ಕೂಗು ನಿಮ್ಮದು ಧ್ವನಿ ನಮ್ಮದು

ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ:H.D.ಕುಮಾರಸ್ವಾಮಿ

ಶಿವಮೊಗ್ಗ: ರಾಜ್ಯದಲ್ಲಿ ಒಂದು ವರ್ಷಕ್ಕೆ ಮೊದಲು ಚುನಾವಣಾ ಸಿದ್ಧತೆ ನಡೆಸಿದ್ದೇವೆ. ಈಗಾಗಲೇ ರಾಜ್ಯದ 72 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆಸಿದ್ದೇನೆ. ಪ್ರತಿದಿನ 35 ರಿಂದ 40 ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದೇನೆ. ಪಂಚರತ್ನ ಯೋಜನೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶಿವಮೊಗ್ಗದ ಮಲವಗೊಪ್ಪದಲ್ಲಿ ತಿಳಿಸಿದರು. ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ. ಜಿಡಿಪಿಯ ಆಧಾರದ ಮೇಲೆ ನಾವು ಆರ್ಥಿಕ ಪರಿಸ್ಥಿತಿ ಅವಲೋಕನ ನಡೆಸಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ದುರ್ಬಳಕೆ ನಡೆಯುತ್ತಿದೆ ಎಂದರು.

ಬಿಜಾಪುರದ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಕಳಪೆ ಕಾಮಗಾರಿ ಆಗಿದೆ. ರಾಣೆಬೆನ್ನೂರಿನಲ್ಲಿ ಕೂಡ ಜಲ್ ಜೀವನ್ ಮಿಷನ್ ಫೇಲ್ ಆಗಿದೆ. ಸ್ವಚ್ಛ ಭಾರತ ಮಿಷನ್ ಎನ್ನುತ್ತಾರೆ ಆದರೆ ಹಳ್ಳಿಗಳಲ್ಲಿ ಇಂದಿಗೂ ಶೌಚಾಲಯಗಳ ಕೊರತೆ ಇದೆ. ತಲೆಗೊಂದು ಮುಂಡಾಸು ಮನೆಗೊಂದು ಸಂಡಾಸು, ಸ್ಲೋಗನ್ ಕೂಡ ಕಂಡಿದ್ದೇನೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ, ವೈದ್ಯರು ಮತ್ತು ಕಟ್ಟಡಗಳ ಕೊರತೆ ಇದೆ. ಗ್ರಾಮಪಂ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ಉಚಿತ ಶಿಕ್ಷಣ ನೀಡುವ ಬಗ್ಗೆ ನೀಲ ನಕ್ಷೆ ತಯಾರಿಸಿದ್ದೇನೆ ಎಂದು ಹೇಳಿದರು.

ಸಿಎಂ ಆಗಿಯೂ ಕೂಡ ನನ್ನ ಒಡೆತನದ 45 ಎಕರೆ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಆಗಿಲ್ಲ. ಈ ಎಲ್ಲಾ ಸಮಸ್ಯೆಗಳ ಹಿನ್ನಲೆಯಲ್ಲಿ ಪಂಚರತ್ನ ಯೋಜನೆಗಳನ್ನ ಕಾರ್ಯಕ್ರಮ ರೂಪಿಸಿದ್ದೇನೆ. ಸುಜುವಾಲಾ ಅವರು 200 ಯೂನಿಟ್ಟು ಖಚಿತ ಎರಡು ಸಾವಿರ ರೂ. ಖಚಿತ ಹೇಳಿಕೆ ನೋಡಿದ್ದೇನೆ. ಅವರೇ ಈ ಎರಡು ಯೋಜನೆಗಳಿಗೆ 25,000 ಕೋಟಿ ರೂ ಹಣ ಬೇಕು ಎಂದಿದ್ದಾರೆ. ಇಷ್ಟೊಂದು ಹಣವನ್ನು ಹೇಗೆ ಹೊಂದಿಸುತ್ತಾರೆ ಅವರು?4 0% ಕಮಿಷನ್ ಅನ್ನು ಬಿಗಿಯಾಗಿಸಿ 25000 ಕೋಟಿ ಹೊಂದಿಸುತ್ತಾರಂತೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಬಿಜೆಪಿ ಉಪಾಧ್ಯಕ್ಷನಿಗೆ ರೈತರ ಕಷ್ಟ ಏನು ಗೊತ್ತು: ರೈತರ ಸಾಲ ಮನ್ನಾ ಮಾಡಿದರೆ ಆರ್ಥಿಕ ಪರಿಸ್ಥಿತಿ ಅಲ್ಲೋಲಕಲ್ಲೋಲ ಆಗುತ್ತೆ ಎಂದು ಮಾತನಾಡುತ್ತಾರೆ. ಬಿಜೆಪಿ ಉಪಾಧ್ಯಕ್ಷನಿಗೆ ರೈತರ ಕಷ್ಟ ಏನು ಗೊತ್ತು ಎಂದು ವಿಜಯೇಂದ್ರ ವಿರುದ್ಧ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿಕ್ಕಮಗಳೂರಿನ ಮಹಾನುಭಾವ ನನ್ನ ಕುಟುಂಬದ ಬಗ್ಗೆ ಚರ್ಚೆ ನಡೆಸುತ್ತಾನೆ. ಕೆಎಂಎಫ್ ಇವತ್ತು ಅಭಿವೃದ್ದಿಯಾಗಿದ್ದರೆ ಅದಕ್ಕೆ ರೇವಣ್ಣರ ಕೊಡುಗೆ ಇದೆ. ಕೆಎಂಎಫ್ ನಷ್ಟದಲ್ಲಿರುವುದನ್ನು ಲಾಭಕ್ಕೆ ತರಲು ರೇವಣ್ಣರ ಶ್ರಮ ಇದೆ. ಜಯದೇವ ಆಸ್ಪತ್ರೆ ಗಿಂತ ಮತ್ತೊಂದು ಉದಾಹರಣೆ ಬೇಕಿಲ್ಲ ಎಂದು ತಿಳಿಸಿದರು.

ಇದಕ್ಕೂ ದೇವೇಗೌಡರ ಕುಟುಂಬ ಕಾರಣ. ಹಳೆ ಅಂಬಾಸಿಡ್ರಿಗೆ ವರ್ಕೌಟ್ ಆಗಲ್ವಂತೆ. ರೇಂಜ್ ರೋವರ್ ಜಾಗ್ವಾರ್ ಆಗ್ಬೇಕಂತೆ. ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ನಿಮ್ಮ ಅಭಿವೃದ್ಧಿ ಆಗುತ್ತಿದೆ. ಒಬ್ಬೊಬ್ಬರ ಆಸ್ತಿ ಎಷ್ಟು ಹೆಚ್ಚಾಗಿದೆ ಕಣ್ಣಾರೆ ನೋಡಿದ್ದೇವೆ. ನಾವು 60 ವರ್ಷ ಆದರೂ ಹೀಗೆಯೇ ಇದ್ದೇವೆ. ಜೆಡಿಎಸ್‌ಗೆ ವೋಟ್ ಹಾಕಿದ್ದಾರೆ ದೇವೇಗೌಡರ ಎಟಿಎಂ ಎನ್ನುತ್ತಾರೆ. ಶಿವಮೊಗದಲ್ಲಿ ಒಂದು ರೌಂಡ್ ಹಾಕಿದರೆ ಇವರ ಎಟಿಎಂ ಏನು ಎಂಬುದು ಕಾಣುತ್ತದೆ. ಬಿಜೆಪಿಯವರ ಕಲ್ಚರು ಹೆಗ್ಗಣ ಬಿದ್ದಿರುವ ಕಲ್ಚರ್ ಹೆಗ್ಗಣ ತೆಗೆದು ಸರಿಪಡಿಸಿಕೊಳ್ಳಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಭದ್ರಾವತಿ ವಿಐಎಸ್‌ಎಲ್ ಏನು ಮಾಡುವುದು ಬೇಡ ಸುಮ್ಮನೆ ಬಿಟ್ಟು ಬಿಡ್ರಪ್ಪ ಎಂದು ಹೇಳಿದ್ದೇನೆ. ಶರಾವತಿ ನದಿ ಸಂತ್ರಸ್ತರ ಸಮಸ್ಯೆ ಕೂಡ ಹಾಗೆ ಉಳಿದುಕೊಂಡಿದೆ. ನನ್ನ ಕೈಯಲ್ಲಿ ಸ್ವತಂತ್ರ ಸರ್ಕಾರ ಇರಲಿಲ್ಲ ಇನ್ನೊಬ್ಬರ ಹಂಗಿನಲ್ಲಿ ಕೆಲಸ ಮಾಡಬೇಕಿತ್ತು ಹಾಗಾಗಿ ಇತಿಮಿತಿ ಇತ್ತು. ನರೇಂದ್ರ ಮೋದಿಯವರ ಕನಸಿನ ಅಮೃತ ಮಹೋತ್ಸವ ಕಾಲ ಬಿಜೆಪಿಯವರ ನೋಡಿದೆ. ನನಗೆ 25 ವರ್ಷ ಬೇಡ ಕೇವಲ ಐದು ವರ್ಷ ಅಧಿಕಾರ ಕೊಡಿ. ಕಳೆದ ಮೂರು ಚುನಾವಣೆಗಳ ಪೈಕಿ ಚುನಾವಣೆ ಜೆಡಿಎಸ್ ಪರವಾಗಿದೆ. ಕುಮಾರಸ್ವಾಮಿ ಬಂದರೆ ಜನ ಸೇರ್ತಾರೆ, ವೋಟ್ ಆಗಿ ಪರಿವರ್ತನೆ ಆಗೋಲ್ಲ ಎಂಬುದು ಬದಲಾಗಲಿದೆ ಎಂದರು.

error: Content is protected !!