ಕೂಗು ನಿಮ್ಮದು ಧ್ವನಿ ನಮ್ಮದು

ಮೊಡವೆ ನಿವಾರಿಸಲು ಪಿಂಪಲ್ ಪ್ಯಾಚ್ ಸಹಾಯ ಮಾಡುತ್ತಾ?

ಹೆಚ್ಚಿನ ಮಹಿಳೆಯರು ಈ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಇದನ್ನು ನಿವಾರಿಸಲು ಏನೇನೋ ವಿಧಾನಗಳನ್ನು ಟ್ರೈ ಮಾಡಿದ್ರೂ ಸಹ ಕೆಲವೊಮ್ಮೆ ಮೊಡವೆ ಹಾಗೆ ಉಳಿಯುತ್ತೆ. ನಿಮಗೂ ಅದೇ ಸಮಸ್ಯೆ ಇದ್ದರೆ, ಇದೀಗ ಹೊಸ ವಿಧಾನ ಟ್ರೈ ಮಾಡಬಹುದು. ಮಾರುಕಟ್ಟೆಯಲ್ಲಿ ಮೊಡವೆ ಸ್ಟಿಕ್ಕರ್ ಗಳು ಅಥವಾ ಮೊಡವೆ ಪ್ಯಾಚ್ ಗಳು ಲಭ್ಯವಿದೆ. ಅವುಗಳನ್ನು ಬಳಸುವಾಗ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ನಮ್ಮಲ್ಲಿ ಹೆಚ್ಚಿನವರು ಮೊಡವೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಅವು ಯಾವಾಗಲೂ ತಪ್ಪು ಸಮಯದಲ್ಲಿ ಹೊರಬರುತ್ತವೆ. ಯಾವುದೇ ಸಮಾರಂಭಕ್ಕೆ ನಾವು ಹೊರಟು ನಿಂತಾಗ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತೆ. ಅಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಈ ಮೊಡವೆಗಳನ್ನು ತೊಡೆದುಹಾಕಲು, ಮೊಡವೆ ಪ್ಯಾಚ್ ಗಳು ಅಥವಾ ಮೊಡವೆ ಸ್ಟಿಕ್ಕರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ನಿಮಗೂ ಮೊಡವೆ ಸಮಸ್ಯೆಯಿದ್ದರೆ ಅವುಗಳನ್ನು ನಿವಾರಿಸಲು ಮೊಡವೆ ಪ್ಯಾಚ್ ಗಳನ್ನುಮೊಡವೆಗಳ ಮೇಲೆ ಹಚ್ಚಲಾಗುತ್ತೆ. ಇದನ್ನು ಮಾಡುವುದರಿಂದ, ಮೊಡವೆ ಬೇಗನೆ ನಿವಾರಣೆಯಾಗುತ್ತೆ ಎಂದು ಅದನ್ನು ಮಾರಾಟ ಮಾಡೋರು ಹೇಳುತ್ತಾರೆ. ಆದರೆ ಇದರಿಂದ ನಿಜವಾಗಿಯೂ ಮೊಡವೆಗಳನ್ನು ದೂರ ಮಾಡಲು ಸಾಧ್ಯವೇ? ತಿಳಿದುಕೊಳ್ಳೋಣ.

ಸ್ಟಿಕ್ಕರ್ ಗಳನ್ನು ಈ ರಾಸಾಯನಿಕದಿಂದ ತಯಾರಿಸಲಾಗುತ್ತೆ
ಚರ್ಮದ ತಜ್ಞರು ಈ ಸ್ಟಿಕ್ಕರ್ ಗಳನ್ನ ಹೈಡ್ರೋಕೊಲಾಯ್ಡ್ ಎಂಬ ಕೆಮಿಕಲ್ ನಿಂದ ತಯಾರಿಸಲಾಗಿದೆ ಎಂದು ಹೇಳುತ್ತಾರೆ. ಇದರ ವಿಶೇಷತೆಯೆಂದರೆ ಇದನ್ನು ಮೊಡವೆ ಮೇಲೆ ಹಚ್ಚಿದರೆ, ಮೊಡವೆ ಬೇಗನೆ ಒಣಗಲು ಸಹಾಯ ಮಾಡುತ್ತೆ. ಇದನ್ನು ಅನೇಕ ಆಳವಾದ ಗಾಯಗಳನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ.

ಕೊಳಕಿನಿಂದ ರಕ್ಷಿಸಣೆ ಸಿಗುತ್ತೆ
ಇದರೊಂದಿಗೆ, ಈ ಪ್ಯಾಚ್ ಗಳನ್ನು ಮುಖದ ಮೇಲಿನ ಕೊಳಕು, ಮಾಲಿನ್ಯಕಾರಕಗಳು, ಸೂರ್ಯನ ಬೆಳಕು, ಧೂಳು ಮುಂತಾದವುಗಳಿಂದ ಸ್ಕಿನ್ ನ್ನು ರಕ್ಷಿಸಲು ಬಳಸಲಾಗುತ್ತೆ. ಇದರೊಂದಿಗೆ, ಜನರು ಮೊಡವೆಗಳನ್ನು ತೊಡೆದು ಹಾಕಲು ಸಹ ಬಳಕೆ ಮಾಡುತ್ತಾರೆ. ಇದರಿಂದ ಶೀಘ್ರವೇ ಪರಿಹಾರ ಸಿಗುತ್ತೆ.

error: Content is protected !!