ಕಣ್ಣುಗಳ ಬಾಧೆಗಳು: ಕಣ್ಣು ಕೆಂಪಾಗುವುದು, ಕಂಜಕ್ಟೆವೈಟಿಸ್, ಕಣ್ಣುಕುಟಿಕೆ, ಕಣ್ಣೊಳಗೆ ಹೊರಗಡೆಯ ವಸ್ತುಗಳು ಬೀಳುವುದು, ಮುಂತಾದುವುಗಳು ಕಣ್ಣಿನ ಸಾಮಾನ್ಯ ತೊಂದರೆಗಳು. ಸಾಮಾನ್ಯ ನೆಗಡಿ, ಇನ್ ಫ್ಲುಯೆಂಜಾ, ಹೆಜ್ಜರ, ಮುಂತಾದವುಗಳಲ್ಲಿ ಕಣ್ಣುಗಳಿಗೆ ಬಾಧೆ ಉಂಟಾಗುತ್ತದೆ. ಸೋಂಕು ರೋಗಗಳಾದ ಡಿಫ್ಲೀರಿಯಾ, ಕುಷ್ಟರೋಗ, ಸಿಡುಬು ಮುಂತಾದವುಗಳು ಕಣ್ಣುಗಳ ರಕ್ಷಣೆ ಕುರಿತು ಸತತವಾಗಿ ಎಚ್ಚರಿಕೆ ವಹಿಸದಿದ್ದಲ್ಲಿ, ಕಣ್ಣಿನ ದೃಷ್ಟಿಗೆ ಶಾಶ್ವತ ಧಕ್ಕೆ ಬರುವಂತಹ ಬಳುವಳಿಗಳನ್ನು ಬಿಟ್ಟುಹೋಗುತ್ತದೆ. ಕಣ್ಣುಗಳನ್ನು ಕಾಡುವ ಇತರ ರೋಗಗಳೆಂದರೆ ರಾಸಾಯನಿಕ ಅಪಘಾತ ಯಾಂತ್ರಿಕ ಅಪಘಾತ ಮತ್ತು ರಕ್ತ ವಾಹಿನಿಯಿಂದಾಗಲೀ ಅಥವಾ ಹೊರಗಡೆಯಿಂದಾಗಲಿ ಸೊಂಕು.
1) ಕಣ್ಣು ರಸ್ತೆಯಲ್ಲಿ ವಿಪರೀತ ಕಡಿತ.
2) ಮಸುಕಾದ ಆಕೃತಿಗಳು, ಬೆಳಕಿನ ಸುತ್ತಲೂ ಕಾಮನಬಿಲ್ಲಿನಂತಹ ಪ್ರಭಾವಳಿಗಳು.
3) ಕಣ್ಣಿನ ಮುಂದೆ ತೇಲಾಡುವ ಕಣಗಳು.
4) ಕಣ್ಣುಗಳನ್ನು ಬಳಸಿ ಕೆಲಸ ಮಾಡಿ ದೊಡನೆ ಆಯಾಸ. ಕಣ್ಣುಗಳಲ್ಲಿ ಮತ್ತು ತಲೆಯಲ್ಲಿ ಬಳಲಿಕೆ.
5) ಓದಿನ ನಂತರ ತಲೆನೋವು ಅಥವಾ ಇತರ ಸಮೀಪದ ಕೆಲಸಗಳಿಂದ ನೋವು.
6) ಕಣ್ಣಿನಲ್ಲಿ ಇರಿಸು-ಮುರಿಸು, ಬೆಳಕಿಗೆ ಕಣ್ಣು ಕುಕ್ಕಿದಂತೆ ಅಥವಾ ಕಣ್ಣುಕತ್ತಲೆ ಯಾದಂತೆ ಅನುಭವ.
7) ಕಣ್ಣಿನಿಂದ ವ್ಯತ್ಯಾಸಗೊಂಡ ವಿಸರ್ಜನೆ. ಉದಾಹರಣೆಗೆ, ಲೋಳೆಯಂತಹ ವ್ಯತ್ಯಾಸಗೊಂಡ ಪಿಸುರಿನಿಂದ ಕೂಡಿರುವ ಲೋಳೆಯ ವಿಸರ್ಜನೆ ಅಥವಾ ರಕ್ತದಿಂದ ಕೂಡಿರುವ ವಿಸರ್ಜನೆ.
8) ಕಣ್ಣಿನಲ್ಲಿ ಅಥವಾ ತಲೆಯಲ್ಲಿ ನೋವು; ನೋವು ಕಿವಿಗಳಿಗೂ ಮತ್ತು ಮೇಲುದವಡೆಯ ಹಲ್ಲುಗಳಿಗೂ ಹರಡುವಿಕೆ.