ಬೆಂಗಳೂರು: ಮತಾಂತರ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿತ್ರದುರ್ಗದಲ್ಲಿ ೨೦ ಸಾವಿರಕ್ಕೂ ಅಧಿಕ ಜನ ಮತಾಂತರ ಆಗಿದ್ದಾರೆ. ಅದರಲ್ಲಿ ನನ್ನ ಹೆತ್ತ ತಾಯಿಯನ್ನು ಮತಾಂತರ ಮಾಡಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ನನ್ನ ಹೆತ್ತ ತಾಯಿಯನ್ನು ಮತಾಂತರ ಮಾಡಿದ್ದಾರೆ. ಚರ್ಚ್ಗಳಲ್ಲಿ ಬ್ರೈನ್ ವಾಶ್ ಮಾಡುತ್ತಿದ್ದಾರೆ. ನನ್ನ ಅಮ್ಮನಿಗೂ ಬ್ರೈನ್ ವಾಶ್ ಮಾಡಿದ್ದಾರೆ, ನನ್ನ ತಾಯಿ ಕ್ರಿಶ್ಚಿಯನ್ ರಿಂಗ್ ಟೋನ್ ಹಾಕಿಕೊಳ್ಳುತ್ತಾರೆ. ಕ್ರಿಶ್ಚಿಯನ್ ಫೋಟೋ ಹಾಕಿಕೊಳ್ಳುತ್ತಾರೆ. ಕೇಳಿದ್ರೆ ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ. ದಲಿತರು, ಹಿಂದುಳಿದ ವರ್ಗದವರನ್ನು ಹೆಚ್ಚು ಮತಾಂತರ ಮಾಡುತ್ತಿದ್ದಾರೆ.
ಮತಾಂತರ ಮಾಡೋದನ್ನು ವಿರೋಧಿಸಿದ್ರೆ ಜಾತಿ ನಿಂದನೆ ಕೇಸ್ ಹಾಕುತ್ತಾರೆ ಏನ್ ಮಾಡೋದು? ಇದೊಂದು ದೊಡ್ಡ ಪಿಡುಗು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಗೂಳಿಹಟ್ಟಿ ಶೇಖರ್ ಒತ್ತಾಯ ಮಾಡಿದ್ದಾರೆ ಈ ವೇಳೆ ಮಾತನಾಡಿರುವ ಶಾಸಕ ಕೆ.ಜಿ.ಬೋಪಯ್ಯ ಹೌದು, ಎಲ್ಲ ಕಡೆಯಲ್ಲೂ ಮತಾಂತರ ಬಹಳ ಆಗುತ್ತಿದೆ. ಮತಾಂತರ ತಡೆಗೆ ಉತ್ತರ ಪ್ರದೇಶದ ರೀತಿ ನಾವು ಕಾನೂನು ತರಬೇಕಿದೆ. ಕಡಿವಾಣ ಹಾಕಬೇಕು ಎಂದ್ರೆ ಕಾಯ್ದೆ ತನ್ನಿ ಎಂದು ಆಗ್ರಹ ಮಾಡಿದ್ದಾರೆ. ಮತಾಂತರದ ಸಮಸ್ಯೆಯನ್ನು ಆಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ಗಮನದಲ್ಲಿ ಇದೆ. ಇದೊಂದು ಅಪರಾಧವಾಗಿದೆ. ಅಮಿಷ ಒಡ್ಡಿ ಮತಾಂತರ ಮಾಡುವುದು ಅಪರಾಧ. ಶಾಂತಿ ಭಂಗವುಂಟು ಮಾಡುವಂತಹ ಆತಂಕ ಇದೆ. ರಾಜ್ಯ ಸರ್ಕಾರ ಮುಂದೆ ಏನ್ ಮಾಡಬೇಕು ಎಂಬುವುದನ್ನು ನಿರ್ಧಾರ ಮಾಡಲಿದೆ ಎಂದು ತಿಳಿಸಿದ್ರು.