ಉತ್ತರ ಕನ್ನಡ: ಒಂದು ಕಡೆ ಚಂಡಮಾರುತದಿಂದ ಮಳೆ ಗಾಳಿಗೆ ಜನ ತತ್ತರಿಸುತ್ತಿದ್ದರೆ, ಇನ್ನೊಂದು ಭಾಗದ ಜನರು ಮಳೆರಾಯನಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಹೌದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೀರಿನ ಅಭಾವ ಶುರುವಾಗಿದೆ. ಅದರಂತೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದಲ್ಲಿ ರೈತ ಮಹಿಳೆಯರು ಕಪ್ಪೆಗಳ ಮದುವೆ ಮಾಡಿ, ಮಳೆರಾಯನ ಹಾಡು ಹೇಳುತ್ತ, ಮಳೆಗಾಗಿ ಪಾರ್ಥನೆ ಮಾಡಿದ್ದಾರೆ. ಕಪ್ಪೆಗಳನ್ನ ವಿಶೇಷ ಅಲಂಕೃತ ಬುಟ್ಟಿಯಲ್ಲಿ ಇರಿಸಿ, ತಲೆ ಮೇಲೆ ಹೊತ್ತು, ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡು ಹೇಳಿ ಪ್ರಾರ್ಥಿಸಿದ್ದಾರೆ.