ಕೂಗು ನಿಮ್ಮದು ಧ್ವನಿ ನಮ್ಮದು

ಬಿಎಸ್ ವೈ ಸರ್ಕಾರದ ಮೇಲೆ ತೂಗುಗತ್ತಿ: 23 ಕ್ಕೆ ಗೋಕಾಕ್ ಸಾಹುಕಾರ್ ರಾಜೀನಾಮೆ.!?

ಸಿಡಿದೆದ್ದ ಸಾಹುಕಾರರು

ಬೆಳಗಾವಿ: ಅಂದಿನ ಕೈ-ತೆನೆ ದೋಸ್ತಿ ಸರ್ಕಾರ ಪತನಕ್ಕೆ ಪಣ ತೊಟ್ಟು ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಇದೀಗ ಮತ್ತೆ ಸಿಡಿದೆದ್ದಿದ್ದಾರೆ. ಸಿಎಂ ಆದಿಯಾಗಿ ಬಿಜೆಪಿ ಮುಖಂಡರ ವಿರುದ್ದ ಗರಮ್ ಆಗಿರೋ ಸಾಹುಕಾರ್ ಇದೇ 23 ಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎನ್ನಲಾಗುತ್ತಿದ್ದು, ಬಿಎಸ್ ವೈ ಸರ್ಕಾರದ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ಹೌದು.. ಅಂದಿನ ದೊಸ್ತಿ ಸರ್ಕಾರವನ್ನು ಪತನಗೊಳಿಸಿ 17 ಶಾಸಕರ ಜೊತೆ ಸೇರಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಇದೀಗ ತಮ್ಮದೇ ನಾಯಕರ ವಿರುಧ್ಧ ಸಿಡಿದು ನಿಂತಿದ್ದಾರೆ. ಹೀಗಾಗಿ ಇದೇ 23 ಕ್ಕೆ ಮಾಜಿ ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯಲ್ಲಿ ರಮೇಶ ಜಾರಕಿಹೊಳಿ ಕಡೆಗಣನೆ ಹಿನ್ನೆಲೆ ರಾಜೀನಾಮೆ ನಿರ್ಧಾರ ಕೈಗೊಂಡಿರುವ ಅವರು ಇಂದು ಬೆಳಿಗ್ಗೆ ಮುಂಬೈಗೆ ತೆರಳಿದ್ದಾರೆ. ಇನ್ನು CD ಪ್ರಕರಣದಲ್ಲಿ ಸ್ವಪಕ್ಷಿಯರು ಮಾಡಿರುವ ಕುತಂತ್ರದಿಂದ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ಮೂಗು ತೂರಿಸಿರುವ ಸಿಎಂ ಪುತ್ರ ವಿಜಯೇಂದ್ರ ನಡೆಯಿಂದ ಮನ ನೊಂದಿರುವ ರಮೇಶ ಜಾರಕಿಹೊಳಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. CD ಪ್ರಕರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ 5 ತಿಂಗಳು ಕಳೆದರು, ಸಿಎಂ ಸೇರಿದಂತೆ ಬಿಜೆಪಿ ನಾಯಕರಿಂದ ಜಾರಕಿಹೊಳಿ ಸಹೋದರರ ಕಡೆಗಣನೆಯಿಂದ ಸಾಹುಕಾರರು ಸಿಡಿದು ನಿಂತಿದ್ದಾರೆ.

ಇನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಅಸಮಾಧಾನ ಬೆನ್ನಲ್ಲೇ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ನಿನ್ನೆ ಮುಂಬೈಗೆ ಹಾರಿದ್ದು ಜಾರಕಿಹೊಳಿ ಸಹೋದರರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಮುಂಬೈ ನಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೆಂದ್ರ ಫಡ್ನವಿಸ್ ಸೇರಿದಂತೆ ಕೆಲ ಬಿಜೆಪಿ ನಾಯಕರನ್ನ‌ ಭೇಟಿಯಾಗಲಿರುವ ಜಾರಕಿಹೊಳಿ ಬ್ರದರ್ಸ್ ರಾಜ್ಯ ರಾಜಕೀಯ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಜೂನ್ 23 ಕ್ಕೆ ಮುಂಬೈನಿಂದ ನೇರವಾಗಿ ಬೆಂಗಳೂರಿಗೆ ಬರಲಿರುವ ರಮೇಶ ಜಾರಕಿಹೊಳಿ ನೇರವಾಗಿ ವಿಧಾನಸೌಧದ ಸ್ಪೀಕರ್ ಕೊಠಡಿಗೆ ತೆರಳಿ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ರಮೇಶ ಜಾರಕಿಹೊಳಿ ಸತತ ಪ್ರಯತ್ನದ ಫಲವಾಗಿಯೇ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಆದ್ರೆ ಇದನ್ನ ಮರೆತಿರುವ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ನದಿ ದಾಟಿದ ಮೇಲೆ ದೋಣಿ ಹಾಗೂ ಅಂಬಿಗನನ್ನೆ ಮರೆತಂತಾಗಿದ್ದು, ಇದರ ಪರಿಣಾಮ ಸರ್ಕಾರದ ಮೇಲೆ ಬಿಳೊದಂತು ಸುಳ್ಳಲ್ಲಾ.

error: Content is protected !!