ತಲೆ ನೋವು: ಮಾತ್ರೆಗಳು ಬೇಕಾಗಿಲ್ಲ, ಕೆಲವೊಂದು ಸಿಂಪಲ್ ಮನೆಮದ್ದುಗಳನ್ನು ಬಳಸುವುದರಿಂದ ಕೂಡ ಇದನ್ನು ನಿಯಂತ್ರಿಸಬಹುದು. ಹಿಂದಿನ ಕಾಲದ ಹಲವಾರು ಸಂಪ್ರದಾಯಗಳು ಅಥವಾ ಕಾಯಿಲೆಗೆ ಪರಿಹಾರಗಳನ್ನು ದೊಡ್ಡವರು ಸುಮ್ಮನೆ ಮಾಡಿಲ್ಲ. ಎಲ್ಲವೂ ಸಹ ತಮ್ಮದೇ ಆದ ಅರ್ಥವನ್ನು ಹೊಂದಿರುತ್ತವೆ. ನಮ್ಮ ಕೆಲವೊಂದು ಕಾಯಿಲೆಗಳಿಗೆ ನಾವು ಈಗ ಆಸ್ಪತ್ರೆಗಳನ್ನು ಕಾಣುತ್ತಿದ್ದೇವೆ. ಬೀದಿಗೊಂದು ಮೆಡಿಕಲ್ ಶಾಪ್ ಇದೆ.
ಆದರೆ ಆಗಿನ ಕಾಲದಲ್ಲಿ ಇಂತಹ ಯಾವುದೇ ಸೌಲಭ್ಯ ಕಾಣದ ಜನರು ಕೇವಲ ಮನೆಮದ್ದುಗಳನ್ನು ಮಾಡಿಕೊಂಡು ಅಥವಾ ಆಯುರ್ವೇದ ಪರಿಹಾರಗಳನ್ನು ಕಂಡುಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಇಂತಹ ಒಂದು ಆರೋಗ್ಯ ಸಮಸ್ಯೆ ಎಂದರೆ ಅದು ತಲೆ ನೋವು. ಇದು ಕೇವಲ ತಲೆ ನೋವು ತಾನೆ ಎಂದು ನಿರ್ಲಕ್ಷ ಮಾಡುವ ಹಾಗಿಲ್ಲ. ಏಕೆಂದರೆ ನಿರಂತರವಾಗಿ ಕಾಡುವ ತಲೆನೋವು ಮೈಗ್ರೇನ್ ಆಗಿದ್ದರೂ ಆಗಿರಬಹುದು.
ಇತ್ತೀಚಿನ ದಿನಗಳಲ್ಲಿ ತಲೆನೋವಿನ ನಿವಾರಣೆಗೆ ನಾನಾ ಮಾತ್ರೆ ಲಭ್ಯವಿದೆ. ಆದರೆ ನಾವು ಹೆಚ್ಚು ಹೆಚ್ಚು ಮಾತ್ರೆ ತೆಗೆದುಕೊಂಡಂತೆ ಅದರಲ್ಲಿರುವ ರಾಸಾಯನಿಕಗಳು ಅಡ್ಡಪರಿಣಾಮ ಉಂಟು ಮಾಡುವುದು ಸಹಜ . ಆದ್ದರಿಂದ ತಲೆನೋವಿಗೆ ಆದಷ್ಟು ಮನೆಮದ್ದುಗಳನ್ನು ಉಪಯೋಗಿಸಿ. ಇವು ನಿಮ್ಮ ಆರೋಗ್ಯಕ್ಕೂ ಪ್ರಯೋಜನ, ತಲೆನೋವಿಗೂ ಪರಿಹಾರ.
1) ಪುದೀನಾ ನೈಸರ್ಗಿಕ ಮತ್ತು ಗಿಡಮೂಲಿಕೆ ಔಷಧಿಯಾಗಿದ್ದು, ಇದನ್ನು ಹಚ್ಚಿದಾಗ ರಕ್ತ ಪರಿಚಲನೆ ಸರಾಗವಾಗಿ ಆಗಿ, ತಲೆನೋವಿಗೆ ಕಾರಣವಾಗುವ ನೋವನ್ನು ತಕ್ಷಣವೇ ಕಡಿಮೆ ಮಾಡುತ್ತದೆ.
2) ಸ್ವಲ್ಪ ಪುದೀನಾ ಎಣ್ಣೆಯನ್ನು ತೆಗೆದುಕೊಳ್ಳಿ. ಈ ಎಣ್ಣೆಯನ್ನು ನಿಮ್ಮ ಹಣೆಗೆ ಮತ್ತು ನೋವಿರುವ ಜಾಗದಲ್ಲಿ ನಿಧಾನವಾಗಿ ಮಸಾಜ್ ಮಾಡಿ.
3) ಒತ್ತಡದ ತಲೆನೋವಿಗೆ ಈ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ. ಮಕ್ಕಳು, ಗರ್ಭಿಣಿ ಮಹಿಳೆ ಅಥವಾ ಸೂಕ್ಷ್ಮ ಚರ್ಮ ಹೊಂದಿರುವ ಜನರಿಗೆ ಈ ಪರಿಹಾರವನ್ನು ಬಳಸಬೇಡಿ. ಏಕೆಂದರೆ ಇದರಿಂದ ಅವರಿಗೆ ಸುಡುವ ತರಹ ಅನುಭವವಾಗುತ್ತದೆ.
4) ತಲೆನೋವಿಗೆ ಚಿಕಿತ್ಸೆ ನೀಡುವಲ್ಲಿ ಮಸಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಲವಂಗದಲ್ಲಿ ಆಂಟಿವೈರಲ್ ಗುಣವಿರುವುದಿಂದ ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
5) ಲವಂಗವನ್ನು ಹೊರತುಪಡಿಸಿ, ಪ್ರತಿಯೊಂದು ಮಸಾಲೆಯನ್ನು 4 ಟೀಸ್ಪೂನ್ ತೆಗೆದುಕೊಂಡು ಸ್ಯಾಚೆಟ್ ಚೀಲದಲ್ಲಿ ಸೇರಿಸಿ. ನಂತರ 1 ಟೀಸ್ಪೂನ್ ಲವಂಗ ಸೇರಿಸಿ. ನಿಮ್ಮ ಮೂಗಿಗೆ ಚೀಲವನ್ನು