ಹಾಸನ: ಮತದಾನಕ್ಕೆ ಕೇವಲ ಎರಡು ದಿನ ಮಾತ್ರ ಉಳಿದಿದ್ದರೂ ಜೆಡಿಎಸ್ ಪಕ್ಷದ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರು ಪಕ್ಷ ತೊರೆದು ಅರಸೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಎಂ ಶಿವಲಿಂಗೇಗೌಡರ ವಿರುದ್ಧ ಕಿಡಿಕಾರುವುದನ್ನು ನಿಲ್ಲಿಸಿಲ್ಲ. ಹಾಸನದಲ್ಲಿ ಸೋಮವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರೇವಣ್ಚ, ಶಿವಲಿಂಗೇಗೌಡರು ನಾವು ಸಾಕಿದ ಮುದ್ದಿನ ಗಿಣಿ, ಜೆಡಿಎಸ್ ನಲ್ಲಿ ಮೇವು ಕಡಿಮೆಯಾಗಿದೆ ಅಂತ ಬೇರೆಡೆ ಮೇಯಲು ಹೋಗಿದ್ದಾರೆ.
ಪಕ್ಷ ನೀಡಿದ ಎಲ್ಲ ಸವಲತ್ತುಗಳನ್ನು ಅನುಭವಿಸಿ ಚುನಾವಣೆ ಹತ್ತಿರ ಬಂದಾಗ ಜೆಡಿಎಸ್ ಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದ್ದಾರೆ ಎಂದು ರೇವಣ್ಣ ಹೇಳಿದರು.