ಕೂಗು ನಿಮ್ಮದು ಧ್ವನಿ ನಮ್ಮದು

ಗುರುಕುಲದ ಹಳೆಯ ವಿದ್ಯಾರ್ಥಿಗಳಿಂದ ಹುಕ್ಕೇರಿಯ ದೇವಸ್ಥಾನದ ಅರ್ಚಕರಿಗೆ ಆಹಾರ ಕಿಟ್ಟ ವಿತರಣೆ

ಬೆಳಗಾವಿ: ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಹುಕ್ಕೇರಿ ಹಿರೇಮಠ ಗುರುಕುಲದ ಹಳೆಯ ವಿದ್ಯಾರ್ಥಿಗಳಿಂದ ಹುಕ್ಕೇರಿ ದೇವಸ್ಥಾನಗಳ ಅರ್ಚಕರಿಗೆ ಆಹಾರದ ಕಿಟ್ಟ ಹಾಗೂ ಸಸಿಗಳನ್ನು ಇಂದು ವಿತರಿಸಲಾಯಿತು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಗುರುಕುಲದ ಹಳೆಯ ವಿದ್ಯಾರ್ಥಿಗಳು ಇಂದು ಎಲ್ಲಾ ದೇವಸ್ಥಾನಗಳ ಅರ್ಚಕರಿಗೆ ಆಹಾರದ ಕಿಟ್ಟನ್ನ ವಿತರಿಸಿರುವುದು ಸಂತಸದ ಸಂಗತಿ. ಇಲ್ಲಿ ಓದಿದ ವಿದ್ಯಾರ್ಥಿಗಳು ಸಾಕಷ್ಟು ದೇವಸ್ಥಾನದ ಅರ್ಚಕರಾಗಿದ್ದಾರೆ ಊರಿನ ಪುರೋಹಿತ ರಾಗಿದ್ದಾರೆ ಅಂದರೆ ಅರ್ಚಕರಿಂದ ಅರ್ಚಕರಿಗೆ ಗೌರವ ಇಂದು ನಡೆದಿರುವುದು ಅಭಿಮಾನದ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ನಿಲಜಿಯ ಅಲೌಕಿಕಾನಂದ ಆಶ್ರಮದ ಶ್ರೀ ಶಿವಾನಂದ ಗುರೂಜಿಯವರು ಭಾಗವಹಿಸಿ ಮಾತನಾಡುತ್ತಾ ಹುಕ್ಕೇರಿ ಹಿರೇಮಠ ಸಂಸ್ಕಾರವನ್ನು ಬೆಳೆಸುವುದರೊಂದಿಗೆ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಪರಿಸರ ಪ್ರೀತಿ ಮತ್ತು ಪ್ರಾಣಿಗಳ ಮೇಲೆ ದಯೆ ಹೊಂದಿರುವ ಶ್ರೀಗಳು ಎಲ್ಲರಿಗೂ ಮಾದರಿಯಾಗಿದ್ದಾರೆ ಶಿವೈಕ್ಯಾನಂದ ಗುರೂಜಿಯವರು ಸಿದ್ಧಾನಂದ ಗುರೂಜಿ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಪ್ರಾಸ್ತಾವಿಕವಾಗಿ ಮಾತನಾಡಿದ ಗುರುಕುಲದ ಮುಖ್ಯಸ್ಥರಾದ ವಿದ್ವಾನ್ ಸಂಪತ್ತಕುಮಾರ ಶಾಸ್ತ್ರೀಗಳವರು ಹುಕ್ಕೇರಿ ಗುರುಕುಲದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳೆಲ್ಲ ವಿಶೇಷವಾದ ಸಾಮಾಜಿಕ ಕಾರ್ಯ ಮಾಡಿದ್ದಾರೆ ಇವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದರು. ನಗರದ ಎಲ್ಲಾ ದೇವಸ್ಥಾನಗಳ ಅರ್ಚಕರು ಭಾಗವಹಿಸಿ ಕಿಟ್ಟನ್ನು ಸ್ವಿಕರಿಸಿದರು, ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ ಶ್ರೀ ಗಳು ಇವತ್ತಿನ ದಿನ ಸಂಕಷ್ಟದಲ್ಲಿರುವ ಅರ್ಚಕರಿಗೆ ಆಹಾರದ ಕಿಟ್ಟ ಹಾಗೂ ಸಸಿಗಳನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ ಎಂದರು. ಅರಣ್ಯ ಇಲಾಖೆ ಅಧಿಕಾರಿ ಲಕ್ಷ್ಮಣ ವಾಳೆದ , ಮಲ್ಲಯ್ಯ ಗೂಡಿ, ಈರಣ್ಣಾ ಗಣಾಚಾರಿ, ನಿಂಗಯ್ಯ ಹಿರೇಮಠ, ಮಲ್ಲಯ್ಯ ಮಠಪತಿ, ಬಸವರಾಜ ನಂದಿಕೋಲಮಠ , ಮಹಾಂತೇಶ ಹಿರೇಮಠ, ಶಿವಪುತ್ರ ಹಿರೇಮಠ, ಸಂಜು ಹಿರೇಮಠ. ಶ್ರೀ ಮಠದ ಶಿಷ್ಯರು ಉಪಸ್ಥಿತರಿದ್ದರು.

error: Content is protected !!