ಕೂಗು ನಿಮ್ಮದು ಧ್ವನಿ ನಮ್ಮದು

ತುಂಬಾ ದಣಿವು ಆಯಾಸ ಆಗುತ್ತಿದೆಯೇ? ಹಾಗಿದ್ರೆ ಹೀಗೊಮ್ಮೆ ಮಾಡಿ ನೋಡಿ

ದಣಿವು: ದಣಿವು ಮನುಷ್ಯನ ಸ್ವಾಭಾವಿಕ ಅವಸ್ಥೆ. ಕೆಲಸ, ಕಾರ್ಯ ಮತ್ತು ಪರಿಶ್ರಮದಿಂದ ದಣಿವಿನ ಅನುಭವವಾಗುತ್ತದೆ. ಸೂಕ್ತ ವಿಶ್ರಾಂತಿ ಪಡೆದರೆ ದೂರವಾಗಿ, ದೇಹದಲ್ಲಿ ಪುನಃ ಸ್ಫೂರ್ತಿ ಉಂಟಾಗುತ್ತದೆ. ದಣಿವನ್ನು ದೂರವಾಗಿಸಲು ಅನೇಕರು ಕೃತ್ರಿಮ ಪೇಯ ಪದಾರ್ಥಗಳ ಸೇವನೆ ಮಾಡುತ್ತಾರೆ; ಇದು ಆರೋಗ್ಯದ ದೃಷ್ಟಿಯಿಂದ ಸೂಕ್ತವಾದ ಅಭ್ಯಾಸವಲ್ಲ. ಆದ್ದರಿಂದ ಅದನ್ನು ನಿವಾರಿಸಿಕೊಳ್ಳಲು ಪ್ರಾಕೃತಿಕ ಆಹಾರ ಪಾನೀಯಗಳನ್ನು ಅವಲಂಬಿಸಬೇಕು. ಜೇನುತುಪ್ಪ ಶ್ರೇಷ್ಠವಾದ ಪ್ರಾಕೃತಿಕ ಆಹಾರ ಪದಾರ್ಥ. ಇದನ್ನು ದಣಿವಿನ ನಿವಾರಣೆಗಾಗಿ ಈ ಕೆಳಕಂಡ ರೀತಿಯಲ್ಲಿ ಉಪಯೋಗಿಸಬಹುದು.

1) ಒಂದು ಲೋಟ ನೀರಿನಲ್ಲಿ ಎರಡು ಚಮಚ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ತಕ್ಷಣ ಸ್ಪೂರ್ತಿ ದೊರೆಯುತ್ತದೆ.

2)  ಗೋಧಿನುಚ್ಚಿನ ಅನ್ನದಲ್ಲಿ 4 ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.

3)  ಹಾಲಿನಲ್ಲಿ ಜೇನುತುಪ್ಪ ಸೇರಿಸಿ ಸೇವಿಸಿ.

4)  ಕೇವಲ ಎರಡು ಚಮಚ ಜೇನುತುಪ್ಪ ಕೂಡ ಸೇವಿಸಬಹುದು ಇದರಿಂದ ದಣಿವಾರುತ್ತದೆ.

5)  ಒಂದು ಲೋಟ ನೀರಿನಲ್ಲಿ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ನೀವು ದೂರವಾಗಬಹುದು.

error: Content is protected !!