ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ಬಗ್ಗೆ ಚೆನ್ನಾಗಿ ಗೊತ್ತು, 75ಕ್ಕಿಂತ ಹೆಚ್ಚು ಸ್ಥಾನ ಅದಕ್ಕೆ ಸಿಗಲ್ಲ: ಹೆಚ್ ಡಿ ಕುಮಾರಸ್ವಾಮಿ

ಕಾಂಗ್ರೆಸ್ ಬಗ್ಗೆ ಚೆನ್ನಾಗಿ ಗೊತ್ತು, 75ಕ್ಕಿಂತ ಹೆಚ್ಚು ಸ್ಥಾನ ಅದಕ್ಕೆ ಸಿಗಲ್ಲ: ಹೆಚ್ಮೈಸೂರು: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಮೇಲೆ ಭಯಂಕರ ಕೋಪವಿದೆ ಅನ್ನೋದು ಅವರ ಮಾತಲ್ಲೇ ಸ್ಪಷ್ಟವಾಗುತ್ತದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 75 ಕ್ಕಿಂತ ಹೆಚ್ಚು ಸ್ಥಾಮ ಸಿಗೋದಿಲ್ಲ ಅಂತ ಅವರು ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುತ್ತಾ ಹೇಳಿದರು. ಅಷ್ಟೆಲ್ಲ ಭಾಗ್ಯಗಳನ್ನು ಕೊಟ್ಟರೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಿಕ್ಕಿದ್ದು ಕೇವಲ 79 ಸ್ಥಾನ ಮಾತ್ರ ಎಂದು ಕುಮಾರಸ್ವಾಮಿ ಹೇಳಿದರು. ಬಾದಾಮಿಯಲ್ಲಿ ರೂ. 1, 200 ಕೋಟಿಗಳ ಅಭಿವೃದ್ಧಿ ಕೆಲಸಗಳು ನಡೆದಿರೋದು ತಾವು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆ ಮಾಡಿದ ಅನುದಾನದಿಂದ ಎಂದು ಅವರು ಹೇಳಿದರು

error: Content is protected !!