ಬೀದರ: ಔರಾದ ಹಾಗೂ ಕಮಲನಗರ ತಾಲೂಕಿನ ಸಮೀಪದ ಮದನೂರ ಗ್ರಾಮ ಸೇರಿದಂತೆ ಆ ಭಾಗದ ಗ್ರಾಮಗಳ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿ ಮೊಳಕೆಯೊಡೆದಿರುವ ಪೈರು ಜಿಂಕೆ ಮತ್ತು ಕೃಷ್ಣಮೃಗಗಳ ಪಾಲಾಗುತ್ತಿವೆ. ಬೆಳೆಯುತ್ತಿರುವ ಪೈರು ಕಣ್ಣೆದುರು ಹಾಳಾಗುತ್ತಿರುವುದು ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಮದನೂರ ಗ್ರಾಮ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಕಳೆದ ಹಲವು ದಿನಗಳಲ್ಲಿ ಕೃಷಿ ಭೂಮಿಗಳಿಗೆ ಲಗ್ಗೆ ಇಡುತ್ತಿರುವ ಜಿಂಕೆ ಮತ್ತು ಕೃಷ್ಣಮೃಗಗಳ ಹಿಂಡು ಅಪಾರ ಪ್ರಮಾಣದಲ್ಲಿ ಪೈರು ನಾಶಪಡಿಸುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮನಸೂರ. ಖತಗಾವ. ಚೆಂಡೆಸುರ. ಹಕ್ಯಳ. ಹಾಗೂ ಕೋಟಗ್ಯಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಜಿಂಕೆ ಹಾವಳಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ. ಈ ಬಾರಿ ವಿಪರೀತವಾಗಿದೆ. ಈ ಪ್ರದೇಶದ ಬಹುತೇಕ ಕೃಷಿ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮೊಳಕೆಯೊಡೆದಿರುವ ಬೆಳೆಗಳು ನಳನಳಿಸುತ್ತಿವೆ. ಇಂಥ ಸಂದರ್ಭದಲ್ಲಿ ಜಿಂಕೆಗಳು 100-150 ಹಿಂಡು, ಹಿಂಡಾಗಿ ಕೃಷಿ ಭೂಮಿಯಲ್ಲಿ ದಾಳಿ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಳೆ ಸರಿಯಾದ ಸಮಯಕ್ಕೆ ಯಾದ ಹಿನ್ನೆಲೆಯಲ್ಲಿ ಬಿತ್ತನೆ ಪೂರ್ಣಗೊಂಡ ಬಳಿಕ ಕೃಷಿ ಜಮೀನುಗಳನ್ನು ಹಗಲಿರುಳು ಕಾಯಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿನ ರೈತರದ್ದಾಗಿದೆ.
ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಾ ಕಷ್ಟಕ್ಕೆ ಧಾವಿಸಿ ರೈತನಾ ಬೆಳೆ ಊಳಿಸಿಕೋಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.