾ ಬಂದರೆ ಬಹಳ ಬೇಗನೆ ನಿಮಗೆ ಪರಿಹಾರ ಸಿಗುತ್ತದೆ.