ಬೆಳಗಾವಿ: ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ಮಾಡಿದ ಲಾಕಡೌನದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಅನೇಕ ಜನತೆಗೆ 1250 ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾರ್ಯಕ್ಕೆ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಸಂತಸ ವ್ಯಕ್ತ ಪಡಿಸಿದ್ದಾರೆ. ಬುಧವಾರ ರಾಜ್ಯದ ಮುಖ್ಯಮಂತ್ರಿಗಳು ಘೊಷಿಸಿದ ಪ್ಯಾಕೇಜ್ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಅನೇಕ ಶ್ರಮಿಕ ವರ್ಗ ಲಾಕ್ ಡೌನ್ ದಿಂದ ಬಹಳಷ್ಟು ತೊಂದರೆಗೆ ಒಳಗಾಗಿತ್ತು. ಅವರ ಸಹಾಯಕ್ಕೆ ಮುಂದಾಗಿ ರಾಜ್ಯ ಬಿಜೆಪಿ ಸರಕಾರ ಶ್ರಮಿಕ ವರ್ಗದವರಿಗೆ 1250 ಕೋಟಿ ರೂಪಾಯಿಯ ಸಹಾಯಧನ ಘೋಷಣೆ ಮಾಡಿರುವುದರಿಂದ ಅವರ ಉಪಜೀವನಕ್ಕೆ ಸ್ವಲ್ಪ ಸಹಕಾರಿಯಾದಂತಾಗಿದೆ ಎಂದರು. ಹೂ ಬೆಳೆಗಾರ ರೈತರಿಗೆ ಪ್ರತಿ ಹೆಕ್ಟೇರಗೆ 10 ಸಾವಿರ ರೂ. ಕಟ್ಟಡ ಕಾರ್ಮಿಕರಿಗೆ, ಟ್ಯಾಕ್ಸಿ, ಮಾಕ್ಸಿಕ್ಯಾಬ್, ಅಟೋ ಚಾಲಕರಿಗೆ 3 ಸಾವಿರ ರೂಪಾಯಿ, ಕ್ಷೌರಿಕರಿಗೆ, ರಸ್ತೆ ಬದಿ ವ್ಯಾಪಾರಸ್ಥರಿಗೆ 2 ಸಾವಿರ ರೂಪಾಯಿ, ಕಲಾವಿಧರಿಗೆ, ಕಲಾ ತಂಡಗಳಿಗೆ 2000 ರೂಪಾಯಿ. ಹಣ್ಣು, ತರಕಾರಿ ಬೆಳೆಗಾರ ರೈತರಿಗೆ 10 ಸಾವಿರ ರೂ. ಸಹಾಯ ಧನ ಘೋಷಿಸಲಾಗಿದೆ.
ಹೂ ಹಣ್ಣು ವರ್ತಕರಿಗೆ 3 ಸಾವಿರ ಸಹಾಯಧನ ಘೋಷಿಸಲಾಗಿದೆ. ಮುಂಗಾರು ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಲಾಕ್ ಡೌನ್ ದಿಂದ ರೈತರು ಸಂಕಷ್ಟದಲ್ಲಿದ್ದು, ರೈತರ ಹಾಗೂ ಸ್ವಸಹಾಯ ಸಂಘಗಳ, ಸೊಸೈಟಿ ಸಾಲ, ಭೂ ಅಭಿವೃದ್ಧಿ ಬ್ಯಾಂಕ್ ಮೂಲಕ ಪಡೆದ ಸಾಲಗಳ ಮರುಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಿ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ರೈತರಿಗೆ ಆಸರೆಯಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಸರ್ವ ಶ್ರಮಿಕ ವರ್ಗಕ್ಕೆ ಆರ್ಥಿಕ ನೆರವು ನೀಡಿದ ಮುಖ್ಯ ಮಂತ್ರಿಗಳ ನಡೆಗೆ ಟೀಕಿಸುವದನ್ನೆ ಮೈಗೂಡಿಸಿಕೊಂಡ ವಿರೊಧಿಗಳಿಗೆ ಹತಾಶ ಭಾವನೆ ಕಾಡುತ್ತಿದೆ ಎಂದರು.