ಕೊಪ್ಪಳ: ಬಾಯಿಗೆ ಬಂದಂತೆ ಮಾತಾಡೋಕೆ ಜನ ನಮ್ಮನ್ನು ಆಯ್ಕೆ ಮಾಡಿಲ್ಲ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ವಿರುದ್ಧ ಗಣಿ ಹಾಗೂ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಕಿಡಿ ಕಾಡಿದ್ದಾರೆ. BJP ಮುಖಂಡರು ಸತ್ರೆ ಒಂದು ಕೋಟಿ ರೂಪಾಯಿ ಕೊಡುತ್ತೇವೆ ಎಂಬ ಅಮರೇಗೌಡ ಬಯ್ಯಾಪೂರ ಹೇಳಿಕೆ ವಿಚಾರವಾಗಿ ಮಾತನಾಡಿದ ಹಾಲಪ್ಪ, ಅವರ ವಯಸ್ಸು ಮತ್ತು ಅನುಭವಕ್ಕೆ ತಕ್ಕ ಮಾತು ಇದಲ್ಲ. ಹಿರಿಯರು ಜವಾಬ್ದಾರಿಯಿಂದ ಮಾತನಾಡಬೇಕು. ಜನರು ವಿಶ್ವಾಸ ಇಟ್ಟು ನಮ್ಮನ್ನು ಆಯ್ಕೆ ಮಾಡಿರುತ್ತಾರೆ.
ಮಾಜಿ ಮುಖ್ಯಮಂತ್ರಿ ಡಿ.ಕುಮಾರಸ್ವಾಮಿ RSS ಕುರಿತು ಮಾತನಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಹಾಲಪ್ಪ, RSS ಎಂದ್ರೆ ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಸಂಘಟನೆ. ಮಾಜಿ P.M ಎಚ್.ಡಿ.ದೇವೆಗೌಡರಿಗೆ RSS ಬಗ್ಗೆ ಗೊತ್ತು. RSS ಬಗ್ಗೆ ಎಚ್.ಡಿ. ದೇವೆಗೌಡರು ಒಳ್ಳೆಯ ಮಾತಾಡಿದ್ದಾರೆ. ಇದನ್ನೆಲ್ಲ ಕುಮರಸ್ವಾಮಿ ಅವರು ಮರೆಯುತ್ತಾರೆ ಎಂದ್ರೆ ಅವರಿಗೆ ಏನೂ ಹೇಳೊಕ್ಕಾಗಲ್ಲ ಎಂದು ಹಾಲಪ್ಪ ಕೆಂಡಾಮಂಡಲರಾಗಿದ್ದಾರೆ.
ಆರ್.ಎಸ್.ಎಸ್ ಅವರೇ UPSC ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಾರೆ ಎಂಬ ವಿಚಾರವಾಗಿ ಮಾತನಾಡಿ ಹಾಲಪ್ಪ, ಕಾಂಗ್ರೆಸ್ ನವರೂ ಹಿಂದೆ ಹೀಗೇ ಮಾಡಿದ್ರಾ? ನೀವು ನಿಮಗೆ ಬೇಕಾದವರನ್ನು ಆಯ್ಕೆ ಮಾಡಿದ್ರಾ? ಇವೆಲ್ಲ ಅಟೋನೊಮಸ್ ಬಾಡಿ ಇವೆ. ಇವು ದೇಶದ ಪ್ರತಿಷ್ಠೆ ಹೆಚ್ಚಿಸಿದ ಸಂಸ್ಥೆಗಳು. ಅಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಇದರ ಬಗ್ಗೆ ಈ ರೀತಿ ಮಾತಾಡಿದ್ರೆ ಏನು? ಮುಂದಿನ ಪೀಳಿಗೆಗೆ ನಾವು ಏನು ಕೊಡುತ್ತೇವೆ ಎಂದು ಹಾಲಪ್ಪ ಅವರು ಪ್ರಶ್ನಿಸಿದ್ರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಮೇಲೆ ಐಟಿ ರೇಡ್ ವಿಚಾರಕ್ಕೆ ಹೆಚ್ಡಿಕೆ ಇದು ಟಾರ್ಗೆಟ್ ಬಿಎಸ್ವೈ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕಾಲಕಾಲಕ್ಕೆ ಐಟಿ ರೇಡ್ ಆಗಿವೆ. ಎಲ್ಲದಕ್ಕೂ ಒಂದು ಕಲ್ಪನೆ ಕಟ್ಟಿಕೊಂಡು ಬಂದ್ರೆ ಏನೂ ಮಾಡೊಕ್ಕಾಗಲ್ಲ. ಐಟಿ ಅಧಿಕಾರಿಗಳು ತಮ್ಮ ಸಾಕ್ಷಾಧಾರ ಇಟ್ಟುಕೊಂಡು ದಾಳಿ ಮಾಡುತ್ತಾರೆ. ಇದು ಕುಮಾರಸ್ವಾಮಿ ಅವರ ಹೊಸ ನಾಟಕ ಎಂದು ವಿರೋಧ ಹಾಲಪ್ಪ ಅವರು ವ್ಯಕ್ತಪಡಿಸಿದ್ರು.