ಕೂಗು ನಿಮ್ಮದು ಧ್ವನಿ ನಮ್ಮದು

ಮತ್ತೆ ಐವರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಈಗಾಗಲೇ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ 2 ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಶನಿವಾರ ಮತ್ತೆ ಐವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದರು.

ಚಿತ್ರದುರ್ಗಕ್ಕೆ ವಿಧಾನ ಪರಿಷತ್‍ನ ಮಾಜಿ ಸದಸ್ಯ ರಘು ಅಚಾರ್, ಮಡಿಕೇರಿಗೆ ಎನ್.ಎಂ.ಮುತ್ತಪ್ಪ, ಮೂಡಬಿದಿರೆಗೆ ಅಮರಶ್ರೀ, ವರುಣಾ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಭಾರತಿ ಶಂಕರ್, ಬಾಗಲಕೋಟೆ ಕ್ಷೇತ್ರಕ್ಕೆ ದೇವರಾಜ್ ಪಾಟೀಲ್ ಹಾಗೂ ಯಾದಗಿರಿ ಕ್ಷೇತ್ರಕ್ಕೆ ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ಅವರು ಜೆಡಿಎಸ್ ಅಭ್ಯರ್ಥಿಗಳು ಎಂದು ಸುದ್ದಿಗೋಷ್ಠಿಯಲ್ಲಿ ಎಚ್‍ಡಿಕೆ ತಿಳಿಸಿದರು. ಎನ್.ಆರ್.ಸಂತೋಷ್ & ದೇವರಾಜ್ ಪಾಟೀಲ್ ಸೇರ್ಪಡೆ

ಇದೇ ಸಂದರ್ಭದಲ್ಲಿ ಅರಸೀಕೆರೆ ವಿಧಾನಸಭೆ ಕ್ಷೇತ್ರದ ಎನ್.ಆರ್.ಸಂತೋಷ್ ಅವರು ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರಿದರು. ಹಾಗೆಯೇ ಬಾಗಲಕೋಟೆಯ ದೇವರಾಜ್ ಪಾಟೀಲ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿದರು.

ಎಚ್‍.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಇಬ್ಬರೂ ನಾಯಕರಿಗೆ ಪಕ್ಷದ ಶಾಲು ಹೊದಿಸಿ ಜೆಡಿಎಸ್‍ಗೆ ಬರಮಾಡಿಕೊಂಡರು.

error: Content is protected !!