ಕೂಗು ನಿಮ್ಮದು ಧ್ವನಿ ನಮ್ಮದು

ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಹೆಚ್‍.ಡಿ.ಕುಮಾರಸ್ವಾಮಿ

ಶಿವಮೊಗ್ಗ: ಹೆಚ್.ಡಿ.ಕುಮಾರಸ್ವಾಮಿ ಭದ್ರಾವತಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಭದ್ರಾವತಿ ತಾಲೂಕಿನ ಗೋಣಿಬೀಡಿ ಅಲ್ಲಿರುವ ಅಪ್ಪಾಜಿ ಗೌಡರ ಪುತ್ಥಳಿ ಅನಾವರಣದ ಬಳಿಕ ಸುದ್ದಿಗಾರರೊಂದಿಗ ಮಾತನಾಡಿದ ಹೆಚ್.ಡಿ.ಕೆ ಭದ್ರಾವತಿ ಕ್ಷೇತ್ರದ ಜನರ ಮತ್ತು ಅಪ್ಪಾಜಿ ಗೌಡರ ಬೆಂಬಲಿಗರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಈಗಾಗಲೇ ಕ್ಷೇತ್ರದ ಜನರೇ ತಮ್ಮ ಅಭ್ಯರ್ಥಿ ಯಾರೆಂದು ನಿರ್ಧರಿಸಿದ್ದಾರೆ. ಹಾಗೆಯೇ ಸಹೋದರಿ ಶಾರದಾ ಅಪ್ಪಾಜಿ ಗೌಡರನ್ನು ಮುಂದಿನ ಅಭ್ಯರ್ಥಿ ಮಾಡುತ್ತೇವೆ ಎಂದು ತಿಳಿಸಿದ್ರು.

ಇದೇ ತಿಂಗಳು ೨೯ ರಂದು ಬೆಂಗಳೂರಿನಲ್ಲಿ ಕಾರ್ಯಾಗಾರ ಮಾಡುತ್ತಿದ್ದು, ನಿರ್ಧಾರ ಮಾಡುತ್ತೇವೆ. ೧೪೦ ಅಭ್ಯರ್ಥಿಗಳ ಮೊದಲ ಹಂತದ ಕಾರ್ಯಾಗಾರವನ್ನು ಮಾಡುತ್ತಿದ್ದೇವೆ. ಅಲ್ಲಿ ಎಲ್ಲ ವಿಷಯವನ್ನು ಚರ್ಚೆ ಮಾಡುತ್ತೇವೆ ಎಂದು ತಳಿಸಿದ್ರು. ದೇವಸ್ಥಾನಗಳ ತೆರವು ಕುರಿತು ಮಾತನಾಡಿದ ಹೆಚ್ಡಿಕೆ BJP ಹಿಂದೂಗಳ ಭಾವನೆಗೆ ಬೆಲೆಕೊಡಬೇಕಾಗಿತ್ತು. ಅದು ಅಲ್ಲದೇ ಹಿಂದೂತ್ವದ ಹೆಸರು ಹೇಳಿ ಅವರು ಸರ್ಕಾರಕ್ಕೆ ಬಂದಿದ್ರು. ಅವರ ಸರ್ಕಾರ ಇರಬೇಕಾದ್ರೆ ದೇವಾಲಯಗಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಅವರು ಈ ನಡೆ ತೆಗೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದ್ರೆ ಅವರು ಅದರಲ್ಲಿ ಎಡವಿದ್ದಾರೆ ಎಂದು ಹೆಚ್ಡಿಕೆ ಹೇಳಿದ್ದಾರೆ.

error: Content is protected !!