ಮೈಸೂರು: ಮೈಸೂರು ಜಿಲ್ಲೆಯಲ್ಲಿ ಬೈಕ್ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್‌ನಲ್ಲಿದ್ದ ದಂಪತಿ ದುರ್ಮರಣಕ್ಕಿಡಾಗಿದ್ದಾರೆ.
ಹುಣಸೂರು ಕನಕ ಭವನ ಬಳಿ ಈ ಅಪಘಾತ ನಡೆದಿದ್ದು, ಮಂಜುನಾಥ ಬಡಾವಣೆಯ ನಿವಾಸಿ ರಾಜು (64), ಪತ್ನಿ ಸುನಂದಾ (55) ಮೃತ ದುರ್ದೈವಿಗಳಾಗಿದ್ದಾರೆ.
ಹುಣಸೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಗೂಡ್ಸ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ನಡೆಸಿ, ವಾಹನ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ.
ಅಪಘಾತವಾಗುತ್ತಿದ್ದಂತೆ ಪರಾರಿಯಾಗುತ್ತಿದ್ದ ವಾಹನವನ್ನು ಸಾರ್ವಜನಿಕರೇ ಹಿಂಬಾಲಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.