ಕೂಗು ನಿಮ್ಮದು ಧ್ವನಿ ನಮ್ಮದು

ಹಳೆಯ ಕಾಲದ ಕೆಲವು ಹೇರ್ ಸ್ಟೈಲ್ ಗಳು ಇಲ್ಲಿವೆ ನೋಡಿ

ನೀವು ಹಿಂದಿನ ಮೂವಿಗಳಲ್ಲಿ ವಿವಿಧ ರೀತಿ ಹೇರ್ ಸ್ಟೈಲ್ಗಳನ್ನು ನೋಡಿರುತ್ತೀರಿ. ಕೆಲವು ಹೇರ್ ಸ್ಟೈಲ್ಗಳು ಮತ್ತೇ ಟ್ರೆಂಡ್ ಆಗುತ್ತಿರುವುದನ್ನು ಕಾಣಬಹುದು. ಅಂತಹ ಕೆಲವು ಹೇರ್ ಸ್ಟೈಲ್ಗಳು ಇಲ್ಲಿವೆ.

ಪಿನಪ್ ಬ್ಯಾಂಗ್ಸ್ (1950): ಹುಬ್ಬುಗಳನ್ನು ಸ್ಪರ್ಶಿಸುವಂತಹ ಈ ಕೇಶವಿನ್ಯಾಸದಲ್ಲಿ , ಕೂದಲಿನ ತುದಿ ಭಾಗ ಸುರುಳಿಯಾಕಾರದಲ್ಲಿ ಕಾಣಬಹುದಾಗಿದೆ.

ಇಟಾಲಿಯನ್ ಕಟ್ (1950): ಹಿಂದಿನ ಕಾಲದ ಡಿಸ್ಕೋ ಸಾಂಗ್ಗಳಲ್ಲಿ ನೀವು ಈ ರೀತಿಯ ಇಟಾಲಿಯನ್ ಕಟ್ ಹೇರ್ ಸ್ಟೈಲ್ ನೋಡಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಇದು ಪುರುಷರಲ್ಲಿ ಟ್ರೆಂಡ್ ಆಗುತ್ತಿದೆ.

ಸ್ಕಲ್ಪ್ಟೆಡ್ ವೇವ್ಸ್ (1930): ಕೂದಲಿನ ತುದಿಯು ಸುರಳಿಕಾರದ ವಿನ್ಯಾಸವನ್ನು ಹೊಂದಿದ್ದು, 30ರ ದಶಕದ ಸಾಕಷ್ಟು ಸಿನಿಮಾಗಳಲ್ಲಿ ಈ ಹೇರ್ ಸ್ಟೈಲ್ ಕಾಣಬಹುದಾಗಿದೆ.

ಫಿಂಗರ್ ವೇವ್ಸ್ (1920): 20 ರ ದಶಕದ ಅಂತ್ಯದ ವೇಳೆಗೆ, ವಿಕ್ಟೋರಿಯನ್ ಯುಗದ ಹೆಚ್ಚು ಪ್ರಚಲಿತದಲ್ಲಿಂತಹ ಕೇಶ ವಿನ್ಯಾಸವಿದು.

ಬ್ರೌಬ್ಯಾಂಡ್ (1920): ಆರಂಭಿಕ ಥಿಯೇಟ್ರಿಕಲ್ ಮೋಷನ್ ಪಿಕ್ಚರ್‌ಗಳಲ್ಲಿ ಈ ರೀತಿಯ ಕೂದಲನ್ನು ಮಣಿಗಳಿಂದ ಅಲಂಕರಿಸಿದ ಕೇಶವಿನ್ಯಾಸವನ್ನು ಕಾಣಬಹುದು.

ದಿ ಬಾಬ್ (1920): ಈ ಹೇರ್ ಸ್ಟೈಲ್ 100 ವರ್ಷಗಳಿಂದ ಅದೇ ಜನಪ್ರಿಯತೆಯನ್ನು ಪಡೆದಿದೆ. ಮಕ್ಕಳಿಗಂತೂ ಬಾಬ್ ಕಟ್ ಎಂದರೆ ಅಚ್ಚುಮೆಚ್ಚು.

ರೀಗಲ್ ಶಾರ್ಟ್ ಕಟ್ (1990 ರ ದಶಕ): 90ರ ದಶಕದಲ್ಲಿ ರಾಜ ಮನೆತನಗಳಲ್ಲಿ ಈ ಕೇಶ ವಿನ್ಯಾಸವನ್ನು ಕಾಣಬಹುದು. ರಾಜಕುಮಾರಿ ಡಯಾನಾರನ್ನು ಈ ಹೇರ್ ಸ್ಟೈಲ್ನಲ್ಲಿ ಕಾಣಬಹುದು.

error: Content is protected !!