ಕೂಗು ನಿಮ್ಮದು ಧ್ವನಿ ನಮ್ಮದು

ಶ್ರೀಕೃಷ್ಣನ ಮೂರ್ತಿ ಕೈ ತುಂಡಾಗಿದೆ ಆಸ್ಪತ್ರೆಗೆ ತಂದ ಅರ್ಚಕರು

ಲಕ್ನೋ: ಶ್ರೀಕೃಷ್ಣನ ವಿಗ್ರಹ ಶುಚಿ ಮಾಡುವಂತಹ ಸಮಯದಲ್ಲಿ ಶ್ರೀಕೃಷ್ಣನ ವಿಗ್ರಹ ಹಾನಿಗೊಂಡಿದೆ. ಅದಕ್ಕೆ ಚಿಕಿತ್ಸೆ ನೀಡಿ ಎಂದು ಅರ್ಚಕರೊಬ್ರು ಆಸ್ಪತ್ರೆಗೆ ಬಂದುಪಟ್ಟು ಹಿಡಿದ ಘಟನೆಯು ಅಗ್ರಾದಲ್ಲಿ ಸಂಭವಿಸಿದೆ. ಲೇಖ್ ಸಿಂಗ್ ಅರ್ಜುನ್ ನಗರದ ಖೇರಿಯಾ ಮೋಡ್‍ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಇವರು ಮುಂಜಾನೆ ವಿಗ್ರಹವನ್ನು ಶುಚಿ ಮಾಡುವಾಗ ಆಕಸ್ಮಿಕವಾಗಿ ವಿಗ್ರಹದ ಕೈ ಮುರಿದಿದೆ. ಈ ಕೈಯನ್ನು ಜೋಡಿಸಿಕೊಡಿ ಎಂದು ವೈದ್ಯರ ಹತ್ತಿರ ಅರ್ಚಕರು ಹಠ ಹಿಡಿದಿದ್ದಾರೆ.

ಈ ವ್ಯಕ್ತಿಯ ವಿಚಿತ್ರ ವರ್ತನೆಗೆ ಅಚ್ಚರಿಗೊಂಡ ವೈದ್ಯರು ಶ್ರೀ ಕೃಷ್ಣ ಹೆಸರಿಲ್ಲಿ ನೋಂದವಣಿ ಮಾಡಿಕೊಂಡಿದ್ದಾರೆ. ಬಾಲ ಕೃಷ್ಣನ ವಿಗ್ರಹಕ್ಕೆ ಬ್ಯಾಂಡೇಜ್ ಸುತ್ತಿದ್ದಾರೆ. ಈ ಫೋಟೋಗಳು ಈಗ ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಆಸ್ಪತ್ರೆಯಲ್ಲಿ ಮೊದಲು ನನ್ನ ವಿನಂತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ಬೇಸರವಾಗಿ ನಾನು ದೇವರ ವಿಗ್ರಹವನ್ನು ಹಿಡಿದು ಅಳಲು ಪ್ರಾರಂಭಿಸಿದೆ. ಆಮೇಲೆ ಅವರು ಶ್ರೀ ಕೃಷ್ಣನಿಗೆ ಬ್ಯಾಂಡೇಜ್ ಹಾಕಿದ್ರು ಎಂದು ಲೇಖ್ ಸಿಂಗ್ ಹೇಳಿದ್ರು.

error: Content is protected !!