ಕೂಗು ನಿಮ್ಮದು ಧ್ವನಿ ನಮ್ಮದು

5 ಲಕ್ಷ ಬೆಲೆ ಬಾಳುವ ಚಿನ್ನದ ಮಾಸ್ಕ್ ಧರಿಸಿ ಸಖತ ಸುದ್ದಿಯಲ್ಲಿ ಇರುವ ಆ ಬಾಬಾ ಯಾರು ಗೊತ್ತಾ!

ಲಕ್ನೋ: ನಾವು ಕೋವಿಡ್ ಸಂಕಷ್ಟ ಸಮಯಲದಲ್ಲಿ ಹಲವು ಬಗೆಯ ಮಾಸ್ಕ್ ಗಳನ್ನು ಧರಿಸಿ ರಕ್ಷಣೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೋಬ್ಬ ಬಾಬಾ ಲಕ್ಷ ಲಕ್ಷ ಬೆಲೆ ಬಾಳುವ ಅದು ಚಿನ್ನದ ಮಾಸ್ಕ್ ಧರಿಸಿ ಸಖತ ಸುದ್ದಿಯಲ್ಲಿ ಇದ್ದಾರೆ. ಅವರು ಯಾರು ಗೋತ್ತಾ ಇವರೇ ನೋಡಿ..

ಚಿನ್ನದ ಮಾಸ್ಕ್ ಧರಿಸಿದ ಬಾಬಾ

ಇವರೇ ಕಾನ್ಪುರದ ಬಾಬಾ ಈಗ ಚಿನ್ನದ ಮಾಸ್ಕ್ ಹಾಕಿ ಸಖತ್ ಸುದ್ದಿಯಲ್ಲಿದ್ದಾರೆ. ಗೋಲ್ಡನ್ ಬಾಬಾ ಎಂದೇ ಹೆಸರು ವಾಸಿಯಾಗಿರುವ ಮನೋಜ್ ಸೆಂಗರ್ ಚಿನ್ನದ ಮಾಸ್ಕ್ ಹಾಕಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೊರೊನಾ ಸೋಂಕಿನಿಂದ ರಕ್ಷಣೆಯನ್ನು ಪಡೆಯಲು ಎನ್ 95, ಕ್ಲಾಥ್ ಮಾಸ್ಕ್, ಸರ್ಜಿಕಲ್ ಮಾಸ್ಕ್ ಹೀಗೆ ಹಲವು ರೀತಿಯ ಮಸ್ಕ್‍ಗಳನ್ನು ಹಾಕಿಕೊಳ್ಳುತ್ತಿರುವವರಲ್ಲಿ ಈ ಬಾಬಾ ಕೊಂಚ ವಿಭಿನ್ನವಾಗಿ ಚಿನ್ನದ ಮಾಸ್ಕ್ ಮಾಡಿಕೊಂಡಿದ್ದಾರೆ.

ಚಿನ್ನದ ಮಾಸ್ಕ್

ಬರೋಬ್ಬರಿ 5 ಲಕ್ಷ ಬೆಲೆ ಬಾಳುವ ಈ ಮಾಸ್ಕ್ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿ ಕೊರೊನಾ ನಿಯಮವನ್ನು ಪಾಲಿಸಿ. ಚಿನ್ನದ ಮೇಲಿನ ಪ್ರೀತಿ ತನಗೆ ಸಮಾಜ ವಿರೋಧಿ ಅಂಶಗಳಿಂದ ಬೆದರಿಕೆಗಳನ್ನು ತಂದುಕೊಟ್ಟಿದೆ. ನಾನು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನನ್ನನ್ನು ಸಾರ್ವಕಾಲಿಕವಾಗಿ ರಕ್ಷಿಸಲು ಇಬ್ಬರು ಸಶಸ್ತ್ರ ಅಂಗರಕ್ಷಕರನ್ನು ಹೊಂದಿದ್ದೇನೆ ಎಂದು ಮನೋಜ್ ಸೆಂಗರ್ ಹೇಳಿದ್ದಾರೆ. 

error: Content is protected !!