ತಲೆನೋವು: ಒತ್ತಡದ ಜೀವನಶೈಲಿ, ಮನೆಯಲ್ಲಿ ಸಂಸಾರದ ತಾಪತ್ರಯ, ಕೆಲಸದಲ್ಲಿ ಒತ್ತಡ, ಹೀಗೆ ನಾನಾ ಸಮಸ್ಯೆಗಳಿಂದ ಸರಿಯಾಗಿ ನಿದ್ರೆ ಬರದೆ ಹಲವಾರು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಆದರೆ ಕೆಲವು ಮನೆಮದ್ದುಗಳು ನಿಮ್ಮ ನಿದ್ರೆಗೆ ಸಹಾಯ ಮಾಡುತ್ತದೆ. ಯಾವುವು ಆ ಮನೆಮದ್ದುಗಳು ಎಂಬುದು ಇಲ್ಲಿದೆ.
ಬಾಳೆ ಹಣ್ಣನ್ನು ಒಂದು ಟೀ ಸ್ಪೂನ್ ಜೀರಿಗೆ ಪೌಡರ್ ಜೊತೆ ಚೆನ್ನಾಗಿ ಮಿಶ್ರಣ ರಾತ್ರಿ ಮಲಗುವ ಮುಂಚೆ ಇದನ್ನು ತಿನ್ನುವುದು ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಜೊತೆಗೆ ಬಾಳೆಹಣ್ಣಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮೊದಲಾದ ಖನಿಜಗಳಿದ್ದು ಉತ್ತಮ ನಿದ್ದೆಗೆ ಸಹಕಾರಿ
ಅರಿಶಿನ ಹಾಲನ್ನು ಕುಡಿಯುವುದು ರಾತ್ರಿ ನಿದ್ರೆ ಭಂಗವಾಗುವುದನ್ನ ತಪ್ಪಿಸುತ್ತದೆ. ಹಾಲಿಗೆ ಒಂದು ಚಿಟಕೆ ಅರಿಶಿನವನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ರಾತ್ರಿ ಮಲಗುವ ಮುನ್ನ ಗಿಡಮೂಲಿಕೆಗಳ ಚಹಾ ಸೇವನೆ ನಿಮ್ಮ ನಿದ್ರೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯುವುದು ಬಹಳ ಮುಖ್ಯ. ಇದನ್ನ ಪ್ರತಿನಿತ್ಯ ಮಾಡುವುದರಿಂದ ನಿದ್ರೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ನಿಮ್ಮ ಒತ್ತಡಗಳನ್ನು ನಿವಾರಣೆಯಾಗುತ್ತದೆ, ಹಾಗಾಗಿ ನಿಮಗೆ ಆರಾಮದಾಯಕ ನಿದ್ರೆ ಬರುತ್ತದೆ.
ಜೇನುತುಪ್ಪ ನಮ್ಮ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಾಗೆಯೇ ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ತಿನ್ನಿ ಸಾಕು ನಿಮ್ಮ ನಿದ್ರೆ ಸಮಸ್ಯೆ ಹೇಗೆ ಮಾಯವಾಗುತ್ತೆ ಅಂತ.