ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಸಜ್ಜಾಗಿದ್ದು, 12 ಭರಸವಸೆಗಳ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಹೌದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇಂದು 12 ಭರವಸೆಗಳನ್ನು ಘೋಷಣೆ ಮಾಡಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಭರವಸೆ ಈಡೇರಿಸುವುದಾಗಿ ಅಭಯ ನೀಡಿದ್ದಾರೆ. ಜೆಡಿಎಸ್ನ 12 ಭರವಸೆಗಳು
- ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ. 1.ಕನ್ನಡವೇ ಮೊದಲು
- ಶಿಕ್ಷಣವೇ ಆಧುನಿಕ ಶಕ್ತಿ
- ಆರೋಗ್ಯ ಸಂಪತ್ತು
- ರೈತ ಚೈತನ್ಯ
- ಹಿರಿಯ ನಾಗರಿಕರಿಗೆ ಸನ್ಮಾನ
- ಯುವಜನ ಸಬಲೀಕರಣ
- ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ
- ವಿಕಲಚೇತನರಿಗೆ ಆಸರೆ
- ವೃತ್ತಿನಿರತ ವಕೀಲರ ಅಭ್ಯುದಯ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಏಳಿಗೆ
- ಆರಕ್ಷರಿಗೆ ಅಭಯ
- ಈ ಸಂಬಂಧ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು ಮುಸ್ಲಿಂ ಸಮುದಾಯಕ್ಕೆ ನಾನು ಶೇ 4ರಷ್ಟು ಮೀಸಲಾತಿ ಕೊಟ್ಟಿದ್ದೆ. ಈ ಜೀವ ಯಾರಿಗೂ ಮೋಸ ಮಾಡಿಲ್ಲ. ಎಲ್ಲಾ ವರ್ಗದವರಿಗೂ ಸಮಾನವಾದ ಅವಕಾಶ ಕೊಟ್ಟಿದ್ದೇನೆ. ಆಕಸ್ಮಿಕವಾಗಿ ಪ್ರಧಾನಿ ಆಗಿರಲಿಲ್ಲ, ಎಲೆಕ್ಟೆಡ್ ಪ್ರೈಮ್ ಮಿನಿಸ್ಟರ್. ಈಗ ವಾಲ್ಮೀಕಿ ಸಮುದಾಯಕ್ಕೆ ಏನು ಮಾಡಿದ್ದಾರೆ ಎಂದು ಗೊತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಏನು ಮಾಡಿದರು ಎಂಬುದು ಸಹ ಗೊತ್ತಿದೆ. ಸುಗತ ಶ್ರೀನಿವಾಸ್ ನನ್ನದೊಂದು ಪುಸ್ತಕ ಬರೆದಿದ್ದಾರೆ ಎಂದು ತಿಳಿಸಿದರು.
ಎಲ್ಲಾ ಹೊಣಗಾರಿಗೆ ಹೆಚ್.ಡಿ ಕುಮಾರಸ್ವಾಮಿ ಹೆಗಲಿಗೆ
ಕಮ್ಯುನಿಸ್ಟ್ ಪಾರ್ಟಿಯವರು ನನ್ನ ಸಂಪರ್ಕ ಮಾಡಿದ್ದರು. ನಾನು ಆಗ ಆಸ್ಪತ್ರೆಯಲ್ಲಿ ಇದ್ದೆ. ಎಲ್ಲಾ ಹೊಣೆಕಾರಿಗೆ ಹೆಚ್.ಡಿ ಕುಮಾರಸ್ವಾಮಿ ಅವರದ್ದು. ಮೂರು ಕ್ಷೇತ್ರಗಳಿಗೆ ಇಂದು ಹೆಚ್ಡಿ ಕುಮಾರಸ್ವಾಮಿ ಹೋಗುತ್ತಿದ್ದಾರೆ. ಇದು ಪ್ರಣಾಳಿಕೆ ಅಲ್ಲ ಭರವಸೆ ಎಂದರು. ಹಾಸನದಲ್ಲಿ ಸ್ವರೂಪ್ ಗೆಲುವಿಗೆ ಹೆಚ್.ಡಿ.ರೇವಣ್ಣ ಶ್ರಮಿಸುತ್ತಾರೆ. ಸ್ವರೂಪ್ ಗೆಲುವಿಗೆ ಶಕ್ತಿಮೀರಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಎಲ್ಲರೂ ಒಟ್ಟಾಗಿ ಸ್ವರೂಪ್ ಗೆಲ್ಲಿಸಬೇಕು ಎಂದು ಸೂಚಿಸಿದ್ದೇನೆ. ರೇವಣ್ಣ ಹಾಸನಕ್ಕೆ ಹೋಗಿದ್ದಾರೆ. ಅವನ ಗೆಲುವಿಗೆ ಶಕ್ತಿ ಮೀರಿ ಕೆಲಸ ಮಾಡೋದಾಗಿ ರೇವಣ್ಣ ಹೇಳಿದ್ದಾರೆ ಎಂದು ಸೂಚನೆ ನೀಡಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪರಿಷತ್ ಸದಸ್ಯ ಟಿ ಎ ಶರವಣ ಉಪಸ್ಥಿತರಿದ್ದರು