ಬೆಂಗಳೂರು: ತಮ್ಮ ಪಕ್ಷದ ಕಾರ್ಯಕರ್ತನನ್ನು ಉಳಿಸಲಾಗದ ಸರ್ಕಾರ, ರಾಜ್ಯದ ಜನತೆಯನ್ನು ರಕ್ಷಿಸಲು ಸಾಧ್ಯವೇ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ರು. ಮಾದ್ಯಮದವರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಯುವಕನ ಕುಟುಂಬ ಹೇಳಿದೆ. ಆತನ ಕೊಲೆಗೆ 2 ವರ್ಷದಿಂದ ಸಂಚು ಇತ್ತು ಅಂತಾ. ಹಾಗಾದ್ರೆ ಸರ್ಕಾರ ಏನು ಮಾಡುತ್ತಿತ್ತು. ಅಮಾಯಕರ ಬಲಿ ಪಡೆದು ರಾಜಕೀಯ ಮಾಡುತ್ತಿದ್ದಾರೆ. ನಾನು ಕೆಲವು ದಿನಗಳ ಹಿಂದೆನೇ ಹೇಳಿದ್ದೆ.
ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳು ಯಾವ ಹಂತಕ್ಕಾದ್ರು ಹೋಗಬಹುದು ಎಂದು ಅವರ, ಚುನಾವಣೆಗೆ ವರ್ಷವಿರುವಾಗ ಇಂತಹ ಘಟನೆ ನಡೆದಿದೆ ಅಂದರೆ ಏನು ಅರ್ಥ. ಇಂತಹ ಘಟನೆಗಳು ನಾಂದಿಯಾಗ್ತಾ ಇದೆಯಾ ಎಂಬ ಆತಂಕ ಶುರುವಾಗಿದೆ ಎಂದು ಎಚ್.ಡಿ.ಕುಮಾರ್ ಸ್ವಾಮಿ ಕಳವಳ ವ್ಯಕ್ತಪಡಿಸಿದ್ರು. 2 ವರ್ಷದ ಹಿಂದೆಯೇ ಹತ್ಯೆಗೆ ಚಿಂತನೆ ನಡೆದಿದೆ ಎಂದು ಅವರ ಕುಟುಂಬ ಸಂಬಂಧಿಕರು ಹೇಳುತ್ತಿದ್ದರು.
ಜೊತೆಗೆ ಹತ್ತು ಲಕ್ಷ ಘೋಷಿಸಿದ್ದರು ಎಂದು ಹೇಳಿದ್ದಾರೆ. 2 ವರ್ಷಗಳ ಹಿಂದೆಯೇ ಇದು ಹೊರಬಿದ್ದಿದೆ. ಇದು ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಕುಮಾರ್ ಸ್ವಾಮಿ ಅವರು, ನಿಮ್ಮ ಸದಸ್ಯನನ್ನು ರಕ್ಷಣೆ ಮಾಡಲು ನಿಮಗೆ ಆಗಲಿಲಲ್ವೇ ಎಂದು ಪ್ರಶ್ನಿಸಿದರು. ಇದು ಸ್ಯಾಂಪಲ್ಲೋ ಏನೋ ಗೊತ್ತಿಲ್ಲ. ಟ್ರೈಲರ್ ಬಿಡ್ತಾರೆ ಮುಂದೆ ಪಿಚ್ಚರ್ ಬಿಡುತ್ತಾರೆ. ಇದನ್ನು ನೋಡಿದ್ರೆ ಪ್ರಾರಂಭಿಕ ಅನ್ನಿಸುತ್ತದೆ. ಸರ್ಕಾರ ಇದನ್ನು ಮೊದಲೇ ಅರ್ಥ ಮಾಡಿಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಪ್ರಚೋದನೆ ಮಾಡುತ್ತಾರೆ ಎನ್ನುವುದನ್ನು ಹೇಳುತ್ತಿರಾ. ಅದನ್ನು ಹೇಗೆ ಕಟ್ ಮಾಡಬೇಕು ಅಂತ ನಿಮಗೆ ಗೊತ್ತಿಲ್ವಾ? ಯಾಕೆ ನೀವು ಸುಮ್ಮನಾಗಿದ್ದು ಎಂದು ವಾಗ್ದಾಳಿ ಕುಮಾರ್ ಸ್ವಾಮಿ ಹೇಳಿದರು.
ನಮ್ಮ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ್ದಾರೆ. ರಾಜ್ಯದ ಪ್ರಮುಖ ವಿಚಾರಗಳ ಚರ್ಚೆಗೆ ಅವಕಾಶ ಸಿಗಲಿಲ್ಲ. ಇಂದು, ನಾಳೆ ಸದನ ಮುಂದೂಡಬಹುದು. ಬಜೆಟ್ ಅಧಿವೇಶನದವರೆಗೆ ಮುಂದೂಡಬಹುದು. ಬೆಳಗಾವಿಯಲ್ಲೂ ಮತಾಂತರ ನಿಷೇಧ ಕಾಯ್ದೆ ತಂದ್ರು. ಯಾವುದೇ ಸಮಸ್ಯೆ ಚರ್ಚೆಯಿಲ್ಲದೆ ಮುಕ್ತಾಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಈಗಿನ ಸದನವೂ ನೀವೇ ನೋಡುತ್ತಿದ್ದೀರ. ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗ್ಗೆ ಹಿಂದೆಯೇ ಹೇಳಿದ್ದೆ. ಅಮಾಯಕ ಮಕ್ಕಳ ಬಲಿಯಾಗಬಹುದು ಎಂದಿದ್ದೆ. ಈಗ ಶಿವಮೊಗ್ಗದಲ್ಲಿ ಅಮಾಯಕ ಯುವಕನ ಬಲಿಯಾಗಿದೆ. ಮುಖಂಡರು ಆ ಯುವಕನ ಮನೆಗೆ ಹೋಗುವುದು. ಸಾಂತ್ವನ ಹೇಳುವುದು ಮಾಡುತ್ತಿರೆ. ಮೂರು ದಿನ ಆದ ಮೇಲೆ ಅತ್ತ ಯಾರೂ ಸುಳಿಯಲ್ಲ. ಆ ಅಮಾಯಕನ ಕುಟುಂಬದ ಬಗ್ಗೆ ಕೇಳುವವರಿರಲ್ಲ. ಮಕ್ಕಳು ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ತಮ್ಮ ಕುಟುಂಬದ ಬಗ್ಗೆ ಯಾರೂ ನೋಡಲ್ಲ. ಇದನ್ನು ಮಕ್ಕಳು ಅರ್ಥ ಮಾಡಿಕೊಂಡರೆ ಸಾಕು ಎಂದು ಎಚ್.ಡಿ.ಕುಮಾರ್ ಸ್ವಾಮಿ ಮನವಿ ಮಾಡಿದ್ರು.