ಹುಬ್ಬಳ್ಳಿ: ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಮಾಡಲು ಯತ್ನಿಸಿದ್ದ ಐವರನ್ನು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. ವಿಜಯ್ ಕುಂಬಾರ್, ಸಾಗರ್ ಪುರಾಣಿಕ್, ವಿನಾಯಕ್ ನಾಮದೇವ, ದಾನಜೀ ಪಾಟೀಲ್ ಹಾಗೂ ಶಹಜಾನ್ ಜಮಾದಾರ ಬಂಧಿತ ಆರೋಪಿಗಳು. ಬಂಧಿತರು ಕೊಲ್ಹಾಪೂರ ಮೂಲದವರು ಎನ್ನಲಾಗುತ್ತಿದೆ.
ಸದ್ಯ ಬಂಧಿತರಿಂದ 348, 350 ಗ್ರಾಂಗಳ ಎರಡು ಬೇರೆ ಬೇರೆ ತೂಕದ ಆನೆದಂತದಿಂದ ತಯಾರಿಸಿದ ಅಲಂಕಾರಿಕ ಪೆಟ್ಟಿಗೆ, 112 ಗ್ರಾಮದ ಕೆಂಪುಹರಳಿನ ಖಡ್ಗ ಮತ್ತು 279 ಗ್ರಾಂ ತೂಕದ ಮೊಟ್ಟೆಯಾಕಾರದ ಪೆಟ್ಟಿಗೆ ವಶಕ್ಕೆ ಪಡೆಯಲಾಗಿದೆ. ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಮಾಡಲು ಗ್ಯಾಂಗ್ ಹುಬ್ಬಳ್ಳಿಗೆ ಬಂದಿದ್ದರು. ಈ ವೇಳೆ ಹುಬ್ಬಳ್ಳಿ ಸಿಐಡಿ ಅರಣ್ಯ ಘಟಕದ ಪೊಲೀಸ ಅಧಿಕಾರಿಗಳಿಂದ ವಶಕ್ಕೆ ಪಡೆದಿದ್ದು, ಐವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.