ಕೂಗು ನಿಮ್ಮದು ಧ್ವನಿ ನಮ್ಮದು

ಪರೀಕ್ಷೆಯಲ್ಲಿ ಒಂದು ನೂರಕ್ಕೆ ೮೯ ಅಂಕ ಪಡೆದ ೧೦೪ರ ವೃದ್ಧೆಯ ಸ್ಫೂರ್ತಿದಾಯಕ ಕಥೆ

ತಿರುವನಂತಪುರ: ಕೇರಳದ ವೃದ್ಧೆಯೊಬ್ಬಳು ಪರೀಕ್ಷೆ ಬರೆದು ೧೦೦ಕ್ಕೆ ೮೯ ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ. ಮನಸ್ಸಿದ್ರೆ ಏನು ಬೇಕಾದ್ರು ಮಾಡಬಹುದು ಎಂಬುವುದಕ್ಕೆ ಈ ಕಥೆ ಸಾಕ್ಷಿಯಾಗಿದೆ. ಕೊಟ್ಟಾಯಂನ ಅಯರ್ಕುನ್ನಂ ಪಂಚಾಯತ್‍ನಲ್ಲಿ ‘ಸಾಕ್ಷರತಾ’ ಪರೀಕ್ಷೆಯನ್ನು ನಡೆಸಲಾಯಿತು. ಈ ಪರೀಕ್ಷೆಗೆ ೧೦೪ ವರ್ಷದ ಕುಟ್ಟಿಯಮ್ಮ ಹಾಜರಾಗಿ ಪರೀಕ್ಷೆ ಬರೆದು ೧೦೦ ಅಂಕಗಳಿಗೆ ೮೯ ಅಂಕಗಳನ್ನು ಗಳಿಸಿದ್ದಾರೆ.

ಈ ಕುರಿತಂತೆ ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್‍ಕುಟ್ಟಿ ತಮ್ಮ ಟ್ವಿಟ್ಟರ್‍ನಲ್ಲಿ ಕುಟ್ಟಿಯಮ್ಮನ ಫೋಟೋವನ್ನು ಪೊಸ್ಟ್ ಮಾಡಿದ್ದಾದ್ದು, ೧೦೪ ವರ್ಷದ ಕೊಟ್ಟಾಯಂನ ಕುಟ್ಟಿಯಮ್ಮ ಕೇರಳ ರಾಜ್ಯ ಸಾಕ್ಷರತಾ ಮಿಷನ್‍ನ ಪರೀಕ್ಷೆಯಲ್ಲಿ ೮೯/೧೦೦ ಅಂಕಗಳನ್ನು ಗಳಿಸಿದ್ರು. ಜ್ಞಾನದ ಜಗತ್ತನ್ನು ಪ್ರವೇಶಿಸಲು ವಯಸ್ಸು ಅಡ್ಡಿಯಾಗುವುದಿಲ್ಲ. ಅತ್ಯಂತ ಗೌರವ ಹಾಗೂ ಪ್ರೀತಿಯಿಂದ, ಕುಟ್ಟಿಯಮ್ಮ ಜೊತೆಗೆ ಹೊಸದಾಗಿ ಕಲಿಯುವವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ರು.

ಕುಟ್ಟಿಯಮ್ಮ ತಮ್ಮ ಜೀವನದಲ್ಲಿ ಶಾಲೆಗೆ ಹೋಗದೇ ಇರುವುದರಿಂದ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದ್ರೆ, ಸಾಕ್ಷರತಾ ಪ್ರೇರಕ ರೆಹನಾ ಕಾರ್ಯಕ್ರಮದ ಮೂಲಕ ಬರೆಯುವುದನ್ನು ಕಲಿತ್ರು. ಪ್ರತಿದಿನ ಮುಂಜಾನೆ ಹಾಗೂ ಸಂಜೆ ತಮ್ಮ ಮನೆಯಲ್ಲಿಯೇ ತರಗತಿಗೆ ಹಾಜರಾಗುತ್ತಿದ್ರು. ತರಗತಿಗಳಿಗೆ ಹಾಜರಾದ ಬಳಿಕ ಕುಟ್ಟಿಯಮ್ಮ ೪ನೇ ತರಗತಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾದ್ರು. ೧೦೪ ವರ್ಷ ವಯಸ್ಸಿನ ಕುಟ್ಟಿಯಮ್ಮಾಗೆ ಕಿವಿ ಕೇಳಿಸುವುದಿಲ್ಲ, ಆದ್ದರಿಂದ ಪರೀಕ್ಷೆ ವೇಳೆ ಗಟ್ಟಿಯಾಗಿ ಮಾತನಾಡುವಂತೆ ಇನ್ವಿಜಿಲೇಟರ್‍ಗಳಿಗೆ ಮನವಿ ಮಾಡಿದ್ರು. ಸದ್ಯ ಕುಟ್ಟಿಯಮ್ಮ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

error: Content is protected !!