ಕೂಗು ನಿಮ್ಮದು ಧ್ವನಿ ನಮ್ಮದು

ಕ್ಯಾನ್ಸರ್ ರೋಗಿಯನ್ನು ಸಮಾಧಾನಪಡಿಸಲು ತನ್ನ ಕೂದಲನ್ನೇ ಬೋಳಿಸಿಕೊಂಡ ಕ್ಷೌರಿಕ- ವಿಡಿಯೋ ವೈರಲ್

ಕ್ಯಾನ್ಸರ್ ವಿರುದ್ಧದ ಹೋರಾಟವು ದೀರ್ಘ ಮತ್ತು ಕಠಿಣ ಹೋರಾಟವಾಗಿದೆ. ಏಕೆಂದರೆ ಯಾವುದೇ ಓರ್ವ ಕ್ಯಾನ್ಸರ್ ರೋಗಿಯು ಅನೇಕ ಕಿಮೊಥೆರಪಿ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇಂತಹ ಕಠಿಣ ಕಾಯಿಲೆಯ ವಿರುದ್ಧ ಹೋರಾಡುವವರಿಗೆ ಅವರ ಸುತ್ತಮುತ್ತಲಿನ ಜನ, ಕುಟುಂಬ, ಸ್ನೇಹಿತರು ಆಸರೆಯಾಗಿ, ಮನೋಧೈರ್ಯವನ್ನು ತುಂಬುತ್ತಾರೆ.

ಕ್ಷೌರಿಕನು ಆ ಮಹಿಳೆಯನ್ನು ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಿಸುತ್ತಾನೆ. ಆದಾಗ್ಯೂ, ಮಹಿಳೆಯನ್ನು ಸಮಾಧಾನ ಪಡಿಸಲು ಸಾಧ್ಯವಾಗುವುದೇ ಇಲ್ಲ. ಈ ವೇಳೆ ಕ್ಷೌರಿಕ ಮಾಡಿದ್ದೇನು ಗೊತ್ತಾ! ಈ ವೈರಲ್ ವಿಡಿಯೋ ವೀಕ್ಷಿಸಿ… ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಮಿಡಿಯುವುದು ಮಾನವ ಧರ್ಮ. ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಒಂದೆರಡು ಸಹಾನುಭೂತಿಯನ್ನು ತೋರುತ್ತೇವೆ. ಸಾಧ್ಯವಾದರೆ, ಅವರಿಗೆ ನಮ್ಮ ಕೈಲಾದಷ್ಟು ಸಹಾಯವನ್ನೂ ಮಾಡುತ್ತೇವೆ. ಆದರೆ ಇಲ್ಲೊಬ್ಬ ಕ್ಷೌರಿಕ ಕ್ಯಾನ್ಸರ್ ರೋಗಿಗಾಗಿ ಮಾಡಿದ ಕೆಲಸ ನೆಟಿಜನ್‌ಗಳ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ.

ವಾಸ್ತವವಾಗಿ, ಕ್ಯಾನ್ಸರ್ ವಿರುದ್ಧದ ಹೋರಾಟವು ದೀರ್ಘ ಮತ್ತು ಕಠಿಣ ಹೋರಾಟವಾಗಿದೆ. ಏಕೆಂದರೆ ಯಾವುದೇ ಓರ್ವ ಕ್ಯಾನ್ಸರ್ ರೋಗಿಯು ಅನೇಕ ಕಿಮೊಥೆರಪಿ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇಂತಹ ಕಠಿಣ ಕಾಯಿಲೆಯ ವಿರುದ್ಧ ಹೋರಾಡುವವರಿಗೆ ಅವರ ಸುತ್ತಮುತ್ತಲಿನ ಜನ, ಕುಟುಂಬ, ಸ್ನೇಹಿತರು ಆಸರೆಯಾಗಿ, ಮನೋಧೈರ್ಯವನ್ನು ತುಂಬುತ್ತಾರೆ. ಆದರಿಲ್ಲಿ ಕ್ಷೌರಿಕನೊಬ್ಬ ಕ್ಯಾನ್ಸರ್ ರೋಗಿಯನ್ನು ಸಮಾಧಾನಪಡಿಸುವ ಸಲುವಾಗಿ ತನ್ನ ಕೂದಲನ್ನೇ ಬೋಳಿಸಿಕೊಂಡಿದ್ದಾನೆ.

ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಕ್ಷೌರಿಕನ ಈ ಸ್ಫೂರ್ತಿದಾಯಕ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಒಂದು ನಿಮಿಷ 21 ಸೆಕೆಂಡುಗಳ ಈ ವಿಡಿಯೋದಲ್ಲಿ ಮೊದಲಿಗೆ ಮಹಿಳೆಯೊಬ್ಬರು ಬಂದು ಚೇರ್ ನಲ್ಲಿ ಕೂರುತ್ತಾರೆ. ಬಳಿಕ ಕ್ಷೌರಿಕನು ರೇಜರ್‌ನಿಂದ ಮಹಿಳೆಯ ಕೂದಲನ್ನು ಕತ್ತರಿಸಲು ಮುಂದಾದಾಗ, ಮಹಿಳೆಯು ಬಿಕ್ಕಿ ಬಿಕ್ಕಿ ಅಳುವುದನ್ನು ಕಾಣಬಹುದು. ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಯುತ್ತಿದ್ದಂತೆ ಮಹಿಳೆಗೆ ಅಳುವನ್ನು ತಡೆಯಲು ಸಾಧ್ಯವಾಗುವುದೇ ಇಲ್ಲ.

ಕ್ಷೌರಿಕನು ಆ ಮಹಿಳೆಯನ್ನು ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಿಸುತ್ತಾನೆ. ಆದಾಗ್ಯೂ, ಮಹಿಳೆಯನ್ನು ಸಮಾಧಾನ ಪಡಿಸಲು ಸಾಧ್ಯವಾಗುವುದೇ ಇಲ್ಲ. ಈ ವೇಳೆ ಕ್ಷೌರಿಕ ಒಂದು ಕೈಯಿಂದ ಮಹಿಳೆಯನ್ನು ತಬ್ಬಿ ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಾ, ಮತ್ತೊಂದು ಕೈಯಲ್ಲಿ ರೇಜರ್‌ ಹಿಡಿದು ತನ್ನ ಕೂದಲನ್ನೂ ಬೋಳಿಸಿಕೊಳ್ಳುತ್ತಾನೆ. ಕ್ಷೌರಿಕನ ಈ ನಡೆ ಕಂಡು ಒಮ್ಮೆ ಶಾಕ್ ಆದ ಮಹಿಳೆ ಆತನನ್ನು ತಡೆಯಲು ಮುಂದಾಗುತ್ತಾಳೆ. ಆದರೆ, ತನ್ನ ನಿರ್ಧಾರದಿಂದ ಹಿಂಜರಿಯದ ಕ್ಷೌರಿಕ ತನ್ನ ಕೆಲಸವನ್ನು ಮುಂದುವರೆಸುತ್ತಾನೆ

error: Content is protected !!