ಕೂಗು ನಿಮ್ಮದು ಧ್ವನಿ ನಮ್ಮದು

ಸರ್ಕಾರ ರಚಿಸುವ ಅವಕಾಶ ನೀಡಿದರೆ ಚಿಕಿತ್ಸೆಗಾಗಿ ಹಣ ವ್ಯಯಿಸದಂಥ ವ್ಯವಸ್ಥೆ ಜಾರಿಗೆ ತರುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯ ಮುಂದಾಳತ್ವವಹಿಸಿರುವ ಹೆಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಓಡಾಡುವಾಗ ಅನಾರೋಗ್ಯದ ನಿಮಿತ್ತ ಧನಸಹಾಯ ಕೇಳಿದ ವ್ಯಕ್ತಿಯೊಬ್ಬನಿಗೆ ಸಹಾಯ ಮಾಡುವ ಭರವಸೆಯನ್ನು ಸಾರ್ವಜನಿಕವಾಗಿ ನೀಡಿದರು.

ಆದರೆ ಅದಕ್ಕೂ ಮೊದಲು ಅವರು ತಮಗೆ ಪ್ರತಿದಿನ ಚಿಕಿತ್ಸೆಗಾಗಿ ನೆರವು ಕೋರಿ ಪತ್ರ ಬರೆಯತ್ತಾರೆ, ಆದರೆ ತಾನೊಬ್ಬ ರೈತ ಮತ್ತು ತೋಟವೊಂದನನ್ನು ಬಿಟ್ಟರೆ ಬೇರೇನೂ ಇಲ್ಲ, ಹಾಗಾಗಿ ಎಲ್ಲರಿಗೆ ಸಹಾಯ ಮಾಡುವುದು ನನ್ನಿಂದಾಗದು ಎಂದು ಹೇಳಿದರು. ಒಂದು ಪಕ್ಷ ಮತದಾರರು ತಮಗೆ ಸರ್ಕಾರ ರಚಿಸುವ ಅವಕಾಶ ನೀಡಿದರೆ, ಚಿಕಿತ್ಸೆಗಾಗಿ ಒಂದೇ ರೂಪಾಯಿ ಸಹ ಖರ್ಚು ಮಾಡದಂಥ ವ್ಯವಸ್ಥೆ ಜಾರಿಗೆ ತರುವುದಾಗಿ ಅವರು ಹೇಳಿದರು.

error: Content is protected !!