ಕೂಗು ನಿಮ್ಮದು ಧ್ವನಿ ನಮ್ಮದು

ಕಾರಿಗೆ ಅಡ್ಡ ಬಂದ ಮೊಲ ಉಳಿಸಲು ಹೋಗಿ ಇನ್ನೊವಾ ಕಾರು ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ಚಾಮರಾಜನಗರ: ಮೊಲದ ಮರಿ ರಕ್ಷಿಸಲು‌ ಹೋಗಿ ಕಾರು ಪಲ್ಟಿಯಾಗಿ, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಡೆದಿದೆ.

ರಸ್ತೆಗೆ ಅಡ್ಡಲಾಗಿ ಬಂದ ಮೊಲದ ಮರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಆಗಿದೆ. ಮೈಸೂರಿನ ಮೂಲದವರಾದ ಗಿರೀಶ್ (38), ಅನಿಲ್ (48) ಎಂಬುವರಿಗೆ ಗಭೀರ ಗಾಯವಾಗಿದ್ದು. ಅಶೋಕ್, ಮೋಹನ್ ಹಾಗೂ ಅರುಣ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇವರು ಮೈಸೂರಿನಲ್ಲಿನ ತಮ್ಮ ಜಮೀನಿಗೆ ಕೂಲಿ ಆಳುಗಳನ್ನು ನೇಮಿಸುವ ಸಲುವಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಜಾಗೇರಿ ಗ್ರಾಮಕ್ಕೆ ಆಗಮಿಸಿದ್ದು ಕೆಲಸ ಮುಗಿಸಿ ಕಾರಲ್ಲಿ ಹಿಂತಿರುಗುವಾಗ ರಸ್ತೆ ಮಧ್ಯೆ ಬಂದ ಮೊಲದ‌ ಮರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಯಾತಪ್ಪಿ ಕಾರು ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ. ತಕ್ಷಣ ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ‌ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.

error: Content is protected !!