ಕೂಗು ನಿಮ್ಮದು ಧ್ವನಿ ನಮ್ಮದು

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನ ಕೆಳಗಿಳಿಸಲು RSS ಕಾರಣ: ಹೆಚ್‍.ಡಿ.ಕುಮಾರಸ್ವಾಮಿ

ಹಾಸನ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗಿಳಸಲು RSS ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍.ಡಿ ಕುಮಾರಸ್ವಾಮಿ ಹೇಳಿದ್ರು. ಹಾಸನದ ಸಕಲೇಶಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಕುಮಾರಸ್ವಾಮಿ, RSS ಬಗ್ಗೆ ನಾನು ಈ ಹಿಂದೆ ಹೇಳಿದ್ದ ಹೇಳಿಕೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು RSS ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದ್ರು.

ಉಪಚುನಾವಣೆ ಕುರಿತು ಮಾತನಾಡಿದ ಕುಮಾರಸ್ವಾಮಿ, ಉಪಚುನಾವಣೆಯ ೨ ಕ್ಷೇತ್ರಗಳನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಿಂದಗಿ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ೩ನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ ಎಂದು ಹೇಳುವವರು, ಅಭ್ಯರ್ಥಿ ಹಾಕಲು ಯೋಗ್ಯತೆ ಇಲ್ಲದೆ ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ರು. ಬಹಳ ಅಚ್ಚರಿ ಮೂಡುವಂತದ್ದು, ಎಂದ್ರೆ ದಿವಂಗತ ಹಿರಿಯ ಶಾಸಕ, ಜೆಡಿಎಸ್ ನಾಯಕ ಎಂ.ಸಿ ಮನಗೂಳಿ ಸಾಯುವ ಹದಿನೈದು ದಿನಗಳ ಮುಂಚೆ ಡಿಕೆಶಿ, ಸಿದ್ದರಾಮಯ್ಯ ಮಡಿಲಿಗೆ ಅವರ ಮಕ್ಕಳನ್ನ ಹಾಕಿ ನೋಡಿಕೊಳ್ಳಿ ಎಂದಿದ್ದರಂತೆ.

ಮನಗೂಳಿ ಪಾಪ ಅವರು, ಅಸಡ್ಡೆಯಿಂದ ಕೋರೋನಾ ಸಮಯದಲ್ಲಿ ಜನರ ಜೊತೆ ಕೆಲಸ ಮಾಡಲು ಹೋಗಿ ಸೀರಿಯಸ್ ಆಗಿ ಎಮರ್ಜೆನ್ಸಿ ಅಲ್ಲಿ ಇದ್ರು. ನಾವು ಅವರನ್ನು ಅಪೋಲೊಗೆ ಸೇರಿಸಿದ್ವಿ. ನಾವೇ ಹೋಗಿ ಅವರನ್ನು ನೋಡೋಕೆ ಆಗ್ಲಿಲ್ಲ. ನೋಡಲು ಒಳಗೆ ಬಿಡ್ತಿಲ್ಲ, ದಯವಿಟ್ಟು ಒಂದು ಮಾತು ಹೇಳಿ ಎಂದು ಅವರ ಮಕ್ಕಳು ನನಗೆ ಫೋನ್ ಮಾಡ್ತಿದ್ರು ಎಂದು ಕುಮಾರಸ್ವಾಮಿ ನೆನಪಿಸಿಕೊಂಡರು. ಯಾವಾಗ ಮನಗುಳಿ ಅವರು ಎದ್ದು ಡಿಕೆಶಿಯವರ ಮನೆಗೆ ಹೋಗಿದ್ರು? ಇದಕ್ಕಿಂತ ಹಸೀಸುಳ್ಳು ಮತ್ತೊಂದಿಲ್ಲ.

ಮನಗುಳಿ ಅವರು ಬದುಕಿದ್ದಾಗ ದೇವೇಗೌಡರ ಪ್ರತಿಮೆ ಮಾಡಿ ನಿಲ್ಲಿಸಿದ್ದಾರೆ. ಸಾಯುವವರೆಗೂ ದೇವೇಗೌಡರ ಸ್ವಂತ ತಮ್ಮನಿಗಿಂತ ಹೆಚ್ಚಾಗಿದ್ರು. ದೇವೇಗೌಡರಿಗಿಂತ ತನ್ನ ಮಕ್ಕಳನ್ನ ಡಿ.ಕೆ.ಶಿವಕುಮಾರ್ ಚೆನ್ನಾಗಿ ನೋಡ್ಕೋತಾರೆ ಎಂದು ಮನಗುಳಿ ಅವರ ಮಡಿಲಿಗೆ ಹಾಕಲು ಹೋಗಿದ್ರಾ? ರಾಜಕೀಯವಾಗಿ ಮತ ಪಡೆಯಲು ಕಾಂಗ್ರೆಸ್ ಅವರು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗದಂತ ನೀಚ ಕೆಲಸ ಕಾಂಗ್ರೆಸ್ ಅವರು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ರು.

error: Content is protected !!