ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸುರಿದ ಮಳೆಗೆ ಬೆಳೆ ಹಾನಿಯಾಗಿದೆ. ಬಿರುಗಾಳಿ, ಮಳೆ ರಭಸಕ್ಕೆ ದಾಳಿಂಬೆ, ನಿಂಬೆ ಬೆಳೆ ನೆಲಕಚ್ಚಿದೆ. ವಿಜಯಪುರ ತಾಲೂಕಿನ ಆಹೇರಿ, ಜಂಬಗಿ ಗ್ರಾಮಗಳಲ್ಲಿ ಹಾನಿಯಾಗಿದೆ.
ತೋಟಗಾರಿಕೆ ಬೆಳೆ ನೆಲಕಚ್ಚಿದ್ದರಿಂದ ನೂರಾರು ರೈತರು ಕಂಗಾಲಾಗಿದ್ದಾರೆ. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.